ಭಾನುವಾರ, ಏಪ್ರಿಲ್ 27, 2025
HomeSpecial Storyಗರಿಗರಿಯಾದ ಆಲೂಗಡ್ಡೆ ದೋಸೆ ! ಒಮ್ಮೆ ತಿಂದ್ರೆ ಮತ್ತೆ ಮತ್ತೆ ಟ್ರೈ ಮಾಡ್ತೀರಾ

ಗರಿಗರಿಯಾದ ಆಲೂಗಡ್ಡೆ ದೋಸೆ ! ಒಮ್ಮೆ ತಿಂದ್ರೆ ಮತ್ತೆ ಮತ್ತೆ ಟ್ರೈ ಮಾಡ್ತೀರಾ

- Advertisement -

ಪ್ರತಿದಿನ ಮಾಮೂಲಿ ದೋಸೆ ಮಾಡಿದರೆ ಮನೆ ಮಂದಿಯೆಲ್ಲಾ ತಿಂದಿದ್ದೇ ತಿಂದು ಬೊರ್‌ ಆಗಿದೆ ಅಂತಾರೆ. ಹೀಗಿರುವಾಗ ಎಲ್ಲರೂ ಇಷ್ಟಪಟ್ಟು ತಿನ್ನಲು ಹೊಸ ರೀತಿಯ ದೋಸೆಯನ್ನ ಟ್ರೈ ಮಾಡಿ ನೋಡಿ. ಆಲೂಗಡ್ಡೆ ಪರೋಟ, ಸಾಗು, ಪಲ್ಯ ಇನ್ನಿತರ ಖಾದ್ಯಗಳನ್ನು ಸವಿದಿರುತ್ತೀರಿ, ಆದರೆ ಆಲೂಗಡ್ಡೆ ದೋಸೆಯನ್ನ ಎಂದಾದರೂ ಟೇಸ್ಟ್ ಮಾಡಿದ್ದೀರಾ ?

ಅರೇ… ಆಲೂಗಡ್ಡೆಯಿಂದ ದೋಸೆನಾ ಅಂತ ಆಶ್ಚರ್ಯ ಪಡ್ಬೇಡಿ. ಹೌದು, ಈ ಆಲೂಗಡ್ಡೆ ದೋಸೆಯನ್ನೊಮ್ಮೆ ಟ್ರೈ ಮಾಡಿ. ರುಚಿ ರುಚಿಯಾಗಿ ಮನೆಯವರೆಲ್ಲಾ ಇನ್ನೊಮ್ಮೆ ಇದೇ ಆಲೂಗಡ್ಡೆ ದೋಸೆ ಮಾಡಿ ಎಂದು ಹಠ ಮಾಡುವಷ್ಟು ಚೆನ್ನಾಗಿದೆ ಈ ರೆಸಿಫಿ.

ಆಲೂಗಡ್ಡೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು : 3 ಬೇಯಿಸಿದ ಆಲೂಗಡ್ಡೆ, 1½ ಕಪ್ ಅಕ್ಕಿ ಹಿಟ್ಟು, ¼ ಕಪ್ ರವೆ, 1 ಚಮಚ ಉಪ್ಪು, 1 ಈರುಳ್ಳಿ, 2 ಚಮಚ ಕೊತ್ತಂಬರಿ ಸೊಪ್ಪು, 2 ಮೆಣಸಿನಕಾಯಿ, ಕರಿಬೇವಿನ ಎಲೆಗಳು, 1 ಚಮಚ ಜೀರಿಗೆ, ಎಣ್ಣೆ, ನೀರು

ಮಾಡುವ ವಿಧಾನ : ಮೊದಲಿಗೆ ಮಿಕ್ಸಿ ಜಾರ್ ಗೆ 3 ಬೇಯಿಸಿದ ಆಲೂಗಡ್ಡೆಯನ್ನು ಕತ್ತರಿಸಿ, ಹಾಕಿ. ಅದಕ್ಕೆ 1 ಕಪ್ ನೀರು ಸೇರಿಸಿ, ನಯವಾದ ಪೇಸ್ಟ್ ತಯಾರಿಸಿ, ಬಟ್ಟಲಿಗೆ ಹಾಕಿಕೊಳ್ಳಿ. ಅದಕ್ಕೆ 1½ ಕಪ್ ಅಕ್ಕಿ ಹಿಟ್ಟು, ¼ ಕಪ್ ರವೆ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ, 5 ಕಪ್ ನೀರು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣದಲ್ಲಿ ಗಂಟಿಲ್ಲ ಎಂಬುದನ್ನು ಸರಿಯಾಗಿ ಗಮನಿಸಿ, ಮತ್ತಷ್ಟು ಮಿಶ್ರಣ ಮಾಡಿ.

ಮುಂದೆ ಇದಕ್ಕೆ 1 ಈರುಳ್ಳಿ, ಕೊತ್ತಂಬರಿ ಸೊಪ್ಪು, 2 ಮೆಣಸಿನಕಾಯಿ, ಕರಿಬೇವು ಮತ್ತು 1 ಟೀಸ್ಪೂನ್ ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ರವೆ ಚೆನ್ನಾಗಿ ನೆನೆಯಲು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. 10 ನಿಮಿಷಗಳ ನಂತರ, ಅಗತ್ಯವಿದ್ದರೆ ನೀರನ್ನು ಸೇರಿಸಿ, ಹಿಟ್ಟು ನೀರು ದೋಸೆಯ ಹದದಲ್ಲಿರಲಿ. ನಂತರ ಪ್ಯಾನ್ ಬಿಸಿಗಿಟ್ಟು, ಹಿಟ್ಟನ್ನು ಪ್ಯಾನ್ ಮೇಲೆ ಸುರಿಯಿರಿ. ಅದರ ಮೇಲೆ 1 ಟೀಸ್ಪೂನ್ ಎಣ್ಣೆಯನ್ನು ಹಾಕಿ, 2 ನಿಮಿಷಗಳ ಕಾಲ ಅಥವಾ ದೋಸೆ ಗರಿಗರಿಯಾಗುವವರೆಗೆ ಹುರಿಯಲು ಬಿಡಿ. ಕೊನೆಯದಾಗಿ ಚಟ್ನಿಯೊಂದಿಗೆ ಸವಿಯಲು ಗರಿಗರಿಯಾದ ಆಲೂ ದೋಸೆ ಸವಿಯಲು ಸಿದ್ಧ.

ಇದನ್ನೂ ಓದಿ : ಫಟಾಫಟ್ ರೆಡಿ ಮಾಡಿ ಕಡಲೆಹಿಟ್ಟಿನ ದೋಸೆ

ಇದನ್ನೂ ಓದಿ : ಅವಲಕ್ಕಿ ತಿಂದು ಬೇಸರವಾಯ್ತಾ : ಹಾಗಾದ್ರೆ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಟ್ರೈ ಮಾಡಿ

RELATED ARTICLES

Most Popular