ದುಬೈ : ಸಾಮಾನ್ಯವಾಗಿ ಪತಿ, ಪತ್ನಿಯ ಮೊಬೈಲ್ ನೋಡುವುದು ಸಾಮಾನ್ಯ. ಆದ್ರೆ ಪತಿಯ ಮೊಬೈಲ್ ನೋಡಿದ ತಪ್ಪಿಗೆ ಪತ್ನಿಯೋರ್ವಳಿಗೆ ನ್ಯಾಯಾಲಯ 1 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ದುಬೈನಲ್ಲಿ ನಡೆದಿದೆ.
ಪತ್ನಿ ತನ್ನ ಮೊಬೈಲ್ ಪರಿಶೀಲನೆಯನ್ನು ಮಾಡಿ ಪ್ರೈವಸಿಗೆ ಧಕ್ಕೆ ತಂದಿದ್ದಾಳೆ. ತನ್ನ ಮೊಬೈಲ್ ನಲ್ಲಿದ್ದ ಪೋಟೋ, ರೆಕಾರ್ಡಿಂಗ್ಸ್, ವಿಡಿಯೋ ಹಾಗೂ ದಾಖಲೆಗಳನ್ನು ತನ್ನ ಮನೆಯವರಿಗೆ ಕಳುಹಿಸಿದ್ದಾಳೆ. ಈ ಮೂಲಕ ತನ್ನನ್ನ ಅವಮಾನಿಸಿದ್ದಾಳೆ ಎಂದು ಪತಿ ರಾಲ್ ಆಲ್ ಖೈಮಾ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ.
ಪ್ರಕರಣದ ಕುರಿತು ವಿಚಾರಣೆಯನ್ನು ನಡೆಸಿದ ನ್ಯಾಯಾಲಯ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಆದರೆ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ಪತ್ನಿ ಸಂಬಳವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆಯ ಪರ ವಕಾಲತ್ತು ವಹಿಸಿದ್ದ ವಕೀಲರೇ ನ್ಯಾಯಾಲಯದ ಶುಲ್ಕ ಪಾವತಿ ಮಾಡಿದ್ದಾರೆ.