ಮಂಗಳವಾರ, ಏಪ್ರಿಲ್ 29, 2025
HomeSpecial StoryMango Candy Recipe : ಹುಳಿ ಮಾವಿನ ಕಾಯಿಯ ಮ್ಯಾಂಗೋ ಕ್ಯಾಂಡಿ ಮನೆಯಲ್ಲೇ ತಯಾರಿಸಿಕೊಳ್ಳಿ

Mango Candy Recipe : ಹುಳಿ ಮಾವಿನ ಕಾಯಿಯ ಮ್ಯಾಂಗೋ ಕ್ಯಾಂಡಿ ಮನೆಯಲ್ಲೇ ತಯಾರಿಸಿಕೊಳ್ಳಿ

- Advertisement -

(Mango Candy Recipe)ಮಾವಿನ ಹಣ್ಣಿನ ಸೀಸನ್‌ ಬಂದಾಗ ಎಲ್ಲರ ಮನೆಯಲ್ಲೂ ಈ ಮಾವಿನ ಹಣ್ಣನ್ನು ಮಿಸ್‌ ಮಾಡದೆ ತರುತ್ತಾರೆ .ಮಾವಿನ ಹಣ್ಣಿನ ಹೆಸರು ಕೇಳಿದಾಗ ಬಾಯಲ್ಲಿ ನೀರೂರಿಸುತ್ತದೆ ಇನ್ನು ಇದರಿದ ತಯಾರಿಸಿದ ತಂಬೂಳಿ, ರಸಾಯನ, ಕೇಸರಿ ಬಾತ್‌ ಹಲವು ಬಗೆಯ ಅಡಗೆಯನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಅಷ್ಟೇ ಅಲ್ಲದೆ ಮಾವಿನ ಕಾಯಿಯನ್ನು ತಿನ್ನುವರ ಸಂಖ್ಯೆ ಎನು ಕಡಿಮೆ ಇಲ್ಲ ಮಾವಿನ ಕಾಯಿಯನ್ನು ಕತ್ತರಿಸಿ ಅದಕ್ಕೆ ಉಪ್ಪು, ಕಾರದ ಪುಡಿ ಹಾಕಿ ತಿನ್ನುತ್ತಾರೆ. ಮಾವಿನ ಕಾಯಿಯಿಂದ ಕ್ಯಾಂಡಿ ಕೂಡ ಮಾಡಬಹುದು. ಈ ಮ್ಯಾಂಗೋ ಕ್ಯಾಂಡಿ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

Mango Candy Recipe : ಬೇಕಾಗುವ ಸಾಮಾಗ್ರಿಗಳು:

  • ಮಾವಿನ ಕಾಯಿ
  • ತುಪ್ಪ
  • ಇಂಗು
  • ಬೆಲ್ಲ
  • ಕಪ್ಪು ಉಪ್ಪು
  • ಜೀರಿಗೆ ಪುಡಿ
  • ಗರಂ ಮಸಾಲ
  • ಕಾಳು ಮೆಣಸು ಪುಡಿ
  • ಆಮಚೂರ್ ಪುಡಿ

ಮಾಡುವ ವಿಧಾನ

ಕತ್ತರಿಸಿದ ಮಾವಿನಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಬೌಲ್ ನಲ್ಲಿ ಇಟ್ಟುಕೊಳ್ಳಬೇಕು. ಬಾಣಲೆಗೆ ತುಪ್ಪ ಹಾಕಿಕೊಂಡು ಕಾದನಂತರ ಇಂಗು, ರುಬ್ಬಿಕೊಂಡ ಮಾವಿನಕಾಯಿ ಹಾಕಿ ಸೌಟು ಆಡಿಸಬೇಕು. ಅದಕ್ಕೆ ಬೆಲ್ಲ ಹಾಕಿ ಮಿಶ್ರಣ ಆಗುವ ವರೆಗೆ ಸೌಟನ್ನು ಆಡಿಸಬೇಕು. ನಂತರ ಕಪ್ಪು ಉಪ್ಪು , ಜೀರಿಗೆ ಪುಡಿ, ಗರಂ ಮಸಾಲ, ಕಾಳು ಮೆಣಸು ಪುಡಿ, ಆಮಚೂರ್‌ ಪುಡಿ ಹಾಕಿ ಮಿಶ್ರಣ ಮಾಡಿಕೊಂಡು ಸೌಟು ಆಡಿಸಬೇಕು. ದಪ್ಪ ಹದ ಬರುತ್ತಿದ್ದ ಹಾಗೆ ಗ್ಯಾಸ್‌ ಆರಿಸಿ ಬೌಲ್‌ ಗೆ ಇದನ್ನು ಹಾಕಿಕೊಂಡು ಉಂಡೆ ಮಾಡಿಕೊಳ್ಳಬೇಕು. ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿಕೊಂಡ ಸಕ್ಕರೆ ಪುಡಿಯ ಮೇಲೆ ಈ ಉಂಡೆಯನ್ನು ಹೊರಡಿಸಿ ಕೋಟ್‌ ಮಾಡಿಕೊಂಡರೆ ಮ್ಯಾಂಗೋ ಕ್ಯಾಂಡಿ ರೆಡಿ.

ಇದನ್ನೂ ಓದಿ:Guava Jam Recipe:ಸೀಬೆ ಹಣ್ಣಿನ ಜಾಮ್‌ ಮನೆಯಲ್ಲಿಯೇ ತಯಾರಿಸಿ : ಇಲ್ಲಿದೆ ಟಿಫ್ಸ್‌

ಇದನ್ನೂ ಓದಿ:Flax Seed Gel:ತಲೆ ಕೂದಲು ಕಪ್ಪಾಗಬೇಕೆ ? ಹಾಗಾದ್ರೆ ಬಳಸಿ ಅಗಸೆ ಬೀಜದ ಜೆಲ್

ಇದನ್ನೂ ಓದಿ:Dates Health Tips:ಖರ್ಜೂರ ಉಂಡೆ ತಿಂದು ಆರೋಗ್ಯ ಕಾಪಾಡಿಕೊಳ್ಳಿ

ಮಾವಿನ ಕಾಯಿಯನ್ನು ತಿನ್ನುವುದರಿಂದ ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮಾವಿನ ಕಾಯಿಯನ್ನು ತಿನ್ನುವುದರಿಂದ ದೇಹದಲ್ಲಿನ ಕೊಬ್ಬಿನ ಅಂಶ ಶೇಖರಣೆ ಆಗದಂತೆ ತಡೆಯುತ್ತದೆ.ಮಾವಿನ ಕಾಯಿಯಲ್ಲಿ ಇರುವ ನಾರಿನ ಅಂಶ, ಪ್ರೋಟೀನ್‌ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಮಾವಿನ ಕಾಯಿಯಲ್ಲಿ ವಿಟಮಿನ್‌ ಎ ಮತ್ತು ಸಿ ಅಂಶ ಹೇರಳವಾಗಿ ಇರುವುದರಿಂದ ತ್ವಚೆಯ ಹಾನಿಯನ್ನು ತಪ್ಪಿಸುತ್ತದೆ.

Mango Candy Recipe Make sour mango candy at home

RELATED ARTICLES

Most Popular