ಕರ್ನಾಟಕ ಕಂದಾಯ ಇಲಾಖೆ ನೇಮಕಾತಿಯ (Karnataka Revenue Department Recruitment 2023) ಅಧಿಕೃತ ಅಧಿಸೂಚನೆ ಮೇ 2023ರ ಮೂಲಕ ಹಣಕಾಸು ಮತ್ತು ಲೆಕ್ಕಪರಿಶೋಧಕ ಅಧಿಕಾರಿ, ಕಾನೂನು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಕರ್ನಾಟಕ ಕಂದಾಯ ಇಲಾಖೆ
ಹುದ್ದೆಗಳ ಸಂಖ್ಯೆ : 5 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಯ ಹೆಸರು : ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಅಧಿಕಾರಿ, ಕಾನೂನು ಅಧಿಕಾರಿ
ವೇತನ : ರೂ.50000-100000/- ತಿಂಗಳಿಗೆ
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರ :
- ನಿವೃತ್ತ ಡಿಜಿಎಂ (ಬ್ಯಾಂಕಿಂಗ್ ತಜ್ಞರು) : 1 ಹುದ್ದೆ
- ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಅಧಿಕಾರಿ : 1 ಹುದ್ದೆ
- ಐಟಿ ಸಿಬ್ಬಂದಿ-2 ಫೋರೆನ್ಸಿಕ್ ಡೇಟಾ ವಿಜ್ಞಾನಿ : 1 ಹುದ್ದೆ
- ಕಾನೂನು ಶಿರಸ್ತೇದಾರ್ : 1 ಹುದ್ದೆ
- ಕಾನೂನು ಅಧಿಕಾರಿ : 1 ಹುದ್ದೆ
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿದ್ಯಾರ್ಹತೆ ವಿವರ :
- ನಿವೃತ್ತ DGM (ಬ್ಯಾಂಕಿಂಗ್ ತಜ್ಞರು) : M.Com, CA, LLB
- ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಅಧಿಕಾರಿ : M.Com, CA
- IT ಸಿಬ್ಬಂದಿ-2 : CSE/IS, PG ಡಿಪ್ಲೊಮಾದಲ್ಲಿ ಫೋರೆನ್ಸಿಕ್ ಡೇಟಾ ಸೈಂಟಿಸ್ಟ್ B.E
- ಕಾನೂನು ಶಿರಸ್ತೇದಾರ್ : LLB, LLM, ಸ್ನಾತಕೋತ್ತರ ಪದವಿ
- ಕಾನೂನು ಅಧಿಕಾರಿ : LLB, LLM
ವಯೋಮಿತಿ ವಿವರ :
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿಯ ಅಧಿಕೃತ ಅಧಿಸೂಚನೆ ಪ್ರಕಾರ, ಅರ್ಹ ಅಭ್ಯರ್ಥಿಗಳು ಕರ್ನಾಟಕ ಕಂದಾಯ ಇಲಾಖೆಯ ನಿಯಮಗಳ ಪ್ರಕಾರ ವಯೋಮಿತಿಯನ್ನು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿಯ ಅಧಿಕೃತ ಅಧಿಸೂಚನೆ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಬಳ (ತಿಂಗಳಿಗೆ) ವಿವರ :
- ನಿವೃತ್ತ DGM (ಬ್ಯಾಂಕಿಂಗ್ ತಜ್ಞರು) : ರೂ.75000-100000/-
- ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಅಧಿಕಾರಿ : ರೂ.50000-55000/-
- ಐಟಿ ಸಿಬ್ಬಂದಿ-2 ಫೋರೆನ್ಸಿಕ್ ಡಾಟಾ ಸೈಂಟಿಸ್ಟ್ : ರೂ.80000-100000/-
- ಕಾನೂನು ಶಿರಸ್ತೇದಾರ್ : ರೂ.50000/-
- ಕಾನೂನು ಅಧಿಕಾರಿ : ರೂ.75000-85000/-
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ ?
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿಯ ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ, ಪೋಡಿಯಂ ಬ್ಲಾಕ್, 3 ನೇ ಮಹಡಿ, ವಿಶ್ವೇಶ್ವರಯ್ಯ ಟವರ್, ಬೆಂಗಳೂರು-560001 ಗೆ ಮೇ 18, 2023 ರಂದು ಅಥವಾ ಮೊದಲು ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಸೇವೆ ಮೂಲಕ ಕಳುಹಿಸಬೇಕಾಗುತ್ತದೆ.
ಇದನ್ನೂ ಓದಿ : UPSC ನೇಮಕಾತಿ 2023 : 285 ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ
ಇದನ್ನೂ ಓದಿ : ಭಾರತೀಯ ನೌಕಾಪಡೆಯ ನೇಮಕಾತಿ 2023 : ಪದವೀಧರರಿಗೆ ಉದ್ಯೋಗಾವಕಾಶ, ಇಂದಿನಿಂದಲೇ ಅರ್ಜಿ ಆಹ್ವಾನ
ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12 ಮೇ 2023
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18 ಮೇ 2023
Karnataka Revenue Department Recruitment 2023 : Job Opportunity for Graduate Post Graduate, Salary 1 Lakh per Month