ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯನ್ ಲಿಮಿಟೆಡ್ ನೇಮಕಾತಿ (BECIL Recruitment 2023)ಅಧಿಕೃತ ಅಧಿಸೂಚನೆಯ ಮೂಲಕ ಇ – ಟೆಂಡರಿಂಗ್ ಪ್ರೊಫೆಷನಲ್, ಫೈನಾನ್ಸ್ ಫೆಸಿಲಿಟೇಶನ್ ಪ್ರೊಫೆಷನಲ್ ಮತ್ತು ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.
BECIL ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)
ಹುದ್ದೆಗಳ ಸಂಖ್ಯೆ : 28 ಹುದ್ದೆಗಳು
ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಯ ಹೆಸರು : ಫೈನಾನ್ಸ್ ಫೆಸಿಲಿಟೇಶನ್ ಪ್ರೊಫೆಷನಲ್, ಆಫೀಸ್ ಅಟೆಂಡೆಂಟ್
BECIL ನೇಮಕಾತಿಯ ಹುದ್ದೆವಾರು ವಿದ್ಯಾರ್ಹತೆ ವಿವರ :
- ಇ – ಟೆಂಡರಿಂಗ್ ಪ್ರೊಫೆಷನಲ್ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಬಿಇ/ಬಿ.ಟೆಕ್. ಅಥವಾ ETendering, GeM ಮತ್ತು ಸಂಬಂಧಿತ ಇಂಟರ್ನೆಟ್ ತಂತ್ರಜ್ಞಾನಗಳ ಜ್ಞಾನದೊಂದಿಗೆ MBA ಪೂರ್ಣಗೊಳಿಸಿರಬೇಕು.
- ಹಣಕಾಸು ಸೌಲಭ್ಯ ವೃತ್ತಿಪರ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ MBA/ ICWA/ B.Com ಜೊತೆಗೆ MSME ವಲಯಕ್ಕೆ ಬ್ಯಾಂಕ್‌ಗಳ ಜ್ಞಾನವನ್ನು ಹೊಂದಿರಬೇಕು.
- ಆಫೀಸ್ ಅಟೆಂಡೆಂಟ್ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ : ರೂ. 885
- OBC : ರೂ. 885
- SC/ST : ರೂ. 531
- ಮಾಜಿ ಸೈನಿಕ : ರೂ. 885
- ಮಹಿಳೆಯರು : ರೂ. 885
- EWS/PH : ರೂ. 531
BECIL ನೇಮಕಾತಿಯ ಹುದ್ದೆವಾರು ವೇತನ ವಿವರ :
ಇ – ಟೆಂಡರಿಂಗ್ ಪ್ರೊಫೆಷನಲ್ : ರೂ.50,000/-
ಹಣಕಾಸು ಸೌಲಭ್ಯ ವೃತ್ತಿಪರ : ರೂ.50,000/-
ಆಫೀಸ್ ಅಟೆಂಡೆಂಟ್ : ರೂ 18,499/-
ಪಾವತಿ ವಿಧಾನ :
ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯನ್ ಲಿಮಿಟೆಡ್ ನೇಮಕಾತಿ (BECIL)ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದಾಗಿದೆ.
BECIL ನೇಮಕಾತಿಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯನ್ ಲಿಮಿಟೆಡ್ ನೇಮಕಾತಿ (BECIL)ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳು BECIL ನ ಅಧಿಕೃತ ವೆಬ್‌ಸೈಟ್ ಆದ becil.com ಮೂಲಕ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.
ಇದನ್ನೂ ಓದಿ : SBI ನೇಮಕಾತಿ 2023 : 40 ಸಾವಿರ ವೇತನ, ಇಂದೇ ಅರ್ಜಿ ಸಲ್ಲಿಸಿ
ಇದನ್ನೂ ಓದಿ : KHPT Recruitment 2023 : ಪ್ರಾಜೆಕ್ಟ್ ಸಂಯೋಜಕರು ಹುದ್ದೆಗೆ ಉದ್ಯೋಗಾವಕಾಶ
ಇದನ್ನೂ ಓದಿ : ಸೌತ್ ಇಂಡಿಯನ್ ಬ್ಯಾಂಕ್ ನೇಮಕಾತಿ 2023 : ವಿವಿಧ ಆಫೀಸರ್ ಹುದ್ದೆಗಳಿಗೆ ಉದ್ಯೋಗಾವಕಾಶ
ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09 ಮಾರ್ಚ್ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24 ಮಾರ್ಚ್ 2023
BECIL Recruitment 2023 : Salary Rs.50 thousand for Graduates