ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸುದ್ದಿಸಂಸ್ಥೆ ನ್ಯೂಸ್ ನೆಕ್ಸ್ಟ್ ಯುವ ಪತ್ರಕರ್ತರಿಗೆ ಸುವರ್ಣಾವಕಾಶವನ್ನು(News Next Jobs ) ಕಲ್ಪಿಸಿದೆ. News Next ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿದ್ದು, ಮೂರು ಸುದ್ದಿ ವಿಭಾಗಗಳಿಗೆ ನೇಮಕಾತಿ ನಡೆಯುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಯಾವೆಲ್ಲಾ ಹುದ್ದೆಗಳಿಗೆ ಅವಕಾಶ :
ಕನ್ನಡ ಸುದ್ದಿ ವಿಭಾಗ : kannada.newsnext.live
- Reporters/ Anchors
- Sub Editors / Copy Editors
- Video Editors
- Graphics Designers
- Video Journalist
ಇಂಗ್ಲಿಷ್ ಸುದ್ದಿ ವಿಭಾಗ (newsnext.live)
- Sub Editors / Copy Editors
- Digital Content Creator
ತಮಿಳು ಸುದ್ದಿ ವಿಭಾಗ (tamil.newsnext.live)
- News Editor
- Sub Editors / Copy Editors
- Digital Content Creator
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು
News Next ಅನುಭವಿ ಹಾಗೂ ಯುವ ಪತ್ರಕರ್ತರಿಗೆ ಉದ್ಯೋಗಾವಕಾಶಕ್ಕೆ ವೇದಿಕೆ ಕಲ್ಪಿಸುತ್ತಿದೆ. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಯಾವುದೇ ಪದವೀಧರರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದರೆ ಪತ್ರಿಕೋದ್ಯಮ ಪದವೀಧರರಿಗೆ ಆದ್ಯತೆ ನೀಡಲಾಗುತ್ತದೆ. ಕೆಲಸದ ಅನುಭವ ಇಲ್ಲದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದ ಜೊತೆಗೆ ತಮ್ಮ ಬಯೋಡಾಟಾವನ್ನು jobs.archamedia@gmail.com ಈ ಮೇಲ್ ಗೆ ಕಳುಹಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವೇಳೆಯಲ್ಲಿ ಯಾವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೇವೆ ಅನ್ನುವುದನ್ನು ಸ್ಪಷ್ಟವಾಗಿ ನಮೂದಿಸಬೇಕಾಗಿದೆ.
Here’s an opportunity for young journalists: News Next Jobs