ಗಿನ್ನಿಸ್ ವಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ಸೇರ್ಪಡೆ ಆಗಬೇಕು ಅಂತಾ ಸಾಕಷ್ಟು ಮಂದಿ ನಾನಾ ರೀತಿಯಲ್ಲಿ ಹರಸಾಹಸ ಪಡ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗೋದೆ ಇಲ್ಲ. ಆದ್ರೀಗ ಇಲ್ಲೊಂದು ಶ್ವಾನ ಗಿನ್ನಿಸ್ ವಲ್ಡ್ ರೆಕಾರ್ಡ್ಸ್ ಬುಕ್‌ನಲ್ಲಿ ತನ್ನ ಹೆಸರನ್ನು ಬರೆಯಿಸಿಕೊಂಡಿದೆ. ಅಷ್ಟಕ್ಕೂ ಶ್ವಾನ ವಿಶ್ವ ದಾಖಲೆಯ ಪಟ್ಟಿಗೆ ಸೇರೋದಕ್ಕೆ ಕಾರಣವಾಗಿರೋದು ಶ್ವಾನದ ಕಿವಿ.
ಹೌದು, ಅಮೇರಿಕಾದ ಮಹಿಳೆಯೋರ್ವರು ಸಾಕಿರುವ ಕಪ್ಪು ಹಾಗೂ ಕಂದು ಬಣ್ಣದ ಈ ಶ್ವಾನ ನೋಡೋದಕ್ಕೂ ಮುದ್ದು ಮುದ್ದಾಗಿದೆ. ಅದ್ರಲ್ಲೂ ಉದ್ದುದ್ದವಾಗಿರುವ ಕಿವಿ ನೋಡೋದಕ್ಕೆ ಆಶ್ಚರ್ಯ ಹುಟ್ಟಿಸುತ್ತಿರೋದು ಮಾತ್ರವಲ್ಲ, ತನ್ನ ಕಿವಿಗಳಿಂದಲೇ ಇದೀಗ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಗಳನ್ನು ಸೇರಿದೆ.
ಇದನ್ನೂ ಓದಿ: ಮೃತ ಪತ್ನಿಯ ನೆನಪಲ್ಲಿ ದೇವಾಲಯ ನಿರ್ಮಾಣ : ನಿತ್ಯವೂ ಪೂಜೆ ಸಲ್ಲಿಸುವ ಅಪರೂಪದ ಪತಿ !
ಮೂರು ವರ್ಷದ ಲೌ ಅನ್ನೋ ಶ್ವಾನ, ಪೈಗ್ ಒಸ್ಲೆನ್ ಎಂಬ ಪಶುತಜ್ಞೆಯ ಬಳಿಯಲ್ಲಿದೆ. ಈ ಶ್ವಾನದ ಕಿವಿಗಳು ಬರೋಬ್ಬರಿ 12.38 ಇಂಚುಗಳಷ್ಟು ಉದ್ದವಿದೆ. ಜೀವಂತ ಇರುವ ನಾಯಿಗಳ ಪೈಕಿ ಲೌ ಅತ್ಯಂತ ಉದ್ದನೆಯ ಕಿವಿಯನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿದೆ.
ಇನ್ನು ಒಸ್ಲೆನ್ ಸಾಕಿರುವ ನಾಯಿಯ ಕಿವಿಗಳು ಉದ್ದವಿದೆ ಅನ್ನೋದು ಗೊತ್ತಿದ್ದರೂ ಕೂಡ ಎಂದೂ ಎಷ್ಟು ಉದ್ದವಿದೆ ಅಂತಾ ಅಳೆದು ನೋಡಿರಲಿಲ್ವಂತೆ. ಆದರರೆ ಕೋವಿಡ್-19 ಹಿನ್ನೆಲೆಯಲ್ಲಿ ಮೆನೆಯಲ್ಲಿದ್ದ ಒಸ್ಲೆನ್ ಒಮ್ಮೆ ನಾಯಿಯ ಕಿವಿಯನ್ನು ಅಳೆದು ನೋಡಿದ್ದಾರೆ. ನಂತರದಲ್ಲಿ ಗಿನ್ನಿಸ್ ವಲ್ಡ್ ರೆಕಾರ್ಡ್‌ನ ಹಿಂದಿನ ದಾಖಲೆಗಳನ್ನು ಅರಿತುಕೊಂಡಿದ್ದಾರೆ. ಇದೀಗ ಲೌ ಗಿನ್ನಿಸ್ ವಲ್ಡ್ ರೆಕಾರ್ಡ್ಸ್ ದಾಖಲೆ ಮಾಡಿದೆ.
ಇದನ್ನೂ ಓದಿ: ಬರ್ಗರ್ ತಿನ್ನಲು ಹೆರಿಗೆ ಹೊತ್ತಲ್ಲಿ ಜೊತೆಯಲ್ಲಿರದ ಗಂಡ : ಪತಿಗೆ ಡೈವೋರ್ಸ್ ಕೊಟ್ಟ ಪತ್ನಿ !
ಉದ್ದದ ಕಿವಿಯನ್ನು ಹೊಂದಿದ್ದರೂ ಕೂಡ ಲೌ ಗೆ ಯಾವುದೇ ಆರೋಗ್ಯದ ಸಮಸ್ಯೆ ಕಂಡು ಎದುರಾಗಿಲ್ಲ ಅಂತೆ, ಆದರೆ ಫ್ಯಾಷನ್ ಶೋ ನಲ್ಲಿ ಲೌ ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಮಾತ್ರವಲ್ಲ ಅಪಾರ ಅಭಿಮಾನಿಗಳನ್ನು ಹೊಂದಿದೆಯಂತೆ. ಉದ್ದದ ಕಿವಿಗಳನ್ನು ಮುಟ್ಟಿನೋಡಲು ಖುಚಿ ಪಡುತ್ತಿದ್ದಾರೆ. ಯಾರೇ ಆಗಿರಲಿ ಈ ಶ್ವಾನವನ್ನು ಒಮ್ಮೆ ನೋಡಿದ್ರೆ ಸಾಕು, ಯಾರಿಗೆ ಆದರೂ ಶ್ವಾನದ ಮೇಲೆ ಲವ್ ಆಗಿ ಬಿಡುತ್ತೆ ಅಂತಿದ್ದಾರೆ ಲೌನ ಮಾಲೀಕ ಒಸ್ಲೆನ್.
(Dog Guinness Records)