ಮಾಂಟಿಯೋ : ಜೆಟ್ ವಿಮಾನವೊಂದು ಟೇಕಾಫ್ ಆದ ಕೆಲವೇ ಹೊತ್ತಲ್ಲಿ ಕಟ್ಟಡಕ್ಕೆ ಬಡಿದು ನಾಲ್ವರು ದುರಂತವಾಗಿ ಸಾವನ್ನಪ್ಪಿದ್ದಾರೆ. ಕನೆಕ್ಟಿಕಟ್ನ ಏರ್ಪೋರ್ಟ್ನಿಂದ ಟೇಕಾಫ್ ಆಗಿದ್ದ ಕೆಲವೇ ಹೊತ್ತಿನಲ್ಲಿ ಸಣ್ಣ ಜೆಟ್ ದುರಂತಕ್ಕೀಡಾಗಿದೆ.
ರಾಬರ್ಟ್ಸನ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೂ ಮುನ್ನವೇ ಸಣ್ಣ ಜೆಟ್ ಟೇಕಾಫ್ ಆಗಿತ್ತು. ಮಷಿನ್ ಇಂಡಸ್ಟ್ರಿ ಕಂಪನಿಯಾ ಟ್ರಂಫ್ ಕಟ್ಟಡಕ್ಕೆ ಬಡಿದು ದುರಂತಕ್ಕೀಡಾಗಿದೆ. ಟೇಕಾಫ್ ವೇಳೆಯಲ್ಲಿ ಸಣ್ಣ ಜೆಟ್ ಕೆಲ ತಾಂತ್ರಿಕ ದೋಷವನ್ನು ಎದುರಿಸುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: GOOD NEWS : ಕೋವಿಡ್ 2 ಲಸಿಕೆ ಪಡೆದವರಿಗೆ ಉಚಿತ ವಿಮಾನದ ಟಿಕೆಟ್
ಸೆಸ್ಬಾ ಸಿಟೇಷನ್ 560 ಎಕ್ಸ್ ಉತ್ತರ ಕೆರೋಲಿನಾದ ಮಾಂಟಿಯೋದಲ್ಲಿರುವ ಡೇರ್ ಕೌಂಟಿ ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಹೊರಟಿತ್ತು ಎಂದು ಫೆಡರಲ್ ವಿಮಾನಯಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ. ದುರಂತದಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಹಾಗೂ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೆಕೆಂಜಿ ಮಾಹಿತಿ ನೀಡಿದ್ದಾರೆ. ಮೃತರ ಹೆಸರು ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ: ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು ! ಕಾರಣ ಕೇಳಿದ್ರೆ ಶಾಕ್ ಆಗುತ್ತೀರಿ !
(Jet Flight Crash)