ಭಾನುವಾರ, ಏಪ್ರಿಲ್ 27, 2025
HomeWorldತಾಲಿಬಾನಿಗಳನ್ನು ಹೊಗಳಿ ಅಟ್ಟಕೇರಿಸಿದ ಪಾಕ್ ಕ್ರಿಕೆಟಿಗ ಅಫ್ರಿದಿ

ತಾಲಿಬಾನಿಗಳನ್ನು ಹೊಗಳಿ ಅಟ್ಟಕೇರಿಸಿದ ಪಾಕ್ ಕ್ರಿಕೆಟಿಗ ಅಫ್ರಿದಿ

- Advertisement -

ನವದೆಹಲಿ : ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಈಗ ಎಲ್ಲರಿಗೂ ತಿಳಿದಿದೆ. ಅಲ್ಲಿ ನಡೆಯುತ್ತಿರುವ ಹಿಂಸೆ, ಅತ್ಯಾಚಾರಗಳು ಎಂತವರ ಮನಸ್ಸನ್ನು ಕರಗಿಸುತ್ತೆ. ಇದಕ್ಕೆಲ್ಲಾ ಕಾರಣರಾದ ತಾಲಿಬಾನಿಗಳನ್ನು ಪಾಕ್‌ ಕ್ರಿಕೆಟಿಗ ಅಫ್ರಿದಿ ಹೊಗಳಿದ್ದಾರೆ. ಅಲ್ಲದೇ ತಾಲಿಬಾನ್‌ ಉಗ್ರರ ಪರವಾಗಿ ಹೇಳಿಕೆಯನ್ನು ನೀಡಿದ್ದಾರೆ.

ಅಫ್ಘಾನಿಸ್ತಾನವನ್ನು ತಮ್ಮ ಕೈವಶ ಮಾಡಿಕೊಂಡಿರುವ ತಾಲಿಬಾನ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ​ ಶಾಹಿದ್ ಅಫ್ರಿದಿ ಹಾಡಿಹೊಗಳಿದ್ದಾರೆ. ತಾಲಿಬಾನಿಗರು ಈಗ ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ, ಬದಲಾವಣೆಯೊಂದಿಗೆ ಬಂದಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ. ತಾಲಿಬಾನಿಗರು ಈಗ ಮಹಿಳೆಯರಿಗೆ ಹೊರಗೆ ಹೋಗಲು ಅನುಮತಿ ನೀಡುತ್ತಿದ್ದಾರೆ. ಅವರು ಕ್ರಿಕೆಟ್ ಅನ್ನೂ ಇಷ್ಟಪಡುತ್ತಾರೆ ಮತ್ತು ಬೆಂಬಲಿಸುತ್ತಿದ್ದಾರೆ. ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ’ ಎಂದು ಅಫ್ರಿದಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು ! ಕಾರಣ ಕೇಳಿದ್ರೆ ಶಾಕ್‌ ಆಗುತ್ತೀರಿ !

ಅಲ್ಲದೇ, ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ ಮಾತನಾಡಿದ ಇವರು, ಇದು ನನ್ನ ಕೊನೆಯ ಕ್ರಿಕೆಟ್ ಪಂದ್ಯಾವಳಿಯಾಗಲಿದೆ ಎಂದಿದ್ದಾರೆ. ಕ್ವೆಟ್ಟಾ ಗ್ಲಾಡಿಯೇಟರ್ಸ್‌ಗಾಗಿ ಆಡಲು ನಾನು ಇಷ್ಟಪಡುತ್ತೇನೆ ಎಂದಿರುವ ಅವರು, ಸೀಮಿತ ಕ್ರಿಕೆಟ್ ಆಡುತ್ತಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಯೋ ಬಬಲ್ ಒಳಗೆ ಅಭ್ಯಾಸ ಮಾಡುವುದು ಆಟಗಾರರಿಗೆ ತುಂಬಾ ಕಷ್ಟ ಎಂದು ಹೇಳಿದ್ದಾರೆ. ಆದ್ರೆ ಕ್ರಿಕೆಟಿಗ ಅಫ್ರಿದಿ ನೀಡಿರುವ ಹೇಳಿಕೆಯ ಬಗ್ಗೆ ಸಾಕಷ್ಟು ಟ್ರೋಲ್ ಗಳಾಗಿವೆ.

ಇದನ್ನೂ ಓದಿ: Afghanistan : 100 ದೇಶಗಳೊಂದಿಗೆ ತಾಲಿಬಾನ್ ಒಪ್ಪಂದ !

( Pakistan cricketer Afridi gave supportive statement to tailban )

RELATED ARTICLES

Most Popular