ದಕ್ಷಿಣ ಭಾರತದ ಪ್ರಸಿದ್ಧ ಸಿಹಿ ಪಾಯಸ. ಪಾಯಸದ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಡಯೇಟ್ ಮಾಡುವವರಿಗಾಗಿ ನಮ್ಮ ಇವತ್ತಿನ ಸ್ಪೇಷಲ್ ಓಟ್ಸ್, ಕಡಲೆಬೇಳೆ ಪಾಯಸ. ಬಾಯಿಗೆ ರುಚಿಯ ಜೊತೆಗೆ ಆರೋಗ್ಯಕಕ್ಕು ಒಳ್ಳೆಯದು ಈ ಪಾಯಸ. ಮನೆಯಲ್ಲೇ ಸುಲಭವಾಗಿ ತಯಾರಿಸ ಬಹುದು.

ಓಟ್ಸ್ ಹಾಗೂ ಕಡಲೆಬೇಳೆ ಪಾಯಸ ಮಾಡಲು ಬೇಕಾಗುವ ಸಾಮಾಗ್ರಿಗಳು : ಓಟ್ಸ್ ಅರ್ಧ ಬಟ್ಟಲು, ಕಡಲೆ ಬೇಳೆ ನೆನೆಸಿದ್ದು ಕಾಲು ಬಟ್ಟಲು, ಬೆಲ್ಲ ಅರ್ಧ ಬಟ್ಟಲು, ಹಸಿ ತೆಂಗಿನ ತುರಿ ಅರ್ಧ ಬಟ್ಟಲು, ತುಪ್ಪ ಎರಡು ದೊಡ್ಡ ಚಮಚ, ಗೋಡಂಬಿ-ದ್ರಾಕ್ಷಿ ತುಪ್ಪದಲ್ಲಿ ಹುರಿದದ್ದು, ಏಲಕ್ಕಿ ಪುಡಿ ಸ್ವಲ್ಪ, ಪಚ್ಚ ಕರ್ಪೂರ ಚಿಟಿಕೆ.
ಇದನ್ನೂ ಓದಿ: vegitable cutlet : ಸುಲಭವಾಗಿ ಮಾಡಬಹುದು ವೆಜಿಟೆಬಲ್ ಕಟ್ಲೆಟ್

ಈ ಪಾಯಸ ಮಾಡುವ ವಿಧಾನ : ಬಾಣಲೆಯಲ್ಲಿ 1 ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ಓಟ್ಸ್ ಅನ್ನು ಹದವಾಗಿ ಹುರಿಯಿರಿ. ಕುಕ್ಕರ್ ನಲ್ಲಿ ಓಟ್ಸ್, ಕಡಲೆ ಬೇಳೆ 2 ಬಟ್ಟಲು ನೀರು ಸೇರಿಸಿ 3 ಸೀಟಿ ಕೂಗಿಸಿ. ತಣ್ಣಗಾದ ನಂತರ ಬೆಲ್ಲ, ಏಲಕ್ಕಿ ಪುಡಿ, ಪಚ್ಚ ಕರ್ಪೂರ, ಮಿಕ್ಕ ತುಪ್ಪ ಸೇರಿಸಿ ಹದವಾಗಿ ಬೇಯಿಸಿ.

ನಂತರ ಅರ್ಧ ಬಟ್ಟಲು ಹಾಲನ್ನು ಸೇರಿಸಿ ಕುದಿಸಿ. ಅಲಂಕಾರಕ್ಕೆ ಪಿಸ್ತಾ ಹಾಗೂ ಓಟ್ಸ್ ಚೂರನ್ನು ಹಾಕಿ. ಈಗ ಓಟ್ಸ್ ಹಾಗೂ ಕಡಲೆ ಬೇಳೆ ಪಾಯಸ ಸವಿಯಲು ಸಿದ್ಧ. ರುಚಿಯಾಗಿರುವ ಈ ಪಾಯಸವನ್ನು ಒಮ್ಮೆ ತಿಂದವರು ಮತ್ತೆ ಬಿಡುವ ಮಾತೇ ಇಲ್ಲಾ.
ಇದನ್ನೂ ಓದಿ: ಖೀರ್ ತಿಂದು ಬೇಜಾರಾಗಿದ್ಯಾ ? ಹಾಗಾದ್ರೆ ಒಮ್ಮೆ ಟ್ರೈ ಮಾಡಿ ಕ್ಯಾರೆಟ್ ಖೀರ್ !
(Try oats and peanut payasam)