ಭಾನುವಾರ, ಏಪ್ರಿಲ್ 27, 2025
HomeSpecial StorySabbakki Idli: ಬೆಳಗ್ಗಿನ ತಿಂಡಿಗೆ ತಯಾರಿಸಿ ವಿಭಿನ್ನವಾದ ಸಬ್ಬಕ್ಕಿ ಇಡ್ಲಿ

Sabbakki Idli: ಬೆಳಗ್ಗಿನ ತಿಂಡಿಗೆ ತಯಾರಿಸಿ ವಿಭಿನ್ನವಾದ ಸಬ್ಬಕ್ಕಿ ಇಡ್ಲಿ

- Advertisement -

(Sabbakki Idli) ಸಬ್ಬಕ್ಕಿ ಎಂದ ತಕ್ಷಣ ಎಲ್ಲರಿಗೆ ನೆನಪಾಗುವುದು ಸಬ್ಬಕ್ಕಿಯ ಪಾಯಸ. ಹೆಚ್ಚಿನ ಮನೆಗಳಲ್ಲಿ ಹಬ್ಬ ಹರಿದಿನಕ್ಕೆ ಸಬ್ಬಕ್ಕಿಯ ಪಾಯಸ ಸಾಮಾನ್ಯ. ಸಬ್ಬಕ್ಕಿಯಿಂದ ಪಾಯಸ ಮಾತ್ರವಲ್ಲದೆ ಅನೇಕ ವಿಧದ ಖಾದ್ಯಗಳನ್ನು ಕೂಡ ಮಾಡಲಾಗುತ್ತದೆ. ಸಬ್ಬಕ್ಕಿ ಖಿಚಡಿ, ಸಬ್ಬಕ್ಕಿ ವಡೆ, ಸಬ್ಬಕ್ಕಿ ದೋಸೆ, ಸಬ್ಬಕ್ಕಿಯ ಸಂಡಿಗೆ, ಹಪ್ಪಳ ಹೀಗೆ ಬೇರೆ ಬೇರೆ ಊರುಗಳಲ್ಲಿ ಸಬ್ಬಕ್ಕಿಯನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ. ಇದರಲ್ಲಿ ಒಂದು ಸಬ್ಬಕ್ಕಿ ಇಡ್ಲಿ. ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.ನಾವು ಇಂದು ಮೃದುವಾದ ಸಬ್ಬಕ್ಕಿ ಇಡ್ಲಿಯನ್ನು ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಡಲಿದ್ದೇವೆ. ಇದು ಬೆಳಗಿನ ಉಪಹಾರದ ಜೊತೆಗೆ ಸಂಜೆಯ ಕಾಫಿಗೂ ಹೇಳಿ ಮಾಡಿಸಿದ್ದು. ಹಾಗಿದ್ದರೆ ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ ಹೇಗೆ ಎನ್ನುವುದನ್ನು ತಿಳಿಯೋಣ ಬನ್ನಿ

ಸಬ್ಬಕ್ಕಿ ಇಡ್ಲಿ (Sabbakki Idli) ಮಾಡಲು ಬೇಕಾಗುವ ಸಾಮಾಗ್ರಿಗಳು:
4 ಕಪ್ ಸಬ್ಬಕ್ಕಿ
4 ಕಪ್ ಮೊಸರು
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಕರಿಬೇವು
ಜೀರಿಗೆ
ಇಂಗು
ಉಪ್ಪು
ತುಪ್ಪ
ಹಸಿಶುಂಠಿ

ಮಾಡುವ ವಿಧಾನ:
ಮೊದಲಿಗೆ ಸ್ವಲ್ಪ ಸಬ್ಬಕ್ಕಿಯನ್ನು ಹುರಿದುಕೊಳ್ಳಿ. ನಂತರ ಹುರಿದ ಸಬ್ಬಕ್ಕಿಯನ್ನು ಮೊಸರಿನೊಂದಿಗೆ ಸೇರಿಸಿ ಮಿಕ್ಸ್‌ ಮಾಡಿಕೊಳ್ಳಿ. ಮಿಕ್ಸ್‌ ಮಾಡಿಕೊಂಡ ಸಬ್ಬಕ್ಕಿ ಮತ್ತು ಮೊಸರಿಗೆ ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಹಾಕಿ. ನಂತರ ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ ಜೀರಿಗೆ, ಇಂಗು, ಕರಿಬೇವು ಹಾಕಿ ಒಗ್ಗರಣೆಯನ್ನು ತಯಾರಿಸಿ ಹಿಟ್ಟಿಗೆ ಸೇರಿಸಿ. ಆನಂತರ ಹಿಟ್ಟನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು ಬೇಯಿಸಿ.

ಇದನ್ನೂ ಓದಿ : Egg Pulav: 15 ನಿಮಿಷದಲ್ಲಿ ತಯಾರಿಸಿ ರುಚಿ ರುಚಿಯಾದ ಮೊಟ್ಟೆ ಪಲಾವ್‌

ಇದನ್ನೂ ಓದಿ : Beet root halwa : ಬೀಟ್‌ ರೂಟ್‌ ಹಲ್ವಾದ ರುಚಿ ನಿಮಗೆ ಗೊತ್ತಾ ? ಮನೆಯಲ್ಲೇ ಮಾಡಿ ಅಪರೂಪದ ಖಾದ್ಯ

ಇದೀಗ ರುಚಿಯಾದ ಹಾಗೂ ಆರೋಗ್ಯಕರವಾದ ಸಬ್ಬಕ್ಕಿ ಇಡ್ಲಿ ಬೆಳಗ್ಗಿನ ತಿಂಡಿಗೆ ಸಿದ್ದ. ಇದನ್ನು ಚಟ್ನಿ ಜೊತೆಗೆ ಕೂಡ ಸೇವಿಸಬಹುದು. ಇದೊಂದು ಆರೋಗ್ಯಕರವಾದ ಇಡ್ಲಿಯಾಗಿದ್ದು, ವಿಟಮಿನ್‌ ಡಿ ಯಲ್ಲಿ ಸಮೃದ್ದವಾಗಿರುವ ಕಾರಣ ಮೂಳೆ ಹಾಗೂ ಸ್ನಾಯುಗಳನ್ನು ಬಲಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಒಳ್ಳೆಯದು. ಅಲ್ಲದೆ ಸಬ್ಬಕ್ಕಿ ಇಡ್ಲಿ ಕಾರ್ಬೋಹೈಡ್ರೇಟ್‌ಗಳ ಮೂಲವಾಗಿದ್ದು, ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಜೀರ್ಣಕ್ರೀಯೆಯನ್ನು ಕೂಡ ಸುಧಾರಿಸುತ್ತದೆ. ಉಪವಾಸದ ಸಮಯಗಳಲ್ಲಿ ಇದನ್ನು ಮಾಡಿ ತಿನ್ನಬಹುದು. ಪ್ರತಿಯೊಬ್ಬರು ಮಾಮುಲಿ ತಿನ್ನುವ ಇಡ್ಲಿಯನ್ನು ನೋಡಿರುತ್ತೀರಿ, ತಿಂದೂ ಇರುತ್ತೀರಿ. ಇದೊಂದು ವಿಭಿನ್ನ ಶೈಲಿಯ ಇಡ್ಲಿಯಾಗಿದ್ದು, ಮಾಮುಲಿ ಇಡ್ಲಿಗಿಂತ ಹೆಚ್ಚಿಗೆ ರುಚಿಯನ್ನು ನೀಡುತ್ತದೆ.

(Sabbakki Idli) Sabbakki Idli is what immediately comes to everyone’s mind. Sabbakki’s Payas is common for festivals in most homes. Sabbakki is used to make not only Payas but also many types of dishes. Sabbakki Khichdi, Sabbakki Vade, Sabbakki Dosa, Sabbakki Sandige, Happala etc. are used in different ways in different towns.

RELATED ARTICLES

Most Popular