ಸೋಮವಾರ, ಏಪ್ರಿಲ್ 28, 2025
HomeWorldAl Qaeda Leader Killed : ಡ್ರೋನ್ ದಾಳಿಯಿಂದ ಅಲ್​ ಖೈದಾ ಹಿರಿಯ ನಾಯಕನ ಹತ್ಯೆ

Al Qaeda Leader Killed : ಡ್ರೋನ್ ದಾಳಿಯಿಂದ ಅಲ್​ ಖೈದಾ ಹಿರಿಯ ನಾಯಕನ ಹತ್ಯೆ

- Advertisement -

ಸಿರಿಯಾ : ಅಮೇರಿಕ ಸೇನೆ ಸಿರಿಯಾದ ಅಲ್ ಖೈದಾ ತಂಡದ ಮೇಲೆ ಡ್ರೋನ್ ದಾಳಿ ನಡೆಸಿದೆ. ಸಿರಿಯಾದಲ್ಲಿ ಶುಕ್ರವಾರ ಅಲ್ ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್-ಮಾತರ್ ಅವರನ್ನು ಅಮೆರಿಕ ಮಿಲಿಟರಿ ಸೇನೆ ಡ್ರೋನ್ ದಾಳಿಯ ಮೂಲಕ ಹತ್ಯೆ ಮಾಡಿದೆ ಎಂದು ಅಮೇರಿಕ ಮಿಲಿಟರಿ ಹೇಳಿಕೆ ನೀಡಿದೆ.

ಆಲ್‌ ಖೈದಾ ಸಂಘಟನೆಯಿಂದ ಅಲ್ಲಿನ ಯು ಎಸ್‌ ನಾಗರೀಕರಿಗೆ ಬಹಳ ತೊಂದರೆ ಯಾಗುತ್ತಿತ್ತು. ಅಲ್ಲದೇ ಆಲ್‌ ಖೈದಾ ಸಂಘಟನೆ ಯು ಎಸ್ ನಾಗರೀಕರಿಗೆ ಹಾಗೂ ಯು ಎಸ್ ಪಾಲುದಾರರಿಗೆ ಮತ್ತು ಮುಗ್ಧ ನಾಗರಿಕರಿಗೆ ಬೆದರಿಕೆ ಒಡ್ಡುವ ಕೃತ್ಯವನ್ನು ಮಾಡುತ್ತಿತ್ತು.

ಇದನ್ನೂ ಓದಿ: China Lockdown : ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ : ಶಾಲೆಗಳು ಬಂದ್‌, ವಿಮಾನ ಹಾರಾಟ ಸ್ಥಗಿತ

ಆಲ್‌ ಖೈದಾ ಸಂಘಟನೆ ಬೆದರಿಕೆ ಒಡ್ಡುವ ಕೃತ್ಯದ ಜೊತೆಗೆ ಜಾಗತಿಕ ದಾಳಿಗಳಿಗೆ ಮತ್ತಷ್ಟು ಸಂಚು ರೂಪಿಸುವ ಹಾಗೂ ದಾಳಿಗಳನ್ನು ನಡೆಸುವ ಸಂಚು ರೂಪಿಸುತ್ತಿತ್ತು. ಆದ್ದರಿಂದ ಈ ಭಯೋತ್ಪಾದಕ ಸಂಘಟನೆಯ ನಾಯಕನ್ನು ಹತ್ಯೆ ಮಾಡಲಾಗಿದೆ ಎಂದು ಯುಎಸ್ ಆರ್ಮಿ ಮೇಜರ್ ಜಾನ್ ರಿಗ್ಸ್ಬೀ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Kandahar Blast : ಅಫ್ಘಾನಿಸ್ತಾನದ ಕಂದಹಾರ್ ಮಸೀದಿಯಲ್ಲಿ ಸ್ಫೋಟ : 32 ಸಾವು, 53 ಮಂದಿಗೆ ಗಾಯ

(Al Qaeda senior leader killed by drone strike)

RELATED ARTICLES

Most Popular