(MRPL Recruitment 2023)ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರಿನಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 15 , 2023 ರ ಮೊದಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
(MRPL Recruitment 2023)ಹುದ್ದೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್
ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ
ಹುದ್ದೆಯ ಸಂಖ್ಯೆ:96
ಉದ್ಯೋಗ ಸ್ಥಳ : ಮಂಗಳೂರು
ವೇತನ : 50,000 ರಿಂದ 1,60,000 ರೂ. ಪ್ರತಿ ತಿಂಗಳು
ಹುದ್ದೆಗಳ ಸಂಖ್ಯೆಯ ವಿವರ:
ಸಹಾಯಕ ಕಾರ್ಯನಿರ್ವಾಹಕ (ಹಣಕಾಸು/ ಆಂತರಿಕ ಲೆಕ್ಕಪರಿಶೋಧನೆ): 4
ಸಹಾಯಕ ಕಾರ್ಯನಿರ್ವಾಹಕ (ಕಾರ್ಯದರ್ಶಿ) :1
ಸಹಾಯಕ ಕಾರ್ಯನಿರ್ವಾಹಕ ಯುಜಿಸಿ (ಮಾರ್ಕೆಟಿಂಗ್) :12
ಸಹಾಯಕ ಕಾರ್ಯನಿರ್ವಾಹಕ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) :1
ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ (ರಾಸಾಯನಿಕ) :28
ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ (ಮೆಕ್ಯಾನಿಕಲ್) :24
ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ (ಸಿವಿಲ್) :2
ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ (ಎಲೆಕ್ಟ್ರಿಕಲ್) :7
ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ (ಇನ್ಸ್ಟ್ರುಮೆಂಟೇಶನ್) :11
ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ (ಕಂಪ್ಯೂಟರ್ ಸೈನ್ಸ್) :5
ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ (ರಸಾಯನಶಾಸ್ತ್ರ) :1
ವಿದ್ಯಾರ್ಹತೆ ವಿವರ:
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು CA, ICAI, CMA, B.Sc, BE/ B.Tech,MBA, ಸ್ನಾತಕೋತ್ತರ ಡಿಪ್ಲೊಮಾ, ಸ್ನಾತಕೋತ್ತರ ಪದವಿ, M.Sc ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ:
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳ ವಯಸ್ಸು ಜನವರಿ 15, 2023 ಕ್ಕೆ 27 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 3 ವರ್ಷಗಳು
SC, ST ಅಭ್ಯರ್ಥಿಗಳು: 5 ವರ್ಷಗಳು
PWBD ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ:
ಸಾಮಾನ್ಯ/OBC/EWS ಅಭ್ಯರ್ಥಿಗಳು: 118 ರೂ.
SC/ST/PWD/ಮಾಜಿ ಸೈನಿಕ ಅಭ್ಯರ್ಥಿಗಳು: ಅರ್ಜಿ ಶುಲ್ಕ ಇಲ್ಲ
ಅಯ್ಕೆ ಪ್ರಕ್ರಿಯೆ :ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ:NCBC Recruitment :ಸ್ನಾತಕೋತ್ತರ ಪದವೀಧರರಿಗೆ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರದಲ್ಲಿ ಉದ್ಯೋಗಾವಕಾಶ
ಅರ್ಜಿ ಸಲ್ಲಿಸುವ ವಿಧಾನ :
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್ ಐಡಿ, ಮೊಬೈಲ್ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ) 15-1-2023 ರ ಮೊದಲು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನ ಅಧಿಕೃತ ವೆಬ್ ಸೈಟ್ ಆದ mrpl.co.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:17- ಡಿಸೆಂಬರ್ 2022.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15- ಜನವರಿ-2023
MRPL Recruitment 2023 Apply for Mangaluru Refinery and Petrochemicals Limited job and get salary in lakhs