ಬೀಜಿಂಗ್ : ಜಗತ್ತಿಗೆ ಕೊರೊನಾ ಅನ್ನೋ ಹೆಮ್ಮಾರಿಯನ್ನು ಪರಿಚಯಿಸಿದ್ದ ಕೆಂಪು ರಾಷ್ಟ್ರ ಚೀನಾದಲ್ಲೀಗ ವಿದ್ಯುತ್ ಬಿಕ್ಕಟ್ಟು ಎದುರಾಗಿದೆ. ಸರಕಾರ ವಿದ್ಯುತ್ ಬಳಕೆಯ ಗುರಿಯನ್ನು ಪೂರೈಸುವಲ್ಲಿ ವಿಫಲವಾಗಿದ್ದು, ಹಲವು ಪ್ರದೇಶಗಳಲ್ಲೀಗ ಭಾರಿ ಕೊರತೆ ಎದುರಾಗಿದೆ. ಚೀನಾದಲ್ಲಿ ಎದುರಾಗಿರುವ ವಿದ್ಯುತ್ ಬಿಕ್ಕಟ್ಟು ಇದೀಗ ವಿಶ್ವದ ಹಲವು ರಾಷ್ಟ್ರಗಳಿಗೆ ತಲೆನೋವು ತರಿಸಿದೆ.
ಚೀನಾದಲ್ಲಿ ತಲೆದೋರಿರುವ ವಿದ್ಯುತ್ ಬಿಕ್ಕಟ್ಟು ಇದೀಗ ಜನಸಾಮನ್ಯರ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದೆ. ಮನೆ, ಕಾರ್ಖಾನೆಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಅದ್ರಲ್ಲೂ ಚೀನಾದಲ್ಲಿನ ಕಾರು ಸೇರಿದಂತೆ ಬಹುತೇಕ ವಾಹನಗಳು ವಿದ್ಯುತ್ ನಿಂದಲೇ ಚಲಾಯಿಸಲಾಗುತ್ತಿದೆ. ಜೊತೆಗೆ ಸ್ಮಾರ್ಟ್ ಪೋನ್ , ಎಲೆಕ್ಟ್ರಾನಿಕ್ ಗ್ಯಾಜೆಟ್ ಉತ್ಪಾದನೆಯ ಮೇಲೆ ಗಂಭೀರ ಪರಿಣಾವನ್ನುಂಟು ಮಾಡುತ್ತಿದೆ. ಕಾರ್ಖಾನೆಗಳು ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ಮಾತ್ರವೇ ಬಾಗಿಲು ತೆರೆಯುತ್ತಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ : ಸುಳ್ಳು ಹೇಳಿ ಸಿಕ್ಕಿ ಬಿದ್ದ ಪ್ರಧಾನಿ ಇಮ್ರಾನ್ ಖಾನ್
ಚೀನಾದ ರಾಜ್ಯ ಮಾಧ್ಯಮದ ವರದಿಯು ಕೆಲವು ಮನೆಗಳಿಗೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದ ಪರಿಣಾಮ, ಕೆಲವರು ಲಿಫ್ಟ್ ಗಳಲ್ಲಿ ಸಿಕ್ಕಿಬಿದ್ದಿರುವ ಘಟನೆಗಳು ವರದಿಯಾಗುತ್ತಿವೆ. ಚೀನಾದ ದೀರ್ಘಕಾಲದ ವಿದ್ಯುತ್ ಬಿಕ್ಕಟ್ಟು ವಿಶ್ವದಾದ್ಯಂತದ ಇರುವ ಕಾರ್ಖಾನೆಗಳಲ್ಲಿನ ಕೆಲಸದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ.
ಕೆಂಪುರಾಷ್ಟ್ರ ಚೀನಾ ವಿದ್ಯುತ್ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವ ಬದಲು ಇತರ ರಾಷ್ಟ್ರಗಳನ್ನು ಮಣ್ಣು ಮುಕ್ಕಿಸಲು ಕಾಲಹರಣ ಮಾಡುತ್ತಿದೆ. ಚೀನಾ ಮಾಡಿಕೊಂಡಿರುವ ಎಡವಟ್ಟು ಇದೀಗ ಜಾಗತಿಕ ಆರ್ಥಿಕತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಚೀನಾದಲ್ಲಿ ಲಕ್ಷಾಂತರ ಮಂದಿ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮಾತ್ರವಲ್ಲ ವಿಶ್ವದ ಉದ್ಯೋಗ ಮತ್ತು ಆರ್ಥಿಕತೆಯ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಇದನ್ನೂ ಓದಿ: Afghanistan : ಭಾರತಕ್ಕೆ ಪತ್ರ ಬರೆದ ತಾಲಿಬಾನ್ !
ಚೀನಾದ ಏಜೆನ್ಸಿಗಳು ತಮ್ಮ ನಾಗರಿಕರು ಮತ್ತು ವ್ಯವಹಾರಗಳಿಗೆ ವಿದ್ಯುತ್ ಬಿಕ್ಕಟ್ಟನ್ನು ನಿಭಾಯಿಸಲು ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದೆ. ಅಲ್ಲದೇ ವಿದ್ಯುತ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಪೂರೈಕೆಯ ಮೇಲೆ ನಿಗಾ ಇಟ್ಟಿದ್ದೇವೆ ಎಂದು ಭರವಸೆ ನೀಡಿವೆ.
(Electricity Problems in China)