ಬುಧವಾರ, ಏಪ್ರಿಲ್ 30, 2025
HomeWorldಅಫ್ಘಾನಿಸ್ತಾನಕ್ಕೆ 3.1 ಕೋಟಿ ಡಾಲರ್‌ ನೆರವು ಘೋಷಣೆ ಮಾಡಿದ ಡ್ರಾಗನ್ ದೇಶ ಚೀನಾ

ಅಫ್ಘಾನಿಸ್ತಾನಕ್ಕೆ 3.1 ಕೋಟಿ ಡಾಲರ್‌ ನೆರವು ಘೋಷಣೆ ಮಾಡಿದ ಡ್ರಾಗನ್ ದೇಶ ಚೀನಾ

- Advertisement -

ಬೀಜಿಂಗ್‌ : ಅಫ್ಘಾನಿಸ್ತಾನಕ್ಕೆ 3.1 ಕೋಟಿ ಡಾಲರ್‌ (ಸುಮಾರು ₹220 ಕೋಟಿ) ನೆರವು ನೀಡುವುದಾಗಿ ಚೀನಾ ಘೋಷಿಸಿದೆ. ಅಫ್ಘಾನಿಸ್ತಾನದ ಹಂಗಾಮಿ ಸರ್ಕಾರಕ್ಕೆ ಈ ಮೂಲಕ ಪರೋಕ್ಷ ಮಾನ್ಯತೆ ನೀಡಿದಂತಾಗಿದೆ. ಆ ದೇಶದಲ್ಲಿ ಸುವ್ಯವಸ್ಥೆ ಮರುಸ್ಥಾಪನೆ ಮತ್ತು ಅರಾಜಕತೆ ಕೊನೆಗೊಳಿಸಲು ಇದು ಅನಿವಾರ್ಯ ಎಂದು ಚೀನಾ ಹೇಳಿದೆ.

ಅಫ್ಘಾನಿಸ್ತಾನ ನೆರೆಯ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಭಾಗವಹಿಸಿ, ನೆರವು ಪ್ರಕಟಿಸಿದರು. 3.1 ಕೋಟಿ ಡಾಲರ್‌ ಮೊತ್ತದ ಧಾನ್ಯಗಳು, ಔಷಧ, ಲಸಿಕೆ ಇತ್ಯಾದಿ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಕೈವಶವಾಯ್ತು ಪಂಜ್‍ಶೀರ್‌ : ಎದುರಾಯ್ತು ಜನರ ವಿರೋಧ

ಪಾಕಿಸ್ತಾನವು ಈ ಸಭೆಯನ್ನು ಸಂಘಟಿಸಿತ್ತು. ಇರಾನ್‌, ತಾಜಿಕಿಸ್ತಾನ, ತುರ್ಕಮೆನಿಸ್ತಾನ ಮತ್ತು ಉಜ್ಬೇಕಿಸ್ತಾನ ವಿದೇಶಾಂಗ ಸಚಿವರು ಸಭೆಯಲ್ಲಿ ಇದ್ದರು. ಆದರೆ ರಷ್ಯಾ ಈ ಸಭೆಯಲ್ಲಿ ಭಾಗವಹಿಸದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: “ಅಫ್ಘನ್‌ ಇಸ್ಲಾಮಿಕ್‌ ದೇಶ ” ಅಸ್ತಿತ್ವಕ್ಕೆ : ತಾಲಿಬಾನ್‌ ಹೊಸ ಸರಕಾರ ಘೋಷಣೆ

(China announces $ 3.1 billion aid to Afghanistan)

RELATED ARTICLES

Most Popular