ಭಾರತೀಯ ಸೇನೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಭಾರತೀಯ ಸೇನೆಯು ಎನ್ ಸಿಸಿ ವಿಶೇಷ ಪ್ರವೇಶ ಸ್ಕೀಮ್ ಮೂಲಕ ಒಟ್ಟು 55 ಎಸ್ ಎಸ್ ಸಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಹುದ್ದೆಯ ವಿವರ
ಹುದ್ದೆಯ ಹೆಸರು : ಎಸ್ ಎಸ್ ಸಿ ಅಧಿಕಾರಿ – ಎನ್ ಸಿಸಿ ವಿಶೇಷ ಪ್ರವೇಶ
ಸಂಸ್ಥೆ : ಭಾರತೀಯ ಸೇನೆ
ವಿದ್ಯಾರ್ಹತೆ : ಪದವಿ /ತತ್ಸಮಾನ ವಿದ್ಯಾರ್ಹತೆ ( ಭಾರತೀಯ ಸೇನೆ ನೇಮಕಾತಿ ಎಸ್ ಎಸ್ ಸಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯ ಜೊತೆಗೆ ಶೇ.50 ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆ / ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿರಬೇಕು.
ವಯೋಮಿತಿ : ಜುಲೈ 1 202ರ ಅನ್ವಯ ಕನಿಷ್ಠ 19 ಹಾಗೂ ಗರಿಷ್ಟ 25 ವರ್ಷ ( ಜುಲೈ 1 1995ರ ಮುಂಚೆ ಮತ್ತು ಜುಲೈ 2001ರ ನಂತರ ಜನಿಸಿರಬಾರದು) ವಯೋಮಿತಿ ಸಡಿಲಿಕೆಯ ಬಗ್ಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ : ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.
http://joinindianarmy.nic.in/default.aspx?id=5&lg=eng&
ಅರ್ಜಿ ಸಲ್ಲಿಸಲು ಫೆಬ್ರವರಿ 2, 2020 ಕೊನೆಯ ದಿನವಾಗಿರುತ್ತದೆ.