ಸೋಮವಾರ, ಏಪ್ರಿಲ್ 28, 2025
Homejob NewsHESCOM Recruitment 2023‌ : ಹೆಸ್ಕಾಂನಲ್ಲಿ ನೇರ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ

HESCOM Recruitment 2023‌ : ಹೆಸ್ಕಾಂನಲ್ಲಿ ನೇರ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ

- Advertisement -

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (Hubli Electricity Supply Company) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಸ್ಕಾಂನಲ್ಲಿ (HESCOM Recruitment 2023‌) ಖಾಲಿ ಇರುವ ಪ್ರಾಯೋಗಿಕ ತರಬೇತಿ ಹುದ್ದೆಗೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆದೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ತಿಳಿಸಿದ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿದೆ.

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ :
ಇಲಾಖೆಯ ಹೆಸರು : ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (HESCOM)
ಹುದ್ದೆಗಳ ಹೆಸರು : ಅಪ್ರೆಂಟಿಸ್‌
ಒಟ್ಟು ಹುದ್ದೆಗಳು : 200 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌

ಹೆಸ್ಕಾಂನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರ :

  • ಪದವೀಧರ ಅಪ್ರೆಂಟಿಸ್‌ : 125 ಹುದ್ದೆಗಳು
  • ಡಿಪ್ಲೊಮಾ ಅಪ್ರೆಂಟಿಸ್‌ : 75 ಹುದ್ದೆಗಳು

ಹೆಸ್ಕಾಂನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿದ್ಯಾರ್ಹತೆ ವಿವರ :

  • ಪದವೀಧರ ಅಪ್ರೆಂಟಿಸ್‌ ಹುದ್ದೆಗಳಿಗೆ ಅಭ್ಯರ್ಥಿಗಳು ಬಿಇ ಅಥವಾ ಬಿ.ಟೆಕ್‌ ಪೂರ್ಣಗೊಳಿಸಿರಬೇಕು.
  • ಡಿಪ್ಲೊಮಾ ಅಪ್ರೆಂಟಿಸ್‌ ಹುದ್ದೆಗಳಳಿಗೆ ಅಭ್ಯರ್ಥಿಗಳು ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ ವಿವರ :
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಹೆಸ್ಕಾಂ ನಿಯಮಗಳ ಪ್ರಕಾರ ವಯಸ್ಸಿನ ಮಿತಿ ಮತ್ತು ವಯಸ್ಸಿನ ಸಡಿಲಿಕೆ ಹೊಂದಿರಬೇಕು.

ಸಂಬಳ ವಿವರ :
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. ೮೦೦೦ ದಿಂದ ೯೦೦೦ ಸಂಬಳ ನೀಡಲಾಗುತ್ತದೆ.

ಅರ್ಜಿ ಶುಲ್ಕ :
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಆಯ್ಕೆ ವಿಧಾನ :
ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೆರಿಟ್‌ ಪಟ್ಟಿ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ : ದಿ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : ಲಕ್ಷ್ಮೀ ಸಹಕಾರಿ ಬ್ಯಾಂಕ್‌ ನಲ್ಲಿ ಅಕೌಂಟೆಂಟ್‌ ಉದ್ಯೋಗಾವಕಾಶ : ಕೂಡಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ : ಬೆಂಗಳೂರು ಮಹಾನಗರ ಪಾಲಿಕೆ : 3673 ಗ್ರೂಪ್‌ “ಡಿ” ವೃಂದದ ಪೌರಕಾರ್ಮಿಕ ಹುದ್ದೆಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 16 ಜನವರಿ 2023
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 30 ಜನವರಿ 2023

Hubli Electricity Supply Company : HESCOM Recruitment 2023 : Direct Recruitment in HESCOM : Apply Immediately

RELATED ARTICLES

Most Popular