ಬುಧವಾರ, ಏಪ್ರಿಲ್ 30, 2025
HomeWorldಮಸೀದಿ ಅಪವಿತ್ರಗೊಳಿಸಿದ ಆರೋಪ: ಬಂಧನ ಭೀತಿಯಲ್ಲಿ ಬಾಲಿವುಡ್ ನಟಿ ಸಬಾ ಖಮರ್

ಮಸೀದಿ ಅಪವಿತ್ರಗೊಳಿಸಿದ ಆರೋಪ: ಬಂಧನ ಭೀತಿಯಲ್ಲಿ ಬಾಲಿವುಡ್ ನಟಿ ಸಬಾ ಖಮರ್

- Advertisement -

ಪಾಕಿಸ್ತಾನ: ವಿಡಿಯೋವೊಂದಕ್ಕೆ ಮಸೀದಿ ಎದುರು ಡ್ಯಾನ್ಸ್ ಮಾಡಿದ ಕಾರಣಕ್ಕಾಗಿ ನಟಿ ಸಬಾ ಖಮರ್ ವಿರುದ್ಧ ಪಾಕಿಸ್ತಾನದ ಸ್ಥಳೀಯ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಹಿಂದಿ ಮೀಡಿಯಮ್ ಸಿನಿಮಾದಲ್ಲಿ ನಟಿಸಿರುವ ಸಬಾ ಖಮರ್, ಪಾಕಿಸ್ತಾನದ ಐತಿಹಾಸಿಕ‌ ಮಸೀದಿಯೊಂದರ ಎದುರು ಡ್ಯಾನ್ಸ್ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದರು‌. ಇದೇ ಕಾರಣಕ್ಕೆ ಸಬಾ ಖಮರ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಆಟ ಆಡಿದ್ರೆ ದೇಹಪ್ರದರ್ಶನ: ಅಪ್ಘಾನಿಸ್ತಾನ್ ದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

ಲಾಹೋರ್ ನ ಐತಿಹಾಸಿಕ ಮಸೀದಿ ಎದುರು ಡ್ಯಾನ್ಸ್ ಮಾಡಿ ಮಸೀದಿಯ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನಟಿ ಸಬಾ ಖಮರ್ ಹಾಗೂ ಗಾಯಕ ಬಿಲಾಲ್ ವಿರುದ್ಧ ದೂರು ದಾಖಲಾಗಿತ್ತು. ಪಾಕಿಸ್ತಾನದ ಪಿನಲ್ ಕೋಡ್ 256 ರ ಅಡಿಯಲ್ಲಿ ಸೆಲೆಬ್ರೆಟಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು.

ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಭಾರಿ ಸಮನ್ಸ್ ಜಾರಿ ಮಾಡಿದ್ದರೂ ನಟಿ ಸಬಾ ಖಮರ್ ಹಾಗೂ ಬಿಲಾಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಲಯ ಇಬ್ಬರಿಗೂ ವಾರೆಂಟ್ ಜಾರಿ ಮಾಡಿದೆ.

ಮಾತ್ರವಲ್ಲ ನಟಿಗೆ ಮಸೀದಿ ಎದುರು ಶೂಟಿಂಗ್ ಗೆ ಅನುಮತಿ ನೀಡಿದ ಇಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ. ಅಲ್ಲದೇ ಸಬಾ ಖಮರ್ ಈ ವಿಡಿಯೋ ರೆಕಾರ್ಡ್ ಮಾಡಿದ ಕಾರಣಕ್ಕೆ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು.

ಇದನ್ನೂ ಓದಿ: “ಅಫ್ಘನ್‌ ಇಸ್ಲಾಮಿಕ್‌ ದೇಶ ” ಅಸ್ತಿತ್ವಕ್ಕೆ : ತಾಲಿಬಾನ್‌ ಹೊಸ ಸರಕಾರ ಘೋಷಣೆ

ಸಬಾ ಖಮರ್ ವಿಡಿಯೋ ನೋಡಿದ ಜನರು ಸೋಷಿಯಲ್ ಮೀಡಿಯಾದಲ್ಲಿ ಸಬಾ ಖಮರ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದು ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು.

(Bollywood actress Saba Khamer in fear of arrest)

RELATED ARTICLES

Most Popular