ಲಂಡನ್ : ಆತ ಶವಗಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಿದ್ದ. ಒಂದೊಮ್ಮೆ ಶವಗಳು ಸಿಗದೇ ಇದ್ದಾಗ, ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ನಂತರ ಶವಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಇಂತಹ ವಿಕೃತ ಕಾಮಿಗೆ ಇದೀಗ ಲಂಡನ್‌ನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಲಂಡನ್‌ನ ಹೀತ್‌ಫೀಲ್ಡ್ ನಿವಾಸಿಯಾಗಿರುವ ಡೇವಿಡ್ ಪುಲ್ಲರ್ ( 67ವರ್ಷ) ಎಂಬಾತನೇ ಇದೀಗ ಶಿಕ್ಷೆಗೆ ಒಳಗಾಗಿರುವ ವಿಕೃತ ಕಾಮಿ. ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡ್ತಿದ್ದ. ಡೇವಿಡ್ ಪುಲ್ಲರ್ ಮೊದಲು ಸಸೆಕ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಆಸ್ಪತ್ರೆಯ ಶವಾಗಾರಕ್ಕೆ ತೆರಳುತ್ತಿದ್ದ ಈತ ಅಲ್ಲಿದ್ದ ಮಹಿಳೆಯರ ಶವಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಒಂದೊಮ್ಮೆ ಶವಾಗಾರದಲ್ಲಿ ಶವಗಳು ಸಿಗದೇ ಇದ್ದಾಗ ಕೊಲೆ ಮಾಡಿ ಶವಗಳ ಜೊತೆಗೆ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಿದ್ದ.
ಈಗಾಗಲೇ ನೂರಾರು ಮಕ್ಕಳು, ಮಹಿಳೆಯ ಶವಗಳ ಜೊತೆಗೆ ಅತ್ಯಾಚಾರವೆಸಗಿದ್ದಾನೆ. ಅಜ್ರಾ ಕೆಮಾಲ್ ಎಂಬಾಕೆ ಸೇತುವೆಯಿಂದ ಬಿದ್ದು ಸಾವನ್ನಪ್ಪಿದ್ದಳು. ಈ ವೇಳೆಯಲ್ಲಿ ಡೇವಿಡ್ ಪುಲ್ಲರ್ ಆಕೆಯ ಮೃತದೇಹದ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾನೆ ಎಂದು ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಡೇವಿಡ್ ಪುಲ್ಲರ್‌ನನ್ನುಬಂಧಿಸಿದ ವೇಳೆಯಲ್ಲಿ ತಾನು ನಡೆಸುತ್ತಿದ್ದ ನೀಚ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇದೀಗ ಆರೋಪಿಗೆ ಶಿಕ್ಷೆಯನ್ನು ವಿಧಿಸಿದೆ.
ಇದನ್ನೂ ಓದಿ : ಪ್ರೀತಿಗೆ ತಂದೆಯೇ ವಿಲನ್ ! ಮಗಳನ್ನು ಕೊಲೆಗೈದು ಶವ ಎಸೆದ ಅಪ್ಪ
ಇದನ್ನೂ ಓದಿ : ದಲಿತನ ಹುಡುಗನನ್ನು ಮದ್ವೆಯಾಗಿದ್ದಕ್ಕೆ ಮಗಳನ್ನೇ ಅರೆ ನಗ್ನ ಗೊಳಿಸಿದ ತಂದೆ !