ಅಮೆರಿಕ : same-sex marriage : ಮಹಿಳೆಯರಿಗೆ ಗರ್ಭಪಾತವನ್ನು ಮಾಡಿಸಿಕೊಳ್ಳುವ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿರುವ ಅಮೆರಿಕ ಸುಪ್ರೀಂಕೋರ್ಟ್ ಸಲಿಂಗ ಕಾಮದ ವಿವಾಹದ ಮಾನ್ಯತೆಯನ್ನೂ ರದ್ದುಗೊಳಿಸಬಹುದು ಎಂಬ ಆತಂಕದ ನಡುವೆಯೇ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಗಳವಾರದಂದು ಸಲಿಂಗ ವಿವಾಹದ ಸಮಾನತೆಯನ್ನು ರಕ್ಷಿಸುವ ಮಸೂದೆಗೆ ಹಸಿರು ನಿಶಾನೆ ತೋರಿದೆ.
ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆ್ಯಕ್ಟ್ನ ಅಡಿಯಲ್ಲಿ ಸಲಿಂಗ ಕಾಮ ವಿವಾಹದ ಮಾನ್ಯತೆಯನ್ನು 157 ಮತಗಳ ಮೂಲಕ ಅಂಗೀಕರಿಸಲಾಗಿದೆ. ಸಲಿಂಗಕಾಮ ವಿವಾಹಕ್ಕೆ 47 ರಿಪಬ್ಲಿಕನ್ ನಾಯಕರು ಬೆಂಬಲ ಸೂಚಿಸಿದ್ದಾರೆ. ಒಟ್ಟು 100 ಸದಸ್ಯರಿರುವ ಸೆನೆಟ್ನಲ್ಲಿ 50 ಸ್ಥಾನಗಳನ್ನು ಡೆಮೋಕ್ರಾಟ್ಗಳು ಹೊಂದಿದ್ದಾರೆ. ಹೀಗಾಗಿ ಈ ಮಸೂದೆ ಅಂಗಿಕಾರಗೊಳ್ಳಲು ಸೆನೆಟ್ನಲ್ಲಿ 10 ಮಂದಿ ರಿಪಬ್ಲಿಕನ್ ನಾಯಕರ ಮತಗಳ ಅವಶ್ಯಕತೆ ಇದೆ.
ಈ ವಿಚಾರವಾಗಿ ನಡೆದ ಚರ್ಚೆಯಲ್ಲಿ ಫೆಡರಲ್ ಕಾನೂನಿನ ಅಡಿಯಲ್ಲಿ ಸಲಿಂಗ ಕಾಮಿ ವಿವಾಹದ ಸಮಾನತೆಯನ್ನು ಪ್ರತಿಪಾದಿಸುತ್ತಾ ಡೆಮೋಕ್ರಾಟ್ಗಳು ವಾದವನ್ನು ಮಂಡಿಸಿದರು. ಆದರೆ ರಿಪಬ್ಲಿಕ್ ನಾಯಕರು ಸಲಿಂಗಕಾಮಿ ವಿವಾಹಕ್ಕೆ ಬಹಿರಂಗವಾಗಿ ತಿರಸ್ಕಾರವನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಗಳಿದ್ದು ಇಂತಹ ಸಂದರ್ಭದಲ್ಲಿ ಈ ಮಸೂದೆಯ ಬಗ್ಗೆ ಚರ್ಚೆ ಮಾಡುವುದು ಅನಗತ್ಯವಾಗಿದೆ ಎಂದು ರಿಪಬ್ಲಿಕನ್ ನಾಯಕರು ಅಭಿಪ್ರಾಯ ಪಟ್ಟಿದ್ದರು.
ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್ ಎಂಬ ಮಸೂದೆಯು ಅಮೆರಿಕದಲ್ಲಿ ಅಂತಾರಾಜ್ಯ ವಿವಾಹಗಳಿಗೆ ಮಾನ್ಯತೆ ನೀಡುವುದರ ಜೊತೆಯಲ್ಲಿ LGBTQ ಸಮುದಾಯದ ವಿವಾಹಗಳಿಗೂ ರಕ್ಷಣೆಯನ್ನು ನೀಡುತ್ತದೆ. ಅಲ್ಲದೇ ಈ ಮಸೂದೆಯು 1996 ಮದುವೆ ರಕ್ಷಣಾ ಕಾಯ್ದೆಯನ್ನು ಅಮಾನ್ಯಗೊಳಿಸುತ್ತದೆ. ಏಕೆಂದರೆ 1996ರ ಮದುವೆ ರಕ್ಷಣಾ ಕಾಯಿದೆಯು ಮದುವೆ ಎಂದರೆ ಅದು ಪುರುಷ ಹಾಗೂ ಮಹಿಳೆ ನಡುವಿನ ಸಂಬಂಧ ಎಂದು ವ್ಯಾಖ್ಯಾನವನ್ನು ಹೊಂದಿದೆ.
ಇದನ್ನು ಓದಿ : dangerous apps : ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ : ನಿಮ್ಮ ಹಣವನ್ನು ಕದಿಯುತ್ತವೆ ಈ ಆ್ಯಪ್ಗಳು
ಇದನ್ನೂ ಓದಿ : I love Virat .. ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಯಾಕೆ ಹೀಗಂದ್ರು ?
ಇದನ್ನೂ ಓದಿ : dangerous apps : ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ : ನಿಮ್ಮ ಹಣವನ್ನು ಕದಿಯುತ್ತವೆ ಈ ಆ್ಯಪ್ಗಳು
ಇದನ್ನೂ ಓದಿ : Monkey Pox : ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆ; ದಕ್ಷಿಣ ಕನ್ನಡದಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ
US: House passes same-sex marriage bill in retort to high court