ಬೆಂಗಳೂರು : ಸರಕಾರಿ ಕೆಲಸಕ್ಕಾಗಿ ಕಾಯುತ್ತಿದ್ದವರಿಗೆ ರಾಜ್ಯ ಸರಕಾರ ಗುಡ್‌ನ್ಯೂಸ್ ಕೊಟ್ಟಿದೆ. ರಾಜ್ಯದ ಗ್ರಾಮಗಳಲ್ಲಿ ಖಾಲಿ ಇರುವ 1789 ಗ್ರಾಮ ಲೆಕ್ಕಿಗರ ಹುದ್ದೆಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆದೇಶ ಹೊರಡಿಸಿದೆ.
ಕಳೆದ ವಿಧಾನಸಭಾ ಅಧಿವೇಶನದಲ್ಲಿ ಕರ್ನಾಟಕದ 1789 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ ಇದೆ ಎಂದು ಮಾಹಿತಿ ನೀಡಿತ್ತು. ನಂತರ ಪ್ರತೀ ಜಿಲ್ಲಾಧಿಕಾರಿಗಳಿಂದ ಸ್ವಿಕರಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ನಂತರ ಗ್ರಾಮ ಲೆಕ್ಕಿಗರ ಹುದ್ದೆಗೆ ನೇರವಾಗಿ ನೇಮಕಾತಿ ಮಾಡಲು ಅನುಮತಿ ನೀಡಿದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ : ಯಾವಾಗಿಂದ ಜಾರಿಯಾಗುತ್ತೆ ಗೊತ್ತಾ ಹೊಸ ನಿಯಮ
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಮಂಜೂರಾದ ಗ್ರಾಮ ಲೆಕ್ಕಿಗ ಹುದ್ದೆ ಒಟ್ಟು 9,839. ಅದರೆ ಇವುಗಳಲ್ಲಿ 1,789 ಹುದ್ದೆ ಖಾಲಿ ಇವೆ. ಗ್ರಾಮ ಲೆಕ್ಕಿಗರ ಹುದ್ದೆ ನೇಮಕಾತಿ ಸಂಧರ್ಭದಲ್ಲಿ ಅನುಸರಿಸ ಬೇಕಾದ ನಿಯಮಗಳನ್ನು ಸಹ ಕಂದಾಯ ಇಲಾಖೆ ಸ್ಪಷ್ಟ ಪಡಿಸಿದೆ.
ಹಲವು ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ಗ್ರಾಮ ಲೆಕ್ಕಿಗರ ನೇಮಕಾತಿ ಆದೇಶ ಹೊರಡಿಸುವ ಹಂತದಲ್ಲಿದೇ ಆದರೆ ಇದನ್ನೂ ನೇರ ನೇಮಕಾತಿಯ ಮೂಲಕ ದಾಖಲೆ ಪರಿಶೀಲಿಸಿ ಮೂಲಕ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್. ಯದು ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: DA Hike : ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ : ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರಕಾರದ ಆದೇಶ
(1789 Government offers direct recruitment to the post of Village Accountant)