ಸೋಮವಾರ, ಏಪ್ರಿಲ್ 28, 2025
HomeSpecial StoryGooseberry Chocolate :ಎಂದಾದರೂ ತಿಂದಿದ್ದಿರಾ ನೆಲ್ಲಿಕಾಯಿ ಚಾಕಲೇಟ್‌ ?

Gooseberry Chocolate :ಎಂದಾದರೂ ತಿಂದಿದ್ದಿರಾ ನೆಲ್ಲಿಕಾಯಿ ಚಾಕಲೇಟ್‌ ?

- Advertisement -

(Gooseberry Chocolate)ನೆಲ್ಲಿಕಾಯಿಯಿಂದ ಉಪ್ಪಿನಕಾಯಿ,ಜಾಮ್‌ , ಸಾರು ಹೀಗೆ ಹಲವು ಬಗೆಯ ಪಾಕ ವಿಧಾನ ಮಾಡಿ ಸೇವನೆ ಮಾಡುತ್ತಾರೆ. ನೆಲ್ಲಿಕಾಯಿಯಿಂದ ಮಾಡಿದ ಹಲವು ಬಗೆಯ ಪಾಕ ವಿಧಾನ ತಿನ್ನುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಹಾಗಾಗಿ ನೆಲ್ಲಿಕಾಯಿ ಚಾಕಲೇಟ್‌ ಮಾಡಿ ಕೊಟ್ಟರೆ ಇನ್ನು ಉತ್ತಮ. ಎಲ್ಲರೂ ಕೂಡ ನೆಲ್ಲಿಕಾಯಿ ಚಾಕಲೇಟ್‌ ಇಷ್ಟ ಪಟ್ಟು ತಿನ್ನುತ್ತಾರೆ. ನೆಲ್ಲಿಕಾಯಿ ಚಾಕಲೆಟ್‌ ತಯಾರಿಸುವುದು ಹೇಗೆ ಎಂಬ ಮಾಹಿತಿಯ ಕುರಿತು ತಿಳಿಯೋಣ.

(Gooseberry Chocolate)ಬೇಕಾಗುವ ಸಾಮಾಗ್ರಿಗಳು:

  • ನೆಲ್ಲಿಕಾಯಿ
  • ಬೆಲ್ಲದ ಪುಡಿ
  • ಇಂಗು
  • ಕಾಳು ಮೆಣಸಿನ ಪುಡಿ
  • ಜೀರಿಗೆ ಪುಡಿ
  • ಶುಂಠಿ ಪುಡಿ
  • ಕಪ್ಪು ಉಪ್ಪು
  • ಮಾವಿನ ಪುಡಿ
  • ಸಕ್ಕರೆ ಪುಡಿ

ಮಾಡುವ ವಿಧಾನ:

ಮೊದಲಿಗೆ ನೆಲ್ಲಿಕಾಯಿಯನ್ನು ಬೆಯಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ರುಬ್ಬಿಕೊಂಡ ನೆಲ್ಲಿಕಾಯಿ, ಬೆಲ್ಲ ಹಾಕಿಕೊಂಡು ಬೇಯಿಸಿಕೊಳ್ಳಬೇಕು ಅದಕ್ಕೆ ಇಂಗು, ಕಾಳು ಮೆಣಸಿನ ಪುಡಿ,ಜೀರಿಗೆ ಪುಡಿ,ಶುಂಠಿ ಪುಡಿ , ಕಪ್ಪು ಉಪ್ಪು, ಮಾವಿನ ಪುಡಿ ಹಾಕಿ ದಪ್ಪ ಹದ ಬರುವವರೆಗೆ ಸೌಟನ್ನು ಆಡಿಸಬೇಕು. ಅನಂತರ ಆ ಮಿಶ್ರಣವನ್ನು ಉಂಡೆಯನ್ನಾಗಿ ಮಾಡಿಕೊಂಡು ಪುಡಿಮಾಡಿ ಇಟ್ಟುಕೊಂಡ ಸಕ್ಕರೆಯ ಮೇಲೆ ಹೊರಡಿಸಿ ಕೋಟ್‌ ಮಾಡಿಕೊಂಡರೆ ಆರೋಗ್ಯಕ್ಕೆ ಉತ್ತಮವಾದ ರುಚಿಕರ ಚಾಕಲೆಟ್‌ ತಿನ್ನಲು ರೆಡಿ.

ಇದನ್ನೂ ಓದಿ:kaju katli :ದುಬಾರಿ ಬೆಲೆಯ ಕಾಜು ಕಟ್ಲಿ ಮನೆಯಲ್ಲೇ ತಯಾರಿಸಿಕೊಳ್ಳಿ

ಇದನ್ನೂ ಓದಿ:Banana Kesaribath Recipe :ತುಪ್ಪ ಬಳಸದೆ ರುಚಿಯಾಗಿ ಬಾಳೆಹಣ್ಣಿನ ಕೇಸರಿ ಬಾತ್‌ ತಯಾರಿಸಿ

ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಅಂಶ ಇರುವುದರಿಂದ ಚರ್ಮದಲ್ಲಿ ಕೊಲಜನ್‌ ಉತ್ಪಾದನೆಯನ್ನು ಹೆಚ್ಚಿಸಿ ತ್ವಚೆಯ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ. ಇದನ್ನು ಸೇವನೆ ಮಾಡುವುದರಿಂದ ಕೂದಲಿಗೆ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ಫೈಬರ್‌ ಮತ್ತು ಕಬ್ಬಿಣಾಂಶ ಹೆಚ್ಚಾಗಿ ಇರುವುದರಿಂದ ಇದನ್ನು ಸೇವನೆ ಮಾಡಿದರೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ನೆಲ್ಲಿಕಾಯಿಯೊಂದಿಗೆ ತುಪ್ಪ ಮತ್ತು ಜೇನುತುಪ್ಪ ಬೇರೆಸಿ ತಿನ್ನುವುದರಿಂದ ಕಣ್ಣಿನ ಪೊರೆಯಿಂದ ಮುಕ್ತಿ ನೀಡುತ್ತದೆ. ಮತ್ತು ಕಣ್ಣುಗಳ ತುರಿಕೆಯನ್ನು ಕಡಿಮೆ ಮಾಡುತ್ತದೆ. ನೆಲ್ಲಿಕಾಯಿಯಲ್ಲಿ ಹೆರಳವಾಗಿ ಆಂಟಿ ಆಕ್ಸಿಡೆಂಟ್‌ ಗುಣ ಹೊಂದಿದೆ ಮತ್ತು ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ತಡೆಯುವ ಶಕ್ತಿ ಇದರಲ್ಲಿ ಇದೆ. ಅಷ್ಟೇ ಅಲ್ಲದೆ ತೂಕವನ್ನು ಕೂಡ ಇಳಿಸಿಕೊಳ್ಳಲು ಸಹಕಾರಿ ಆಗಿದೆ. ಜೇನುತುಪ್ಪ ಮತ್ತು ನೆಲ್ಲಿಕಾಯಿ ರಸವನ್ನು ಮಿಶ್ರಣಮಾಡಿಕೊಂಡು ಸೇವನೆ ಮಾಡುವುದರಿಂದ ಶೀತ ,ಕೆಮ್ಮು, ಕಫ ನಿವಾರಣೆ ಆಗುತ್ತದೆ. ನೆಲ್ಲಿಕಾಯಿ ರುಬ್ಬಿಕೊಂಡು ಪೇಸ್ಟ್‌ ತಯಾರಿಸಿ ಅದನ್ನು ಕಣ್ಣಿನ ಸುತ್ತ ಹಚ್ಚಿಕೊಂಡರೆ ಡಾರ್ಕ್‌ ಸರ್ಕಲ್‌ ಕಡಿಮೆ ಆಗುತ್ತದೆ. ನೆಲ್ಲಿಕಾಯಿಯನ್ನು ತುಪ್ಪದಲ್ಲಿ ಹುರಿದುಕೊಂಡು ಪೇಸ್ಟ್‌ ಮಾಡಿಕೊಂಡು ಹಣೆಯ ಮೇಲೆ ಲೇಪನ ಮಾಡುವುದರಿಂದ ಮೂಗಿನ ರಕ್ತ ಸೋರಿಕೆಯನ್ನು ತಡೆಯುತ್ತದೆ.

Gooseberry Chocolate Have you ever eaten gooseberry chocolate?

RELATED ARTICLES

Most Popular