ಮಂಗಳವಾರ, ಏಪ್ರಿಲ್ 29, 2025
HomeWorldಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ : ಸುಳ್ಳು ಹೇಳಿ ಸಿಕ್ಕಿ ಬಿದ್ದ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ : ಸುಳ್ಳು ಹೇಳಿ ಸಿಕ್ಕಿ ಬಿದ್ದ ಪ್ರಧಾನಿ ಇಮ್ರಾನ್ ಖಾನ್

- Advertisement -

ಕರಾಚಿ : ನಿರುದ್ಯೋಗದ ಸಮಸ್ಯೆ ನಮ್ಮ ಯುವ ಪೀಳಿಗೆಯನ್ನು ಕಾಡುತ್ತಿದೆ. ಹೆಚ್ಚಿನ ದೇಶಗಳಲ್ಲಿ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಆದರೆ ಪಾಕಿಸ್ತಾನದಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆ ಇದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತನ್ನ ಬೆನ್ನನ್ನು ತಟ್ಟಿಕೊಂಡಿದ್ದರು. ಇದರ ಬೆನ್ನಲ್ಲೇ ಪಾಕ್‌ನಲ್ಲಿ ಜವಾನರ ಹುದ್ದೆಗೆ ಬರೋಬ್ಬರಿ 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಪಾಕಿಸ್ತಾನದ ಆರ್ಥಿಕ ಬೆಳವಣಿಗೆ ಸಂಸ್ಥೆ ನೀಡಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ.16ರ ಷ್ಟಿದೆ. ಅದ್ರಲ್ಲೂ ಶೇ.24ರಷ್ಟು ವಿದ್ಯಾವಂತರು ಕೆಲಸ ಸಿಗದೆ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‍ನಲ್ಲಿ ಖಾಲಿ ಇರುವ ಪಿವನ್ (ಜವಾನ) ಹುದ್ದೆಗೆ ಸುಮಾರು ಒಂದೂವರೆ ಮಿಲಿಯನ್ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಎಂಫಿಲ್ ಪದವಿ ಪಡೆದವರು ಇದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ನಿಲ್ಲದ ತಾಲಿಬಾನ್‌ ಅಟ್ಟಹಾಸ : ಮಗುವನ್ನು ನೇಣಿಗೇರಿಸಿ ಕೊಂದ ತಾಲಿಬಾನಿಗಳು

ಆರ್ಥಿಕ ಬೆಳವಣಿಗೆಗಳ ಸಂಸ್ಥೆಯ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ವಿವರಿಸಿರುವಂತೆ ದೇಶದಲ್ಲಿ ಶೇ.40ರಷ್ಟು ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಸರಿಯಾದ ಉದ್ಯೋಗ ಪಡೆಯಲು ಸಂಘರ್ಷ ನಡೆಸುತ್ತಿರುವ ಬಹಳಷ್ಟು ಮಂದಿ ಎಂಫಿಲ್ ಪದವಿಗೆ ನೋಂದಾವಣಿ ಮಾಡಿಕೊಂಡಿದ್ದಾರೆ.

ಮತ್ತೊಂದು ದುರಂತವೆಂದರೆ ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಈವರೆಗೂ ಅಧಿಕೃತವಾದ ಯಾವ ಸಮೀಕ್ಷೆಗಳನ್ನು ಸರ್ಕಾರ ನಡೆಸಿಲ್ಲ. ವಿದೇಶಿ ಸಂಸ್ಥೆಗಳು ಹಾಗೂ ದೇಶದಲ್ಲೇ ಇರುವ ಕೆಲವು ಖಾಸಗಿ ಸಂಸ್ಥೆಗಳು ನಿರುದ್ಯೋಗದ ಪ್ರಮಾಣವನ್ನು ಪ್ರಸ್ತಾಪಿಸುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: ಭಯೋತ್ಪಾದನೆ ನಿಯಂತ್ರಣ : ಕಮಲಾ ಹ್ಯಾರಿಸ್‌ ಜೊತೆ ಪ್ರಧಾನಿ ಮೋದಿ ಚರ್ಚೆ

ಪಾಕಿಸ್ತಾನ ಸಾಂಖಿಕ ಮಾನಕ ಸಂಸ್ಥೆ ಪ್ರಕಟಿಸಿರುವ ಮಾಹಿತಿ ಪ್ರಕಾರ 2017-18ರಲ್ಲಿ ನಿರುದ್ಯೋಗದ ಪ್ರಮಾಣ ಶೆ.6.9ರಷ್ಟಿತ್ತು. ಅದರಲ್ಲಿ ಪುರುಷರ ಪ್ರಮಾಣ ಶೇ.5.1ರಿಂದ 5.9ಗೆ ಏರಿಕೆಯಾಗಿದೆ. ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ.8.3ರಿಂದ ಶೇ.10ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

(Unemployment problem in Pakistan: Imran Khan caught by lying)

RELATED ARTICLES

Most Popular