ಬಿಸಿಯಾದ ಅನ್ನದ ಜೊತೆಗೆ ಒಳ್ಳೆ ರುಚಿಯಾದ ಸಾಂಬಾರ್ ಇದ್ರೇ ಬೇರೆ ಏನು ಬೇಕು ಅಲ್ವಾ. ಮೃಷ್ಟಾನ್ನ ಭೋಜನ ಮಾಡಿದಷ್ಟೇ ಹಿತ, ಬಾಯಿಗೆ ರುಚಿ ಸಿಗುತ್ತದೆ. ಅದರಲ್ಲೂ ಸಾಂಬಾರ್ ಅಲ್ಲಿ ಫೇಮಸ್ ಉಡುಪಿ ಶೈಲಿಯ ಸಾಂಬಾರ್. ಹೆಚ್ಚಿನವರು ಊಟದ ಸಮಯದಲ್ಲಿ ಉಡುಪಿ ಹೋಟೆಲ್ ಅನ್ನು ಹುಡಿಕಿಕೊಂಡು ಹೊಗುತ್ತಾರೆ ಕಾರಣ ಉಡುಪಿ ಶೈಲಿಯ ಸಾಂಬಾರ್ ರುಚಿ ಹಾಗಿದೆ.

ಬೇಕಾಗುವ ಸಾಮಾಗ್ರಿಗಳು : ಒಣ ಮೆಣಸು 6, ಕಾಳು ಮೆಣಸು 1 ಟೇಬಲ್ ಸ್ಪೂನ್, ಮೆಂತ್ಯೆ 1 ಟೀ ಸ್ಪೂನ್, ಕೊತೊಂಬರಿ 1 ಟೇಬಲ್ ಸ್ಪೂನ್, ಜೀರಿಗೆ 1 ಟೇಬಲ್ ಸ್ಪೂನ್, ಉದ್ದಿನ ಬೇಳೆ 1 ಟೀ ಸ್ಪೂನ್, ಟೋಮೇಟೊ 1, ಬೇಳೆ 250 ಗ್ರಾಮ್, ಒಂದು ಚಿಟಿಕೆ ಇಂಗು, ಅರಶಿನ ಪುಡಿ, ಬೆಲ್ಲ , ಹುಣಸೆ ಹುಳಿ 2 ಟೇಬಲ್ ಸ್ಪೂನ್, ಸಾಸಿವೆ 1 ಟೀ ಸ್ಪೂನ್, ತೆಂಗಿನ ಎಣ್ಣೆ 3 ಟೇಬಲ್ ಸ್ಪೂನ್, ಶುಂಠಿ, ಹಸಿಮೆಣಸು 3, ಕೊತೊಂಬರಿ ಸೊಪ್ಪು 1 ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ: ಮನೆಯಲ್ಲೇ ಮಾಡಿ ರುಚಿ ರುಚಿಯಾದ ಮಂಗಳೂರು ಬನ್ಸ್

ಮಾಡುವ ವಿಧಾನ : ಮೊದಲಿಗೆ ಬೇಳೆ ಬೇಯಿಸಿ ಇಡಬೇಕು ನಂತರ ಒಣ ಮೆಣಸು, ಕಾಳುಮೆಣಸು, ಮೆಂತ್ಯೆ, ಕೊತೊಂಬರಿ, ಜೀರಿಗೆ, ಉದ್ದಿನ ಬೇಳೆ ಇಷ್ಟನ್ನು ಹೆನ್ನಾಗಿ ಹುರಿದುಕೊಂಡು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳ ಬೇಕು. ನಂತರ ಬೆಂದ ಬೇಳೆಯ ಜೊತೆ ಟೊಮೆಟೊ, ಹಸಿಮೆಣಸು, ಉಪ್ಪು, ಶುಂಠಿ ಹಾಕಿಕೊಂಡು ಬೇಯಿಸಬೇಕು. ನಂತರ ಅದಕ್ಕೆ ಹುಣಸೆ ಹುಳಿಯನ್ನು ಹಾಕಬೇಕು. ಇದಕ್ಕೆ ಇಂಗು ಹಾಗೂ ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಉಪ್ಪು ಹಾಕಿಕೊಳ್ಳಿ.
ಇದನ್ನೂ ಓದಿ: Italian Pasta :ಇಟಾಲಿಯನ್ ಪಾಸ್ತಾ ಮನೆಯಲ್ಲೇ ಮಾಡೋದು ಎಷ್ಟು ಈಸಿ ಗೊತ್ತಾ ?

ನಂತರ ಮೊದಲೇ ತಯಾರಿಸಿ ಇಟ್ಟ ಮಸಾಲೆಯನ್ನು ಬೇಯಿಸಿದ ಬೇಳೆಯ ಜೊತೆ ಹಾಕಿ ಮಿಕ್ಸ್ ಮಾಡಿ. ನಿಮ್ಮ ಅಭಿರುಚಿಗೆ ತಕ್ಕಂತೆ ಈ ಸಾಂಬಾರಿಗೆ ನೀರನ್ನು ಬೆರೆಸಿ ನಿಮಗೆ ದಪ್ಪ ಸಾಂಬಾರು ಬೇಕಾದರೆ ಸ್ವಲ್ಪ ನೀರು ಸೇರಿಸಿ, ನಿಮಗೆ ತಿಳಿ ಸಾರು ಬೇಕಾದರೆ ಸ್ವಲ್ಪ ಜಾಸ್ತಿ ನೀರು ಸೇರಿಸಿ.

ಇದು ಚೆನ್ನಾಗಿ ಕುದಿ ಬಂದ ಮೇಲೆ ಕೊತೊಂಬರಿ ಸೊಪ್ಪನ್ನು ಹಾಕಿ. ನಂತರ ಈ ಪಾತ್ರೆಯನ್ನು ಸ್ಟವ್ ನಿಂದ ಇಳಿಸಿ ತಿಂಗಿನ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವಿನ ಸೊಪ್ಪು ಇಷ್ಟರಿಂದ ಒಗ್ಗರಣೆಯನ್ನು ಮಾಡಿ ಇಗಾಗಲೇ ಮಾಡಿಟ್ಟ ಸಾಂಬಾರಿಗೆ ಹಾಕಿ. ರುಚಿಯಾದ ಉಡುಪಿ ಶೈಲಿಯ ಸಾಂಬಾರ್ ರೆಡಿ.
(make Taste and make a delicious dal sambar of Udupi style)