ಸೋಮವಾರ, ಏಪ್ರಿಲ್ 28, 2025
HomeCoastal NewsAccountant Jobs : ಲೀಗಲ್ ಕಂ ಪ್ರೋಭೇಷನ್ ಆಫೀಸರ್, ಲೆಕ್ಕಿಗರ ಹುದ್ದೆ: ಅರ್ಜಿ ಆಹ್ವಾನ

Accountant Jobs : ಲೀಗಲ್ ಕಂ ಪ್ರೋಭೇಷನ್ ಆಫೀಸರ್, ಲೆಕ್ಕಿಗರ ಹುದ್ದೆ: ಅರ್ಜಿ ಆಹ್ವಾನ

- Advertisement -

ಉಡುಪಿ : ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತೆರವಿರುವ ಲೀಗಲ್ ಕಂ ಪ್ರೋಭೇಷನ್ ಆಫೀಸರ್ ಹಾಗೂ ಲೆಕ್ಕಿಗರು (Accountant Jobs) ತಲಾ 1 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸರ್ಕಾರಿ, ಎನ್.ಜಿ.ಓ ಹಾಗೂ ಕಾನೂನು ವಿಷಯಗಳೊಂದಿಗೆ ಕನಿಷ್ಟ 2 ವರ್ಷಗಳ ಕೆಲಸ ಮಾಡಿದ ಅನುಭವ ಮತ್ತು ಮಹಿಳೆಯರ ಹಾಗೂ ಮಕ್ಕಳ ಹಕ್ಕು ಮತ್ತು ರಕ್ಷಣೆ ಸಮಸ್ಯೆಗಳ ಕುರಿತು ತಿಳುವಳಿಕೆ ಹೊಂದಿರುವವರು ಲೀಗಲ್ ಕಂ ಪ್ರೋಭೇಷನ್ ಆಫೀಸರ್ ಹುದ್ದೆಗೆ ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ/ ಗಣಿತ ಶಾಸ್ತ್ರದಲ್ಲಿ ಪದವಿ, ಕೆಲಸ ಮಾಡಿದ ಕನಿಷ್ಠ ಒಂದು ವರ್ಷ ಅನುಭವ ಹಾಗೂ ಕಂಪ್ಯೂಟರ್ ಮತ್ತು ಟ್ಯಾಲಿ ಸಾಫ್ಟ್ವೇರ್ನ ಅನುಭವ ಹೊಂದಿರುವವರು ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ : UAS Dharwad Recruitment 2023 : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ, 70 ಸಾವಿರ ರೂ. ವೇತನ

ಇದನ್ನೂ ಓದಿ : UGC : ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿ : ಈ ಎಲ್ಲಾ ಪರೀಕ್ಷೆಯನ್ನು ಕನಿಷ್ಠ ಮಾನದಂಡವಾಗಿ ದೃಢಪಡಿಸಿದ ಯುಜಿಸಿ

ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಡಿ.ಸಿ.ಆಫೀಸ್, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574964 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Accountant Jobs : Legal Co. Probation Officer, Accountant Vacancy: Application Invited

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular