(ASRB Recruitment 2022)ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ 38 ಹಿರಿಯ ವಿಜ್ಞಾನಿ-ಮುಖ್ಯಸ್ಥರ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನವೆಂಬರ್ 11 2022ರ ಮೊದಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
(ASRB Recruitment 2022 : ಖಾಲಿ ಹುದ್ದೆಗಳ ವಿವರ:
ಸಂಸ್ಥೆಯ ಹೆಸರು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ (ASRB)
ಹುದ್ದೆಗಳ ಸಂಖ್ಯೆ:38
ಉದ್ಯೋಗ ಸ್ಥಳ:ಭಾರತದಾದ್ಯಂತ
ವೇತನ ಮಾಹಿತಿ:ರೂ.1,31,400 ರಿಂದ ರೂ.2,17,100
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಯ ಸಂಖ್ಯೆಯ ವಿವರ:
ಹಿರಿಯ ವಿಜ್ಞಾನಿ-ಮುಖ್ಯಸ್ಥ- 38
ವಿದ್ಯಾರ್ಹತೆ ವಿವರ:
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ವಿಭಾಗಗಳಲ್ಲಿ ಡಾಕ್ಟರೇಟ್ ಪದವಿಯನ್ನು ಹೊಂದಿರಬೇಕು.
ವಯೋಮಿತಿ ವಿವರ:
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ವಯಸ್ಸು 60 ವರ್ಷವನ್ನು ಮೀರಬಾರದು
ಅರ್ಜಿ ಶುಲ್ಕ:
ರೂ.1500 ಅನ್ನು ಆನ್‌ಲೈನ್ ಮೂಲಕ ಕಟ್ಟಬೇಕು.
SC/ST/ Divyang/ Women ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ:Central Railway Recruitment 2022:10ನೇ ತರಗತಿ, ಪಿಯುಸಿ ಓದಿದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ
ಇದನ್ನೂ ಓದಿ:Bangalore Crime News : ಮಗುವಿನ ಕಾಯಿಲೆ ಬಗ್ಗೆ ನೆಂಟರ ಕೊಂಕು ಮಾತು : ಹೆತ್ತ ಮಗುವನ್ನೇ ಕೊಂದ ತಾಯಿ
ಆಯ್ಕೆ ಪ್ರಕ್ರಿಯೆ:
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ) 1 -11- 2022 ರಿಂದ 11 -11- 2022 ರವರೆಗೆ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಸೈಟ್ ಆದ www.asrb.org.inನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ: 01 ನವೆಂಬರ್ 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :11 ನವೆಂಬರ್ 2022
Applications invited for the posts of Senior Scientist-Principal