ನವದೆಹಲಿ : ರಷ್ಯಾ ಮತ್ತು ಉಕ್ರೇನ್ ಯುದ್ಧ (ukraine crisis ತಾರಕಕ್ಕೇರಿದೆ. ಈ ನಡುವಲ್ಲೇ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವ ಕಾರ್ಯಾಚರಣೆಯನ್ನು ಕೇಂದ್ರ ಸರಕಾರ ಮುಂದುವರಿಸಿದೆ. ಈಗಾಗಲೇ ಕೇಂದ್ರ ಸಚಿವರು ಉಕ್ರೇನ್ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಮೊಕ್ಕಾಂ ಹೂಡಿ ಏರ್‌ಲಿಫ್ಟ್ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಈ ನಡುವಲ್ಲೇ ಕಿವ್‌ನಿಂದ ಭಾರತಕ್ಕೆ ವಾಪಾಸಾಗುತ್ತಿದ್ದ ವೇಳೆಯಲ್ಲಿ ಭಾರತೀಯ ವಿದ್ಯಾರ್ಥಿಯೋರ್ವ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಕುರಿತು ಕೇಂದ್ರ ಸಚಿವ ವಿ.ಕೆ.ಸಿಂಗ್ ಮಾಹಿತಿ ನೀಡಿದ್ದಾರೆ.
ಪೋಲೆಂಡ್‌ನಲ್ಲಿರುವ ವಿ.ಕೆ.ಸಿಂಗ್ ಅವರು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್‌ಎನ್‌ಐ ಜೊತೆಗೆ ಮಾತನಾಡಿದ್ದು, ಕೀವ್‌ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿದ್ದು, ಆತ ಮಾರ್ಗ ಮಧ್ಯದಲ್ಲಿ ವಾಪಸ್ಸಾಗಿದ್ದಾರೆ. ಅವರನ್ನು ಕೀವ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ವಿಕೆ ಸಿಂಗ್ ಅವರು ಹೇಳಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಕಳೆದ ಒಂದು ದಿನದ ಹಿಂದೆಯಷ್ಟೇ ಭಾರತೀಯರು ಶೀಘ್ರದಲ್ಲಿಯೇ ಕೀವ್ ತೊರೆಯುವಂತೆ ಮಾಹಿತಿಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಉಕ್ರೇನ್ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಕೀವ್‌ನಿಂದ ವಾಪಾಸಾಗುತ್ತಿದ್ದ ವೇಳೆಯಲ್ಲ ದುರ್ಘಟನೆ ಸಂಭವಿಸಿದೆ.
I received info today that a student coming from Kyiv got shot and was taken back midway. We're trying for maximum evacuation in minimum loss: MoS Civil Aviation Gen (Retd) VK Singh, in Poland#RussiaUkraine pic.twitter.com/cggVEsqfEj
— ANI (@ANI) March 4, 2022
ಕೇಂದ್ರ ಸರಕಾರ ಆಪರೇಷನ್ ಗಂಗಾ ಹೆಸರಲ್ಲಿ ಏರ್‌ಲಿಫ್ಟ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಉಕ್ರೇನ್‌ನಿಂದ ಈಗಾಗಲೇ 17,000 ಮಂದಿ ಭಾರತೀಯರನ್ನು ಸ್ವದೇಶಕ್ಕೆ ಶಿಫ್ಟ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಏರ್ ಪೋರ್ಸ್ ವಿಮಾನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಅಲ್ಲದೇ ಏರ್ ಇಂಡಿಯಾ, ಇಂಡಿಗೋ ಸೇರಿದಂತೆ ಹಲವು ಖಾಸಗಿ ವಿಮಾನಯಾನ ಕಂಪೆನಿಗಳು ಕೈ ಜೋಡಿಸಿವೆ. ಅಲ್ಲದೇ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ ಅವರು ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಇದನ್ನು ಓದಿ : Vacuum Bomb : ವ್ಯಾಕ್ಯೂಮ್ ಬಾಂಬ್ ಎಂದರೇನು? ರಷ್ಯಾ ಉಕ್ರೇನ್ ಮೇಲೆ ಈ ಬಾಂಬ್ ಪ್ರಯೋಗಿಸಿದೆಯೇ?
ಇದನ್ನೂ ಓದಿ : ತಕ್ಷಣ ಖಾರ್ಕಿವ್ ತೊರೆಯಲು ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿ ಸೂಚನೆ
(Ukraine Crisis Indian student coming from kyiv got shot Vk Singh in Poland )