ಅಮೆರಿಕ : Pregnant:ಮಗು ಜನಿಸುವ ಮೊದಲಿನ ಒಂಬತ್ತು ತಿಂಗಳ ಗರ್ಭಾವಸ್ಥೆಯ ಸಮಯ ದಂಪತಿಗೆ ಅತ್ಯಂತ ಪ್ರಮುಖವಾಗಿರುತ್ತದೆ, ಈ ಅಮೂಲ್ಯ ಕ್ಷಣವನ್ನು ದಂಪತಿ ಸಂಭ್ರಮಿಸುತ್ತಾರೆ. ಇನ್ನೇನು ಕೆಲವೇ ತಿಂಗಳಲ್ಲಿ ನಾವು ಪೋಷಕರಾಗಲಿದ್ದೇವೆ ಎಂಬುದನ್ನು ಎಂಜಾಯ್ ಮಾಡುವುದೇ ಒಂದು ವಿಶೇಷ. ಆದರೆ ಅಮೆರಿಕದಲ್ಲಿ ನಡೆದ ಘಟನೆಯೊಂದರಲ್ಲಿ ದಂಪತಿಗೆ ತಾವು ಮಗುವಿನ ಪೋಷಕರಾಗುತ್ತಿದ್ದೇವೆ ಎಂಬ ವಿಚಾರ ತಿಳಿದ ಕೇವಲ 48 ಗಂಟೆಗಳಲ್ಲಿ ಮಹಿಳೆಯು ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದಾಳೆ.
ಅಮೆರಿಕದ ಒಮಾಹಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ 23 ವರ್ಷದ ಪೇಟನ್ ಸ್ಟೋವರ್ ಎಂಬವರಿಗೆ ಆಯಾಸ ಸೇರಿದಂತೆ ಅನೇಕ ರೋಗಲಕ್ಷಣಗಳನ್ನು ಅನುಭವಿಸಿದ್ದರು. ಇದಾದ ಬಳಿಕ ಅವರು ವೈದ್ಯರನ್ನೂ ಭೇಟಿ ಮಾಡಿದ್ದರು. ಆದರೆ ವೈದ್ಯರು ಕೆಲಸದ ಒತ್ತಡದಿಂದ ಈ ರೀತಿ ಆಗ್ತಿದೆ ಎಂದು ಹೇಳಿದ್ದಾರೆ. ಆದರೆ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗಿದ್ದು ಗಮನಕ್ಕೆ ಬಂದ ಬಳಿಕ ಅವರು ಬೇರೆ ವೈದ್ಯರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ತಾನು ಗರ್ಭಿಣಿ ಎಂಭ ವಿಚಾರ ಸ್ಟೋವರ್ಗೆ ಮನವರಿಕೆಯಾಗಿದೆ.
ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆಗಳನ್ನು ಮಾಡಿದಾಗ ನಾನು ಖಂಡಿತವಾಗಿಯೂ ಗರ್ಭಿಣಿ ಎಂದು ತಿಳಿದು ಬಂದಿದೆ. ಆದರೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದ ಸಂದರ್ಭದಲ್ಲಿ ಪೇಟನ್ ಯಕೃತ್ತು ಹಾಗೂ ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ವಿಚಾರ ವೈದ್ಯರ ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೇಟನ್ ಬಾಯ್ಫ್ರೆಂಡ್ ಟವಿಸ್ ಕೋಸ್ಟರ್ಸ್ ಮಾಹಿತಿ ನೀಡಿದ್ದಾರೆ.
ಸ್ಟೋವರ್ಗೆ ವೈದ್ಯಕೀಯ ಸವಾಲುಗಳು ಅನೇಕ ಇದ್ದ ಹಿನ್ನೆಲೆಯಲ್ಲಿ ವೈದ್ಯರು ಈ ಗರ್ಭವು ನಿಮ್ಮ ಆರೋಗ್ಯದ ಮೇಲೆ ಗಂಭೀರ ತೊಡಕನ್ನು ಉಂಟು ಮಾಡಬಹುದು ಎಂದು ತಿಳಿಸಿದ್ದಾರೆ.ಅಧಿಕ ರಕ್ತದೊತ್ತಡದಿಂದಾಗಿ ದೇಹದ ಅಂಗ ವ್ಯವಸ್ಥೆಗೆ ಹಾನಿಯುಂಟಾಗಬಹುದು ಎಂದು ತಿಳಿದ ತಕ್ಷಣ ವೈದ್ಯರು ಸಿ ಸೆಕ್ಷನ್ ಮೂಲಕ ಹೆರಿಗೆ ಮಾಡಿಸಿದ್ದು ಸ್ಟೋವರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
US Woman, 23, Finds Out She Is Pregnant. She Gives Birth 2 Days Later