ಮಂಗಳವಾರ, ಏಪ್ರಿಲ್ 29, 2025
Homejob NewsGovernment Job Alert 2022: ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ; ಕಂದಾಯ ಇಲಾಖೆಯಲ್ಲಿ...

Government Job Alert 2022: ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ; ಕಂದಾಯ ಇಲಾಖೆಯಲ್ಲಿ 300 ಹುದ್ದೆಗಳಿಗೆ ಅರ್ಜಿ ಆಹ್ವಾನ

- Advertisement -

ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಸಖತ್ ಸುದ್ದಿಯೊಂದು ಹೊರಬಿದ್ದಿದೆ. ಸಿವಿಲ್‌ ಎಂಜಿನಿಯರಿಂಗ್ ವಿಭಾಗದಲ್ಲಿ ಬಿಇ, ಬಿ.ಟೆಕ್ ಮತ್ತು ಡಿಪ್ಲೋಮಾ  ಪದವಿಯನ್ನು ಓದಿದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗದ ಅವಕಾಶವೊಂದು ತೆರೆದುಕೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ3000  ಭೂಮಾಪಕರ ಹುದ್ದೆಗಾಗಿ ಅರ್ಹ ಅಭ್ಯರ್ಥಿಗಳಿಗಳಿಂದ ಅರ್ಜಿ ಸಲ್ಲಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಕಂದಾಯ ಇಲಾಖೆಯ ಭೂಮಾಲೀಕರ  ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. https://landrecords.karnataka.gov.in/service201/ ಲಿಂಕ್ ಮೂಲಕ ಕಂದಾಯ ಇಲಾಖೆಯ ಭೂಮಾಪಕರ ಉದ್ಯೋಗಕ್ಕೆ(Government Job Alert 2022) ಅರ್ಜಿ ಆಹ್ವಾನಿಸಲಾಗಿದೆ. ಅಂದಹಾಗೆ ನೆನಪಿಡಿ,  ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಫೆಬ್ರವರಿ 11 ಅಂತಿಮ ದಿನವಾಗಿದೆ. ಅರ್ಜಿ ಹಾಕಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷವಾಗಿರಬೇಕು. ಗರಿಷ್ಠ 65 ವರ್ಷದ ಒಳಗಿರಬೇಕು. ಭೂಮಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆ (Karnataka Revenue Department) ತಿಳಿಸಿದೆ.

https://landrecords.karnataka.gov.in/service201/  ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಭ್ಯರ್ಥಿಗಲು ಅರ್ಜಿ ಸಲ್ಲಿಸಬಹುದು.

ಅಂದಹಾಗೆ ಕಂದಾಯ ಇಲಾಖೆಯು ಭೂಮಾಪಕ ಹುದ್ದೆಗೆ ಜಿಲ್ಲಾವಾರು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಭೂಮಾಪಕರ ಹುದ್ದೆಗಳು ಖಾಲಿಯಿವೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು 65, ಬೆಂಗಳೂರು ಗ್ರಾಮಾಂತರ 12, ದಾವಣಗೆರೆ 183, ಬಳ್ಳಾರಿ 27, ವಿಜಯನಗರ 29, ಚಿತ್ರದುರ್ಗ 93, ಚಾಮರಾಜನಗರ 50, ತುಮಕೂರು 334, ದಕ್ಷಿಣ ಕನ್ನಡ 66, ಕಲಬುರಗಿ 12, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 112, ಬಾಗಲಕೋಟೆ 60, ಬೀದರ್ 13, ಮಂಡ್ಯ 195, ಮೈಸೂರು 136, ಯಾದಗಿರಿ 45, ರಾಮನಗರ 155, ರಾಯಚೂರು 54, ಹಾವೇರಿ 299, ಹಾಸನ 136, ಶಿವಮೊಗ್ಗ 127 ಉಡುಪಿ 131, ಉತ್ತರಕನ್ನಡ 101, ಕೊಡಗು 100, ಕೊಪ್ಪಳ 66, ವಿಜಯಪುರ 76, ಬೆಳಗಾವಿ 112, ಕೋಲಾರ 137, ಗದಗ 46 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲೂ ಪದವಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ
ನೀವು ಪದವಿ ಶಿಕ್ಷಣವನ್ನು ಕಂಪ್ಲೀಟ್ ಮಾಡಿದ್ದರೆ ಒಂದೊಳ್ಳೆ ಉದ್ಯೋಗವೊಂದು (BOM Recruitment 2022) ನಿಮ್ಮನ್ನೇ ಹುಡುಕಿಕೊಂಡು ಬಂದಿದೆ. ಅದೂ ಬ್ಯಾಂಕ್‌ನಲ್ಲಿ ಉದ್ಯೋಗ, ಸಂಬಳ ಕಡಿಮೆಯಲ್ಲ, ರೂಪಾಯಿ 78230ವರೆಗೂ ಸಂಬಳವನ್ನು ಪಡೆಯುವ ಭರ್ಜರಿ ಆಫರ್‌ನ ಬ್ಯಾಂಕ್ ಉದ್ಯೋಗವೊಂದಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರದ (Bank Of Maharashtra- BOM) 500 ಖಾಲಿ ಹುದ್ದೆಗಳಿಗೆ ಅರ್ಜಿ ಕರೆದಿರುವುದು. ಪದವಿ ವ್ಯಾಸಂಗ ಮಾಡಿದವರು ಬ್ಯಾಂಕ್ ಆಫ್ ಮಹಾರಾಷ್ಟ್ರದ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವಿರಾದಲ್ಲಿ ತಡ ಮಾಡದೇ ಈಗಲೆ ಅರ್ಜಿ ಸಲ್ಲಿಸಿ. ಈ ಉದ್ಯೋಗದ ಕುರಿತ ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ವೆಬ್‌ಸೈಟ್ ಆದ http://bankofmaharashtra.in/ವನ್ನು ಸಂಪರ್ಕಿಸಿ.

ನಿಮ್ಮ ವೃತ್ತಿ ಜೀವನವು ಸದಾ ಸುಖಕರವಾಗಿರಲಿ. ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ ಸದಾ ನ್ಯೂಸ್‌ನೆಕ್ಸ್‌ಲೈವ್ ಕನ್ನಡವನ್ನು ಓದುತ್ತಿರಿ.

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

(Government Job Alert 2022 for civil engineering b tech diploma graduates revenue department)

RELATED ARTICLES

Most Popular