ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯು (AIASL Recruitment 2023) ಅಪ್ರೆಂಟಿಸ್, ಯುಟಿಲಿಟಿ ಏಜೆಂಟ್ ಕಮ್ ರಾಂಪ್ ಡ್ರೈವರ್ ಹಾಗೂ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ನಡೆಯಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಸದ್ಯ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕಾಗಿದೆ.
ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್
ಒಟ್ಟು ಹುದ್ದೆಗಳ ಸಂಖ್ಯೆ : 166 ಹುದ್ದೆಗಳು
ಉದ್ಯೋಗ ಸ್ಥಳ : ಗುಜರಾತ್
ಹುದ್ದೆಯ ಹೆಸರು : ವಿವಿಧ ಹುದ್ದೆಗಳು
ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರ :
- ಗ್ರಾಹಕ ಸೇವಾ ಕಾರ್ಯನಿರ್ವಾಹಕ : 11 ಹುದ್ದೆಗಳು
- ಜೂನಿಯರ್ ಗ್ರಾಹಕ ಸೇವಾ ಕಾರ್ಯನಿರ್ವಾಹಕ : 25 ಹುದ್ದೆಗಳು
- ಯುಟಿಲಿಟಿ ಏಜೆಂಟ್ ಮತ್ತು ರಾಂಪ್ ಡ್ರೈವರ್ : 7 ಹುದ್ದೆಗಳು
- ಹ್ಯಾಂಡಿಮ್ಯಾನ್ : 36 ಹುದ್ದೆಗಳು
- ಹ್ಯಾಂಡಿಮ್ಯಾನ್ – ಡ್ಯೂಟಿ ಆಫೀಸರ್ : 6 ಹುದ್ದೆಗಳು
- ಜೂನಿಯರ್ ಆಫೀಸರ್ ಟೆಕ್ನಿಕಲ್ : 4 ಹುದ್ದೆಗಳು
- ಜೂನಿಯರ್ ಆಫೀಸರ್ ಪ್ಯಾಸೆಂಜರ್ : 12 ಹುದ್ದೆಗಳು
ವಿದ್ಯಾರ್ಹತೆ ವಿವರ :
ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ನೇಮಕಾತಿ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ 10ನೇ ತರಗತಿ, ಪಿಯುಸಿ ಮತ್ತು ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ:
ಜನರಲ್ ಅಭ್ಯರ್ಥಿಗಳಿಗೆ : ರೂ. 500/-
ಎಸ್‌ಸಿ / ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಯಾವುದೇ ಶುಲ್ಕ ಇರುವುದಿಲ್ಲ.
ವಯೋಮಿತಿ :
ಜನರಲ್ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷ ವಯಸ್ಸು ಮೀರಿರಬಾರದು.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ವಯಸ್ಸು ಮೀರಿರಬಾರದು.
ಪ್ರಮುಖ ದಿನಾಂಕಗಳು :
ಸಂದರ್ಶನ ನಡೆಯುವ ದಿನಾಂಕ : ಫೆಬ್ರವರಿ 7 ರಿಂದ 13 ರವರೆಗೆ ನೇರ ಸಂದರ್ಶನ ನಡೆಯಲಿದೆ.
ಇದನ್ನೂ ಓದಿ : Bangalore DCC Bank Recruitment 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ : Union Bank Recruitment 2023 : ಚಾರ್ಟರ್ಡ್ ಅಕೌಂಟೆಂಟ್, ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ಇದನ್ನೂ ಓದಿ : ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಸಿ
ಸಂದರ್ಶನ ನಡೆಯುವ ಸ್ಥಳ ಮತ್ತು ವಿಳಾಸ :
ಹೋಟೆಲ್ ಪ್ರಾಚೀನ ರೆಸಿಡೆನ್ಸಿ
ವಿಮಾನ ನಿಲ್ದಾಣ ರಸ್ತೆ, ಎಸ್‌ವಿಪಿ ಪಕ್ಕದಲ್ಲಿ ಅಂತಾರಾಷ್ಟ್ರೀಯ, ಸರ್ದಾರ್‌ನಗರ್,
ಹನ್ಸೋಲ್, ಅಹಮದಾಬಾದ್, ಗುಜರಾತ್ – 382475
AIASL Recruitment 2023 : 10th passed apply