(SBI Recruitment 2023)ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 1438 ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 10, 2023 ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
(SBI Recruitment 2023)ಹುದ್ದೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಯ ಹೆಸರು : ಕಲೆಕ್ಷನ್ ಫೆಸಿಲಿಟೇಟರ್ (ನಿವೃತ್ತ ಬ್ಯಾಂಕ್ ಅಧಿಕಾರಿಗಳು/ಸಿಬ್ಬಂದಿ)
ಹುದ್ದೆಗಳ ಸಂಖ್ಯೆ: 1438
ಉದ್ಯೋಗ ಸ್ಥಳ : ಭಾರತದಾಂದ್ಯಂತ
ವೇತನ:.25000 ರಿಂದ 40000ರೂ ಪ್ರತಿ ತಿಂಗಳು
ಹುದ್ದೆಗಳ ಸಂಖ್ಯೆಯ ವಿವರ:
ಕಲೆಕ್ಷನ್ ಫೆಸಿಲಿಟೇಟರ್ (JMGS-I) 291
ಕಲೆಕ್ಷನ್ ಫೆಸಿಲಿಟೇಟರ್ (MMGS-II) 507
ಕಲೆಕ್ಷನ್ ಫೆಸಿಲಿಟೇಟರ್ (MMGS-III) 142
ಕಲೆಕ್ಷನ್ ಫೆಸಿಲಿಟೇಟರ್ (ಕ್ಲೇರಿಕಲ್ ಸ್ಟಾಫ್) 498
ಅರ್ಹತೆ
ಈ ಸಂಸ್ಥೆಯೊಂದಿಗೆ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು. ಈ ಸಂಸ್ಥೆಗೆ ಸಂಬಂಧಪಟ್ಟ ಹುದ್ದೆಗಳಲ್ಲಿ ಅನುಭವ ಇರುವವರಿಗೆ ಮೊದಲ ಆದ್ಯತೆ.
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ
ಇದನ್ನೂ ಓದಿ:CBI Recruitment 2023: ಕೇಂದ್ರೀಯ ತನಿಖಾ ದಳದಲ್ಲಿ ಸಲಹೆಗಾರರ ಹುದ್ದೆ : ವೇತನ 40000 ರೂ
ಇದನ್ನೂ ಓದಿ:KHPT Recruitment 2023:ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ಪದವೀಧರರ ನೇಮಕಾತಿ
ಅರ್ಜಿ ಸಲ್ಲಿಸುವ ವಿಧಾನ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ)22-12-2022 ರಿಂದ10-1-2023 ರವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಆದ sbi.co.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-ಡಿಸೆಂಬರ್-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-ಜನವರಿ-2023
SBI Recruitment 2023 State Bank of India Job Vacancy for Retired Bank Officers