ಸೋಮವಾರ, ಏಪ್ರಿಲ್ 28, 2025
HomeSpecial StoryChocolate Cake : ಮನೆಯಲ್ಲೂ ಮಾಡಬಹುದು ಚಾಕೋಲೇಟ್ ಕೇಕ್'

Chocolate Cake : ಮನೆಯಲ್ಲೂ ಮಾಡಬಹುದು ಚಾಕೋಲೇಟ್ ಕೇಕ್’

- Advertisement -

ಚಾಕೋಲೇಟ್‌ ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ ಚಾಕೋಲೇಟ್‌ ಕೇಕ್‌ ಅಂದ್ರೇ ಯಾರು ಬೇಡ ಅನ್ನೋಕೆ ಚಾನ್ಸೇ ಇಲ್ಲ. ಮಕ್ಕಳಿಗಂತೂ ಚಾಕೋಲೇಟ್‌ ಕೇಕ್‌ ಅಂದ್ರೇ ಬಲು ಇಷ್ಟ ಹೀಗಿರುವಾಗ ಮನೆಯಲ್ಲೇ ಚಾಕೋಲೇಟ್‌ ಕೇಕ್‌ ಮಾಡಿ ನಿಮ್ಮ ಮನೆಯವರಿಗೆಲ್ಲಾ ತಿನ್ನಿಸಬಹುದು.

ಚಾಕೋಲೇಟ್ ಕೇಕ್ ಮಾಡಲು ಬೇಕಾಗುವ ಪದಾರ್ಥಗಳು :
ಮೈದಾಹಿಟ್ಟು-100 ಗ್ರಾಂ, ಬೆಣ್ಣೆ-100 ಗ್ರಾಂ, ಮೊಟ್ಟೆಗಳು-3, ಕೋಕೊಪುಡಿ-2 ಚಮಚ, ಪುಡಿ ಸಕ್ಕರೆ-115 ಗ್ರಾಂ, ಅಡುಗೆ ಸೋಡ 1/4 ಚಮಚ, ಬೇಕಿಂಗ್ ಪೌಡರ್-3/4 ಚಮಚ, ವೆನಿಲಾ ಎಸೆನ್ಸ್-1 ಚಮಚ ಅಥವಾ ಚಾಕೊಲೇಟ್ ಎಸೆನ್ಸ್-1/2 ಚಮಚ, ಕಾರ್ನ್ ಫ್ಲೋರ್-1 ಚಮಚ, ತಾಜಾ ಕೆನೆ-2 ಚಮಚ, ಉಪ್ಪು-1 ಚಿಟಕಿ, ಹಾಲು-ಸಾಕಷ್ಟು.

ಇದನ್ನೂ ಓದಿ: ಬಾಯಲ್ಲಿ ನೀರು ತರಿಸುತ್ತೆ ಸಿಹಿ ಸಿಹಿ ಜಿಲೇಬಿ : ಮನೆಯಲ್ಲಿ ಒಮ್ಮೆ ಟ್ರೈಮಾಡಿ

ಮಾಡುವ ವಿಧಾನ :
ಮೊದಲಿಗೆ ಮೈದಾ, ಬೇಕಿಂಗ್ ಪೌಡರ್, ಸೋಡಾ, ಕಾರ್ನ್ ಫ್ಲೋರ್, ಉಪ್ಪು ಮತ್ತು ಕೋಕೊ ಪುಡಿಯನ್ನು 3 ಬಾರಿ ಜರಡಿ ಮಾಡಿ. ಕೆನೆ, ಬೆಣ್ಣೆ ಮತ್ತು ಸಕ್ಕರೆಯನ್ನು ಹಗುರವಾಗಿ ತುಂಬಾ ಮೃದುವಾಗುವಂತೆ ಮಿಶ್ರ ಮಾಡಿ. ಒಂದೊಂದೆ ಮೊಟ್ಟೆಯನ್ನು ಸೇರಿಸಿ.

ಎಸೆನ್ಸ್ ಮತ್ತು ಬಣ್ಣ ಸೇರಿಸಿ ಚೆನ್ನಾಗಿ ಬೀಟ್ ಮಾಡಿ, ಕೆನೆ ಸೇರಿಸಿ. ಈ ಹಂತದಲ್ಲಿ ಗ್ಲಿಸರಿನ್ ಸೇರಿಸಿ. ಮೈದಾ ಮಿಶ್ರಣವನ್ನು ಕಟ್ ಅಂಡ್ ಫೋಲ್ಡ್ ಕ್ರಮದಿಂದ ಬೆರೆಸಿ ಹಾಲನ್ನು ಡ್ರಾಪಿಂಗ್ ಹದ ಬರುವಂತೆ ಸೇರಿಸಿ. ಗ್ರೀಸ್ ಮಾಡಿ ಹಿಟ್ಟು ಚಿಮುಕಿಸಿದ ಪಾತ್ರೆಗೆ ಸುರಿಯಿರಿ. 5 ನಿಮಿಷ ಸಮಯ ಹೊಂದಿಸಿ ಮೈಕ್ರೊ ಹೈ ಮಾಡಿರಿ.

5 ನಿಮಿಷ ಹೊಂದಿಕೊಳ್ಳಲು ಬಿಡಿ. ನಂತರ ಅಚ್ಚಿನಿಂದ ತೆಗೆದು ತಣ್ಣಗೆ ಮಾಡಿ. ಓವನನ್ನು 180 ಡಿಗ್ರಿ ಗೆ ಸೆಟ್ ಮಾಡಿ 40 ನಿಮಿಷಗಳವರೆಗೆ ಕೇಕನ್ನು ಬೇಯಿಸಿ 5 ನಿಮಿಷ ತಣ್ಣಗೆ ಮಾಡಿ. ಬಟ್ ಕಾಗದದ ಮೇಲೆ ಮಗುಚಿರಿ. ಚೆನ್ನಾಗಿ ತಣ್ಣಗೆ ಮಾಡಿ. ಚಾಕೋಲೇಟ್ ಐಸಿಂಗ್ ನಿಂದ ಅಲಂಕರಿಸಿ.

ಇದನ್ನೂ ಓದಿ: ಕರ್ಜಿಕಾಯಿ ರೆಸಿಪಿ ಮನೆಯಲ್ಲೇ ಟ್ರೈಮಾಡಿದ್ದೀರಾ?

RELATED ARTICLES

Most Popular