ಸೋಮವಾರ, ಏಪ್ರಿಲ್ 28, 2025
HomeSpecial StoryBanana Halwa : ಬಾಳೆಹಣ್ಣಿನಲ್ಲೂ ಮಾಡಬಹುದು ಹಲ್ವಾ

Banana Halwa : ಬಾಳೆಹಣ್ಣಿನಲ್ಲೂ ಮಾಡಬಹುದು ಹಲ್ವಾ

- Advertisement -

ಹಲ್ವಾ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದಾಗ ಏನಾದರೂ ಸಿಹಿ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಮನೆಯಲ್ಲಿ ಒಂದಷ್ಟು ಬಾಳೆಹಣ್ಣು ಇದ್ದರೆ ಸುಲಭವಾಗಿ ಈ ಬಾಳೆಹಣ್ಣಿನ ಹಲ್ವಾ ಮಾಡಿಕೊಂಡು ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು : ಹಣ್ಣಾದ ಬಾಳೆಹಣ್ಣು-7, ಕಾರ್ನ್ ಫ್ಲೋರ್-2 ಟೀ ಸ್ಪೂನ್, ಗೋಡಂಬಿ-2 ಟೇಬಲ್ ಸ್ಪೂನ್, ಬಾದಾಮಿ-2 ಟೇಬಲ್ ಸ್ಪೂನ್, ಬೆಲ್ಲ-1 ಕಪ್, ಏಲಕ್ಕಿ ಪುಡಿ- ಚಟಿಕೆ.

ಇದನ್ನೂ ಓದಿ: ಗಣೇಶ ಚೌತಿಗೆ ಮನೆಯಲ್ಲಿ ಮಾಡಿ ಕಡಲೇ ಬೆಳೆ ಹೋಳಿಗೆ

ಮಾಡುವ ವಿಧಾನ : ಮೊದಲಿಗೆ ಒಂದು ಬೌಲ್ ಗೆ ಅರ್ಧ ಕಪ್ ನೀರು ಸೇರಿಸಿ ಅದಕ್ಕೆ 2 ಟೀ ಸ್ಪೂನ್ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಬಾಳೆ ಹಣ್ಣು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಗೋಡಂಬಿ, ಬಾದಾಮಿಯನ್ನು ಹುರಿದುಕೊಂಡು ಒಂದು ಕಡೆ ಎತ್ತಿಟ್ಟುಕೊಳ್ಳಿ. ನಂತರ ಅದೇ ಫ್ಯಾನ್ ಗೆ ರುಬ್ಬಿಟ್ಟುಕೊಂಡ ಬಾಳೆ ಹಣ್ಣಿನ ಮಿಶ್ರಣ ಸೇರಿಸಿ 5 ನಿಮಿಷಗಳ ಕಾಲ ಹುರಿದುಕೊಳ್ಳಿ. ಇದಕ್ಕೆ ಬೆಲ್ಲ ಸೇರಿಸಿ. ಬೆಲ್ಲ ಕರಗುವವರೆಗೆ ಚೆನ್ನಾಗಿ ತಿರುಗಿಸಿ. ನಂತರ ಇದಕ್ಕೆ ಕಾರ್ನ್ ಫ್ಲೋರ್ ಸೇರಿಸಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಇದನ್ನೂ ಓದಿ: ಒಮ್ಮೆ ಈ ವೆಜ್ ಬಿರಿಯಾನಿ ತಿಂದ್ರೆ ಮತ್ತೆ ಮತ್ತೆ ಮಾಡದೆ ಬಿಡಲ್ಲ

ಇದರ ಮೇಲೆ 1 ಟೀ ಸ್ಪೂನ್ ತುಪ್ಪ ಹಾಕಿ ಮಿಶ್ರಣ ಮಾಡಿ. ಇದಕ್ಕೆ ಹುರಿದಿಟ್ಟುಕೊಂಡ ಗೋಡಂಬಿ, ಬಾದಾಮಿ ಸೇರಿಸಿ. ಬಾಳೆ ಹಣ್ಣಿನ ಮಿಶ್ರಣ ತಳ ಬಿಡುವವರೆಗೆ ಚೆನ್ನಾಗಿ ಕೈಯಾಡಿಸಿದರೆ ರುಚಿಕರವಾದ ಬಾಳೆಹಣ್ಣಿನ ಹಲ್ವಾ ರೆಡಿ. ಈ ಹಲ್ವಾ ಆರೋಗ್ಯಕ್ಕು ವಳ್ಳೆಯದು. ರುಚಿಯು ಸಖತ್‌ ಆಗಿರುತ್ತೆ.

( Banana Halwa)

RELATED ARTICLES

Most Popular