ಖಾಸಗಿತನ ನೀತಿ ಉಲ್ಲಂಘಿಸಿದ ಕಾರಣಕ್ಕೆ ಪ್ರಮುಖ ಸೋಷಿಯಲ್ ಮೀಡಿಯಾ ವಾಟ್ಸಪ್ ಭಾರಿ ದಂಡ ಪಾವತಿಸುವ ಸ್ಥಿತಿ ತಲುಪಿದ್ದು, ವಾಟ್ಸಪ್ ಗೆ 22.5 ಕೋಟಿ ಯುರೋ ದಂಡ ವಿಧಿಸಲಾಗಿದೆ. ಯುರೋಪಿಯನ್ ಒಕ್ಕೂಟಗಳ ದತ್ತಾಂಶ ಖಾಸಗಿತನ ನೀತಿಯನ್ನು ಉಲ್ಲಂಘಿಸಿದ ಕಾರಣಕ್ಕೆ ವಾಟ್ಸಪ್ ಭಾರಿ ಮೊತ್ತದ ದಂಡ ಕಟ್ಟಬೇಕಿದೆ.

ಐರ್ಲೆಂಡ್ ನ ದತ್ತಾಂಶ ಭದ್ರತಾ ಸಮಿತಿ (ಡಿಪಿಸಿ ) ಸೂಚನೆಯಂತೆ ವಾಟ್ಸಪ್ ದಂಡ ವಿಧಿಸಲಾಗಿದ್ದು, ದಂಡದ ಮೊತ್ತ ಭಾರತೀಯ ಲೆಕ್ಕಾಚಾರದಲ್ಲಿ 1, 952.87 ಕೋಟಿ ರೂಪಾಯಿಗಳಾಗಿವೆ. ಖಾಸಗಿತನದ ನೀತಿ ಉಲ್ಲಂಘಿಸಿದ ಆರೋಪದಡಿ ಈ ದಂಡ ವಿಧಿಸಲಾಗಿದೆ.
ಫೇಸ್ ಬುಕ್ ಒಡೆತನದ ವಾಟ್ಸಪ್ ಸಂಸ್ಥೆ ಯುರೋಪಿನ ರಾಷ್ಟ್ರಗಳಲ್ಲಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಐರ್ಲೆಂಡ್ ನಲ್ಲಿ ಕಚೇರಿ ಹೊಂದಿದೆ. ಭಾರಿ ಮೊತ್ತದ ದಂಡಕ್ಕೆ ವಾಟ್ಸಪ್ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಅಲ್ಲದೇ ವಾಟ್ಸಪ್ ಯಾವಾಗಲೂ ಸುರಕ್ಷಿತ ಹಾಗೂ ಖಾಸಗಿತನವನ್ನು ಕಾಪಾಡುತ್ತದೆ ಎಂದು ವಾಟ್ಸಪ್ ವಕ್ತಾರರು ಹೇಳಿಕೆ ನೀಡಿದ್ದಾರೆ.
whatsapp got fined 225 million euros for breaching privacy policy in ireland