ಮಂಗಳವಾರ, ಏಪ್ರಿಲ್ 29, 2025
HomeWorldಇಂಡೋನೇಷ್ಯಾ ಜೈಲಿನಲ್ಲಿ ಅಗ್ನಿ ಅವಘಡ, 41 ಕೈದಿಗಳ ಸಾವು

ಇಂಡೋನೇಷ್ಯಾ ಜೈಲಿನಲ್ಲಿ ಅಗ್ನಿ ಅವಘಡ, 41 ಕೈದಿಗಳ ಸಾವು

- Advertisement -

ಇಂಡೋನೇಷ್ಯಾ : ಇಂಡೋನೇಷ್ಯಾದ ಬಾಂಟೆನ್ ಪ್ರಾಂತ್ಯದ ಜೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 41 ಮಂದಿ ಮೃತಪಟ್ಟಿದ್ದಾರೆ. ಮಾದಕ ದ್ರವ್ಯ ಅಪರಾಧಿಗಳಿಗಾಗಿ ಜಕಾರ್ತದ ಹೊರವಲಯದಲ್ಲಿ ಇರುವ ತಂಗೇರಂಗ್ ಜೈಲಿನ ಬ್ಲಾಕ್ ಸಿಯಲ್ಲಿ ಅಗ್ನಿ ಅವಘಡ ಸಂಭವಿಸಿ 41 ಮಂದಿ ಮೃತಪಟ್ಟಿದ್ದು,39 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಚಿವಾಲಯದ ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ತಿಳಿಸಿದ್ದಾರೆ. ಜೈಲಿನಲ್ಲಿ 1,225 ಕೈದಿಗಳನ್ನು ಮಾತ್ರ ಇಡುವ ಸಾಮರ್ಥ್ಯ ಇದೆ. ಆದರೆ ಎರಡು ಸಾವಿರಕ್ಕಿಂತಲೂ ಹೆಚ್ಚು ಮಂದಿ ಇದ್ದಾರೆ.

ಇದನ್ನೂ ಓದಿ: ತಾಲಿಬಾನ್ ಉಗ್ರರಿಂದ ಪೈಶಾಚಿಕ ಕೃತ್ಯ : ಕುಟುಂಬದವರ ಎದುರಲ್ಲೇ ಗರ್ಭಿಣಿ ಪೊಲೀಸ್ ಹತ್ಯೆ

ಅವಘಢ ಸಂಭವಿಸಿದಾಗ ಸಿ ಬ್ಲಾಕ್‌ನಲ್ಲಿ 122 ಮಂದಿ ಇದ್ದರು ಎನ್ನಲಾಗಿದೆ. ಕೆಲವು ಗಂಟೆಗಳ ನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

ಇದನ್ನೂ ಓದಿ: “ಅಫ್ಘನ್‌ ಇಸ್ಲಾಮಿಕ್‌ ದೇಶ ” ಅಸ್ತಿತ್ವಕ್ಕೆ : ತಾಲಿಬಾನ್‌ ಹೊಸ ಸರಕಾರ ಘೋಷಣೆ

(Fire breaks out in Indonesian prison, killing 41 prisoners)

RELATED ARTICLES

Most Popular