ಶಿಕ್ಷಕರು, ಗ್ರಂಥಪಾಲಕರು, ಉಪನ್ಯಾಸಕರ ಹುದ್ದೆಗಳ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರೀಯ ವಿದ್ಯಾಲಯ ಸುವರ್ಣಾವಕಾಶವನ್ನು ನೀಡಿದೆ. ಕೇಂದ್ರಿಯ ವಿದ್ಯಾಲಯಗಳಲ್ಲಿ ಖಾಲಿಯಿರುವ ಬೋಧಕ ವರ್ಗದ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ನೋಟಿಫೀಕೇಷನ್ ಹೊರಡಿಸಿದ್ದು ಬರೋಬ್ಬರಿ 8,339 ಶಿಕ್ಷಕರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ :
ಪ್ರಾಂಶುಪಾಲ ಹುದ್ದೆಗಳು : 76
ಉಪಪ್ರಾಂಶುಪಾಲ ಹುದ್ದೆಗಳು : 220
ಸ್ನಾತಕೋತ್ತರ ಪದವಿ ಉಪನ್ಯಾಸಕರು : 592
ತರಬೇತಿ ಪದವಿ ಉಪನ್ಯಾಸಕರು : 1900
ಗ್ರಂಥಪಾಲಕರು : 50
ಪ್ರಾಥಮಿಕ ಶಿಕ್ಷಕರು : 5300
ಪ್ರಾಥಮಿಕ ಶಿಕ್ಷಕರು ಸಂಗೀತ ವಿಭಾಗ : 201 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಗಸ್ಟ್ 24ರಿಂದಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆ.13ರ ವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆ ಹಾಗು ವಯೋಮೀತಿಯನ್ನು ನಿಗದಿಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕೇಂದ್ರೀಯ ವಿದ್ಯಾಲಯದ ಅಧಿಕೃತ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. https://www.kvsangathan.nic.in/