ಬುಧವಾರ, ಏಪ್ರಿಲ್ 30, 2025
Homejob NewsPGCIL Recruitment 2022 :800 ಫೀಲ್ಡ್ ಇಂಜಿನಿಯರ್, ಫೀಲ್ಡ್ ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

PGCIL Recruitment 2022 :800 ಫೀಲ್ಡ್ ಇಂಜಿನಿಯರ್, ಫೀಲ್ಡ್ ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Advertisement -

(PGCIL Recruitment 2022)ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)ನಲ್ಲಿ ಖಾಲಿ ಇರುವ ಫೀಲ್ಡ್ ಇಂಜಿನಿಯರ್, ಫೀಲ್ಡ್ ಸೂಪರ್ವೈಸರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 11, 2022ರ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

(PGCIL Recruitment 2022)ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
ಸಂಸ್ಥೆಯ ಹೆಸರು : ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)
ಹುದ್ದೆಯ ಹೆಸರು : ಫೀಲ್ಡ್ ಇಂಜಿನಿಯರ್ ಮತ್ತು ಫೀಲ್ಡ್ ಸೂಪರ್ವೈಸರ್
ಹುದ್ದೆಗಳ ಸಂಖ್ಯೆ : 800
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವೇತನ :23000-120000ರೂ ಪ್ರತಿ ತಿಂಗಳು

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)ನಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯ ವಿವರ:
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಿಕಲ್) : 50 ಹುದ್ದೆಗಳು
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್) : 15ಹುದ್ದೆಗಳು
ಫೀಲ್ಡ್ ಇಂಜಿನಿಯರ್ (ಐಟಿ) : 15ಹುದ್ದೆಗಳು
ಕ್ಷೇತ್ರ ಮೇಲ್ವಿಚಾರಕ (ವಿದ್ಯುತ್) : 480 ಹುದ್ದೆಗಳು
ಕ್ಷೇತ್ರ ಮೇಲ್ವಿಚಾರಕರು (ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ) : 240 ಹುದ್ದೆಗಳು

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)ನಲ್ಲಿ ಖಾಲಿ ಇರುವ ಹುದ್ದೆವಾರು ವಿದ್ಯಾರ್ಹತೆ ವಿವರ:
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಿಕಲ್) :B.Sc, B.E ಅಥವಾ B.Tech in ಎಲೆಕ್ಟ್ರಿಕಲ್ ಇಂಜಿನಿಯರಿಂಗ್
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್) : B.Sc, B.E ಅಥವಾ B.Tech in ECE
ಫೀಲ್ಡ್ ಇಂಜಿನಿಯರಿಂಗ್ (IT) :B.Sc, B.E ಅಥವಾ B.Tech in IT ಇಂಜಿನಿಯರಿಂಗ್
ಫೀಲ್ಡ್ ಸೂಪರ್‌ವೈಸರ್ (ಎಲೆಕ್ಟ್ರಿಕಲ್) : ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಫೀಲ್ಡ್ ಸೂಪರ್‌ವೈಸರ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್) : ಡಿಪ್ಲೊಮಾ ಇನ್ ಇಸಿಇ
ಅರ್ಹ ಅಭ್ಯರ್ಥಿಗಳು ಮೇಲೆ ತಿಳಿಸಿರುವ ಎಲ್ಲಾ ವಿದ್ಯಾರ್ಹತೆಗಳನ್ನು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ:NMPT Recruitment 2022: ಪದವೀಧರರಿಂದ ಅರ್ಜಿ ಆಹ್ವಾನ

ಇದನ್ನೂ ಓದಿ:KEA Recruitment : ಕಿರಿಯ ಪಶುವೈದ್ಯಕೀಯ ಪರೀಕ್ಷಕರು ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 21,400– 42,000 ರೂ. ವೇತನ

ವಯೋಮಿತಿ ವಿವರ:
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳನ್ನು ಈ ಸಂಸ್ಥೆಯ ನಿಯಮಗಳ ಪ್ರಕಾರ 11-ಡಿಸೆಂಬರ್-2022 ರಂತೆ ಕನಿಷ್ಠ 18 ವರ್ಷದಿಂದ ಗರಿಷ್ಠ 29 ವರ್ಷ ವಯಸ್ಸನ್ನು ಹೊಂದಿರಬೇಕು.

ಅರ್ಜಿ ಶುಲ್ಕ:
ಫೀಲ್ಡ್ ಇಂಜಿನಿಯರ್ ಹುದ್ದೆ :SC/ST/PwBD/Ex-SM : ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
ಕ್ಷೇತ್ರ ಮೇಲ್ವಿಚಾರಕ ಹುದ್ದೆ : ಇತರ ಅಭ್ಯರ್ಥಿಗಳು 400ರೂ. ಶುಲ್ಕವನ್ನು ಪಾವತಿಸಬೇಕು
ಇತರ ಅಭ್ಯರ್ಥಿಗಳು : 300ರೂ ಶುಲ್ಕವನ್ನು ಪಾವತಿಸಬೇಕು

ಆಯ್ಕೆ ಪ್ರಕ್ರಿಯೆ :
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸ್ಕ್ರೀನಿಂಗ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ) 21-11-2022 ರಿಂದ11-12- 2022 ರವರೆಗೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)ನ ಅಧಿಕೃತ ವೆಬ್‌ ಸೈಟ್‌ ಆದ powergridindia.com ನಲ್ಲಿ ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-11-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 11-12-2022

PGCIL Recruitment 2022:Application Invitation for 800 Field Engineer, Field Supervisor Posts

RELATED ARTICLES

Most Popular