ಭಾನುವಾರ, ಏಪ್ರಿಲ್ 27, 2025
Homejob NewsJob Alert 2022: ತಾಳೆಗರಿ ಓಲೆಗಳ ಸಂರಕ್ಷಣೆ, ಛಾಯಾ ಡಿಜಿಟಲೀಕರಣ, ಗ್ರಂಥಸೂಚಿ ಕೆಲಸಕ್ಕೆ ಮೈಸೂರಿನಲ್ಲಿ ಇದೆ...

Job Alert 2022: ತಾಳೆಗರಿ ಓಲೆಗಳ ಸಂರಕ್ಷಣೆ, ಛಾಯಾ ಡಿಜಿಟಲೀಕರಣ, ಗ್ರಂಥಸೂಚಿ ಕೆಲಸಕ್ಕೆ ಮೈಸೂರಿನಲ್ಲಿ ಇದೆ ಉದ್ಯೋಗಾವಕಾಶ

- Advertisement -

ಮೈಸೂರಿನಲ್ಲಿ ತಾಳೆಗರಿ ಓಲೆಗಳ ಸಂರಕ್ಷಣೆ, ಛಾಯಾ ಡಿಜಿಟಲೀಕರಣ, ಗ್ರಂಥಸೂಚಿ ಕೆಲಸ ಮಾಡಲು ಜನ (Job Alert 2022) ಬೇಕಾಗಿದ್ದಾರೆ. ಮೈಸೂರಿನಲ್ಲಿ ಒಂದು – ಒಂದೂವರೆ ವರ್ಷದ ತಾಳೆಗರಿ ಸಂರಕ್ಷಣೆಗೆ ಅರ್ಹ ಅಭ್ಯರ್ಥಿಗಳಿಂದ ಉತ್ತಮ ಉದ್ಯೋಗಾವಕಾಶಕ್ಕೆ (Job Alert In Mysuru) 2022 ಅರ್ಜಿ ಆಹ್ವಾನಿಸಲಾಗಿದೆ. ತಜ್ಞರು ಸೂಚಿಸುವ ಅಧಿಕೃತ ವಿಧಾನಗಳಿಂದ ಅವುಗಳನ್ನು ಶುದ್ಧೀಕರಿಸುವುದು, ಸಂಸ್ಕರಿಸುವುದು, ಅವುಗಳ ಛಾಯಾ ಡಿಜಿಟಲೀಕರಣ ಮತ್ತು ಅವುಗಳ ಗ್ರಂಥಸೂಚಿಯ ಡಿಜಿಟಲ್‌ ಪ್ರತಿಯನ್ನು ರೂಪಿಸುವುದು ಉದ್ಯೋಗದ ಮುಖ್ಯ ಕೆಲಸವಾಗಿರಲಿದೆ. ಈ ಯೋಜನೆಗೆ ಸಂಬಂಧಿಸಿದ ಯೋಜನೆಯೊಂದು ಸದ್ಯದಲ್ಲೇ ಆರಂಭವಾಗುವ ಸಾಧ್ಯತೆ ಇದ್ದು ಅದರ ತಂಡವನ್ನು ಸೇರಲು ಆಸಕ್ತರಿಗೆ ಆಹ್ವಾನವಿದೆ ಎಂದು ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾಗಿರುವ ಬೇಳೂರು ಸುದರ್ಶನ ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ವಿವರ ಹಂಚಿಕೊಂಡಿದ್ದಾರೆ.

ಅನುಭವ, ವಿದ್ಯಾರ್ಹತೆ ಆಧಾರದಲ್ಲಿ ಯೋಜನಾ ಸಮನ್ವಯಕಾರ, ತಂಡ ನಾಯಕ ಮತ್ತು ಯೋಜನಾ ಸಹಾಯಕ, ಡಿಜಿಟಲ್‌ ಛಾಯಾಗ್ರಾಹಕ – ಈ ನಾಲ್ಕು ಬಗೆಯ ತಾತ್ಕಾಲಿಕ ಉದ್ಯೋಗಾವಕಾಶಗಳಿವೆ. ಈ ಮಾಹಿತಿಯನ್ನು ಆಸಕ್ತರಿಗೆ ತಲುಪಿಸಲು ವ್ಯಾಪಕವಾಗಿ ಹಂಚಿಕೊಳ್ಳುವಂತೆ ಅವರು ತಿಳಿಸಿದ್ದಾರೆ.


ಇದನ್ನೂ ಓದಿ: Indian Army Recruitment 2022: ಪಿಯು ಮುಗಿಸಿದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; 7ನೇ ವೇತನ ಆಯೋಗದ ಅನ್ವಯ ಸಂಬಳ

ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ (CDM) ತನ್ನ ಅಧಿಕೃತ ಪೋರ್ಟಲ್ (cdm.ap.nic.in) ನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (lower division clerk) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (multi tasking staff) ಹುದ್ದೆಗೆ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಪ್ರತಿಯೊಂದು ಹುದ್ದೆಗೂ ಕೇವಲ ಒಂದು ಪೋಸ್ಟ್ ಮಾತ್ರ ಲಭ್ಯವಿದೆ. 12ನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.(Indian Army Recruitment 2022). ಆಸಕ್ತ ಅಭ್ಯರ್ಥಿಗಳು ಜಾಹೀರಾತು ಬಿಡುಗಡೆಯಾದ 30 ದಿನಗಳ ಒಳಗೆ ಅಂದರೆ ಮಾರ್ಚ್ 7, 2022 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು 7 ನೇ ವೇತನ ಆಯೋಗದ (7 ನೇ CPC) ಪ್ರಕಾರ ವೇತನವನ್ನು ಪಡೆಯುತ್ತಾರೆ. ವಿವರವಾದ ಅರ್ಹತಾ ಮಾನದಂಡಗಳು, ಹುದ್ದೆಯ ವಿವರಗಳು ಮತ್ತು ಈ ನೇಮಕಾತಿ ಡ್ರೈವ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಭಾರತೀಯ ಸೇನೆಯ ನೇಮಕಾತಿ 2022: ಅರ್ಹತೆ ಹಾಗೂ ಮಾನದಂಡ
ಶೈಕ್ಷಣಿಕ ಅರ್ಹತೆ:
ಲೋವರ್ ಡಿವಿಷನ್ ಕ್ಲರ್ಕ್ – ಅರ್ಜಿದಾರರು ಮಾನ್ಯತೆ ಪಡೆದ ಶಾಲೆ/ಬೋರ್ಡ್‌ನಿಂದ 12 ನೇ ತರಗತಿ.ಉತ್ತೀರ್ಣರಾಗಿರಬೇಕು
ಮಲ್ಟಿ ಟಸ್ಕಿಂಗ್ ಸಿಬ್ಬಂದಿ – ಈ ಹುದ್ದೆಗೆ, ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿದಾರರು ಕಂಪ್ಯೂಟರ್‌ನಲ್ಲಿ ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ 35 ಪದಗಳು ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗವನ್ನು ಹೊಂದಿರಬೇಕು (ಸಮಯ – 10 ನಿಮಿಷಗಳು).
ವಯಸ್ಸಿನ ಮಿತಿ:
ಲೋವರ್ ಡಿವಿಷನ್ ಕ್ಲರ್ಕ್ – ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು ಮತ್ತು ಗರಿಷ್ಠ ವಯಸ್ಸಿನ ಮಿತಿ 27 ವರ್ಷಗಳು.
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ – ಗರಿಷ್ಠ ವಯಸ್ಸಿನ ಮಿತಿ 25 ವರ್ಷಗಳು.
ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಅರ್ಜಿದಾರರನ್ನು ಪ್ರಾಯೋಗಿಕ/ಕೌಶಲ್ಯ ಪರೀಕ್ಷೆಯ ನಂತರ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

(Job Alert 2022 in Mysuru for palm leaves conservation photo digitization bibliography work)

RELATED ARTICLES

Most Popular