ಭಾನುವಾರ, ಜೂನ್ 15, 2025
HomeWorldವಿಮಾನದೊಳಗೆ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ : ಮುಂದೇನಾಯ್ತು ಗೊತ್ತಾ ?

ವಿಮಾನದೊಳಗೆ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ : ಮುಂದೇನಾಯ್ತು ಗೊತ್ತಾ ?

- Advertisement -

ಓಹಿಯೋ : ಬಸ್, ರೈಲು ಮಾತ್ರವಲ್ಲ ವಿಮಾನದಲ್ಲಿ ಪ್ರಯಾಣಿಸುವಾಗ ಕೂಡ ಕೆಲವು ಪ್ರಯಾಣಿಕರು ಕಿರಿಕ್ ಮಾಡುತ್ತಾರೆ. ಹೆಚ್ಚಿನ ಘಟನೆಗಳನ್ನು ಪರಿಚಾರಕರು ನಿಯಂತ್ರಿಸಿದರೆ, ಆದರೆ ಇನ್ನು ಕೆಲವು ಗಂಭೀರವಾದರೆ ಪೊಲೀಸ್ ಮಧ್ಯಸ್ಥಿಕೆಯ ಅಗತ್ಯವಿರುತ್ತದೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಕಂಠಪೂರ ಕುಡಿದು ವಿಮಾನ ಸಿಬ್ಬಂದಿ ಜೊತೆ ಕ್ಯಾತೆ ತೆಗೆದಿದ್ದಾನೆ.

ಓಹಿಯೋದ ಮ್ಯಾಕ್ಸ್ ವೆಲ್ ಬೆರ್ರಿ ಫಿಲಡೆಲ್ಫಿಯಾದಿಂದ ಮಿಯಾಮಿಗೆ ನಿಗದಿಯಾಗಿದ್ದ ಫ್ರಾಂಟಿಯರ್ ಏರ್ ಲೈನ್ಸ್ ವಿಮಾನದೊಳಗೆ ವ್ಯಕ್ತಿಯೊಬ್ಬ ಕುಡಿದು ಕ್ಷುಲ್ಲಕ ಕಾರಣಕ್ಕೆ ಓಡಾಡಿದ್ದಾನೆ. ಸಹಪ್ರಯಾಣಿಕನೊಬ್ಬ ವಿಡಿಯೋ ಮಾಡಿದ್ದು, ಕುಡಿದ ವ್ಯಕ್ತಿಯು ಸಿಬ್ಬಂದಿ ಜೊತೆ ತಗಾದೆ ತೆಗೆದಿದ್ದಾನೆ.

ಇದನ್ನೂ ಓದಿ; ಇಂಡೋನೇಷ್ಯಾ ಜೈಲಿನಲ್ಲಿ ಅಗ್ನಿ ಅವಘಡ, 41 ಕೈದಿಗಳ ಸಾವು

ಕುಳಿತುಕೊಳ್ಳುವಂತೆ ವಿಮಾನದ ಸಿಬ್ಬಂದಿ ಕೇಳಿಕೊಂಡಿದ್ದಕ್ಕೆ ಕುಡುಕ ಕೂಗಾಡಿದ್ದಾನೆ. ಅಲ್ಲದೆ ಲೈಂಗಿಕ ಹಾಗೂ ಜನಾಂಗೀಯ ನಿಂದನೆ ಮಾಡಿರುವುದಾಗಿಯೂ ವರದಿಯಾಗಿದೆ. ನಂತರ ಈತನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೋಡು ತಲೆ ಇರುವವರಿಗೆ ಮಾತ್ರ ಬಾಲ್ಡ್‌ ಫೆಸ್ಟ್‌ಗೆ ಅವಕಾಶ !

(Disturbed the flight by getting drunk:Do you know what happened next?)

RELATED ARTICLES

Most Popular