ಸೋಮವಾರ, ಏಪ್ರಿಲ್ 28, 2025
HomeWorldಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಉಗ್ರ ದಾಳಿ ಸಾಧ್ಯತೆ : ಅಮೇರಿಕ ಎಚ್ಚರಿಕೆ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಉಗ್ರ ದಾಳಿ ಸಾಧ್ಯತೆ : ಅಮೇರಿಕ ಎಚ್ಚರಿಕೆ

- Advertisement -

ಕಾಬೂಲ್‌ : ಇಸಿಸ್-ಕೆ ಉಗ್ರರು ಮತ್ತೆ 24 ರಿಂದ 36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಉಗ್ರ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಕಾಬೂಲ್ ವಿಮಾನ ನಿಲ್ದಾಣಕ್ಕೆ ದಾಳಿ ಭೀತಿ ಇರುವುದು ಖಚಿತ ಮತ್ತು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

ವಿಮಾನ ನಿಲ್ದಾಣದ ಸುತ್ತ ಇರುವ ಅಮೆರಿಕ ನಾಗರಿಕರು ತಕ್ಷಣವೇ ಜಾಗ ಖಾಲಿ ಮಾಡಬೇಕು ಎಂದು ಕಾಬೂಲ್‌ನಲ್ಲಿರುವ ಅಮೆರಿಕ ದೂತವಾಸ ಕಚೇರಿಯೂ ಎಚ್ಚರಿಕೆ ನೀಡಿದೆ. ಅಲ್ಲದೆ ಕೂಡಲೇ ಜನರು ಆ ಪ್ರದೇಶ ತೊರೆಯುವುದು ಒಳ್ಳೆಯದು. ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರುವಂತೆ ಅಮೆರಿಕ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ‘ಆಫ್ಘಾನಿಸ್ತಾನದ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿ ಮುಂದುವರಿದಿದೆ. ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಹೆಚ್ಚಾಗಿದೆ. ಮುಂದಿನ 24-36 ಗಂಟೆಗಳಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಮ್ಮ ಕಮಾಂಡರ್‌ಗಳು ನನಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ನಮ್ಮ ಎರಡನೇ ಮನೆ ಎಂದ ತಾಲಿಬಾನ್ !

ನಿನ್ನೆ ಕೂಡ ಅಮೆರಿಕ ರಾಯಭಾರ ಕಚೇರಿ ಇಂತಹುದೇ ಎಚ್ಚರಿಕೆ ನೀಡಿತ್ತು. ಕಾಬೂಲ್ ವಿಮಾನ ನಿಲ್ದಾಣದ ಅಬ್ಬೆ ಗೇಟ್, ಈಸ್ಟ್ ಗೇಟ್ ಅಥವಾ ನಾರ್ತ್ ಗೇಟ್ ನಲ್ಲಿರುವ ಅಮೆರಿಕ ನಾಗರಿಕರು ಈಗಲೇ ತುರ್ತಾಗಿ ಹೊರಡಬೇಕು ಎಂದು ಸೂಚಿಸಿತ್ತು.

ಈ ಬಗ್ಗೆ ಮಾತನಾಡಿದ್ದ ಅಮೆರಿಕದ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆ ಇಸಿಸ್ ಕೆಯಿಂದ ವಿಮಾನ ನಿಲ್ದಾಣದಲ್ಲಿ “ನಿರ್ದಿಷ್ಟ” ಮತ್ತು “ನಂಬಲರ್ಹ” ಸಂಭಾವ್ಯ ದಾಳಿ ಸಂಚನ್ನು ಟ್ರ್ಯಾಕ್ ಮಾಡಲಾಗಿದೆ. ಉಗ್ರರು ಕನಿಷ್ಠ 12ಕ್ಕೂ ಹೆಚ್ಚು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ದಾಳಿಗಳಿಗೆ ಜನಾಂಗೀಯ ಅಲ್ಪಸಂಖ್ಯಾತರು ಮತ್ತು ಇತರೆ ದೇಶಗಳ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಉಗ್ರ ಸಂಘಟನೆಗಳಿಂದ ಮೂರನೇ ಬಾರಿ ಬಾಂಬ್ ಬ್ಲಾಸ್ಟ್‌ ; 40 ಕ್ಕೂ ಅಧಿಕ ಮಂದಿ ಸಾವು

RELATED ARTICLES

Most Popular