ಸ್ಪ್ಯಾನಿಷ್ ; ಜೂಜಾಟದ ಚಟಕ್ಕೆ ಬಿದ್ದ ಗಂಡಸರನ್ನು ನೋಡಿದ್ದೇವೆ ಆದರೆ ಇಲ್ಲೋಬ್ಬಳು ಮಹಿಳೆ ಜೂಜಾಟದ ಚಟ ಅಂಟಿಸಿಕೊಂಡು ತನ್ನ ಗಂಡನಿಗೆ ತಾನು ಕಿಡ್ನಾಪ್ ಆಗಿರುವುದಾಗಿ ನಾಟಕ ಮಾಡಿ 5 ಲಕ್ಷ ಹಣವನ್ನು ಪಡೆದುಕೊಂಡು ಜೂಜಾಟವಾಡಿ ಕೊನೆಗೆ ಪೋಲಿಸರ ಅತಿಥಿಯಾಗಿದ್ದಾಳೆ.
ಸ್ಪ್ಯಾನಿಷ್ ಮೂಲದ ಈ ಮಹಿಳೆ ತನ್ನ ಜೂಜಾಟದ ಚಟಕ್ಕೆ ಅತಿಯಾಗಿ ದಾಸಿಯಾಗಿದ್ದಳು. ಎಷ್ಟರ ಮಟ್ಟಿಗೆ ಎಂದರೆ ತನ್ನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ತನ್ನ ಗಂಡ ಆಸ್ಪತ್ರೆಯಲ್ಲಿ ಇರುವ ಸಮಯದಲ್ಲಿ ಗಂಡನಿಗೆ ಸಂದೇಶ ರವಾನಿಸಿದ್ದಾಳೆ. ಪಾಪದ ಪತಿ ಇದನೆಲ್ಲಾ ನಂಬಿ ಗಾಬರಿಯಾಗಿದ್ದಾನೆ.
ಇದನ್ನೂ ಓದಿ : ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ : ವೈದ್ಯ ಕಂಗಾಲು
ನಂತರ 47 ವರ್ಷದ ಆ ಮಹಿಳೆ ತನ್ನ ಪತಿಗೆ ಕೆರೆಮಾಡಿ ನನ್ನನು ಯಾರೋ ಅಪಹರಣ ಮಾಡಿದ್ದಾರೆ. ನನ್ನನ್ನು ಬಿಡುಗಡೆ ಗೊಳಿಸಬೇಕಾದರೆ ಸುಮಾರು 5 ಲಕ್ಷ ರೂಪಾಯಿಗಳನ್ನು ಕೇಳುತ್ತಿದ್ದಾರೆ ಎಂದು ಗಂಡನ ಬಳಿ ಹೇಳಿದ್ದಾಳೆ. ಇವಳ ಒಳಗುಟ್ಟು ಅರಿಯದ ಗಂಡ 5 ಲಕ್ಷ ಹಣವನ್ನು ನೀಡಿದ್ದಾನೆ.
ಇದಾದ ಬಳಿಕ ಆ ಮಹಿಳೆ ಆ ಹಣವನ್ನು ಹಿಡಿದುಕೊಂಡು ಸೀದ ಬಿಂಗೊ ಹಾಲ್ (ಜೂಜಾಡುವ ಸ್ಥಳ) ಗೆ ತೆರಳಿದ್ದಾಳೆ. ಅವಳು ಅಲ್ಲಿಗೆ ಪ್ರವೇಶಿಸುತ್ತಿರುವುದನ್ನು ನೋಡಿದ ಪೋಲಿಸರು ಅವಳನ್ನು ಹಿಂಬಾಲಿಸಿ ಆಕೆಯನ್ನು ಬಂದಿಸಿದ್ದಾರೆ. ಆ ಮಹಿಳೆ ಈಗ ತನ್ನ ಜೂಜಿನ ಚಟದಿಂದ ಪೋಲಿಸರ ಅತಿಥಿಯಾಗಿದ್ದಾಳೆ.
ಇದನ್ನೂ ಓದಿ : China Lockdown : ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ : ಶಾಲೆಗಳು ಬಂದ್, ವಿಮಾನ ಹಾರಾಟ ಸ್ಥಗಿತ
(Her kidnapping drama to gamble : Kiladi woman gets 5 lakhs from husband)