ಬೆಂಗಳೂರು : ರಾಜ್ಯದಲ್ಲಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರ, ಮೋದಿ ( PM Narendra Modi ) ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೂ ಬಿಬಿಎಂಪಿ ಮಾತ್ರ ಇನ್ನೂ ಗಾಡ ನಿದ್ರೆಯಲ್ಲಿದ್ದು ನಗರದಲ್ಲಿ ರೋಗಿಗಳಿಗೆ ಮಾಹಿತಿ ನೀಡುವ ಕಾಲ್ ಸೆಂಟರ್ (BBMP Helpline number) ಇನ್ನೂ ನಿಶಬ್ಧವಾಗಿದೆ.
ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಭೀತಿ ಎದುರಾಗಿದೆ.ಫೆಬ್ರವರಿ ವೇಳೆಗೆ ಕೊರೋನಾ ಉಲ್ಬಣಿಸುವ ಸಾದ್ಯತೆ ಕೂಡ ಇದೆ. ಆದರೂ ಬಿಬಿಎಂಪಿ ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದು, ಜನರಿಗೆ ಕೊರೋನಾ ಚಿಕಿತ್ಸೆ,ಬೆಡ್ ಆಕ್ಸಿಜನ್ ಸೇರಿದಂತೆ ಅಗತ್ಯ ಮಾಹಿತಿನೀಡಬೇಕಾದ ಕಾಲ್ ಸೆಂಟರ್ ಇನ್ನು ನಿದ್ರಾವಸ್ಥೆಯಲ್ಲಿದೆ. ಕೊರೋನಾ ಎರಡನೇ ಅಲೆಯ ವೇಳೆ ಪಾಲಿಕೆ 1533 ನಂಬರಿನ ಹೆಲ್ಪ್ ಲೈನ್ ಸ್ಥಾಪಿಸಿತ್ತು. ಸೋಂಕಿತರ ಚಿಕಿತ್ಸೆ, ಕೋವಿಡ್ ಬಗ್ಗೆ ಮಾಹಿತಿ, ಐಸಿಯು, ಅಂಬುಲೆನ್ಸ್ ಸೇರಿದಂತೆ ಇತರೆ ಮಾಹಿತಿ ಒಳಗೊಂಡ ಹೆಲ್ಪ್ ಲೈನ್ ಇದಾಗಿತ್ತು. ಈಗ ಈ ನಂಬರ್ ಸ್ಥಗಿತಗೊಂಡಂತಾಗಿದೆ.
ಕಳೆದ ಬಾರಿ ಕೋವಿಡ್ ಬಂದಾಗ ಜನರಿಗೆ ಅಸ್ಪತ್ರೆ, ಬೆಡ್, ಐಸಿಯು , ಅಂಬುಲೆನ್ಸ್ ಬಗ್ಗೆ ಮಾಹಿತಿ ಕೊಡುತ್ತಿದ ಹೆಲ್ಪ್ ಸೆಂಟರ್ ಗೆ ಈಗ ಕರೆ ಮಾಡಿದ್ರೇ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಈಗ 1533 ನಂಬರ್ ಗೆ ಕಾಲ್ ಮಾಡಿದ್ರೆ ಪೋನ್ ತೆಗಿಯೋರೆ ಇಲ್ಲ. ಅಲ್ಲದೇ ದಿನದ 24 ಗಂಟೆಯೂ ಕೊರೋನಾ ಹೆಲ್ಪ್ ಲೈನ್ ನಂಬರ್ ಕಾರ್ಯನಿರತವಾಗಿದೆ ಎಂಬ ಉತ್ತರ ನೀಡುತ್ತಿದೆ.
ಈಗಾಗಲೇ ಮೋದಿಯವರು ಸಭೆ ನಡೆಸಿದ್ದು ಆಕ್ಸಿಜನ್ ಬೆಡ್,ಆಸ್ಪತ್ರೆ, ಹೆಲ್ಪ್ ಲೈನ್ ಗಳನ್ನು ಆರಂಭಿಸುವಂತೆ ಹಾಗೂ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ. ಇನ್ನೊಂದೆಡೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಓಮೈಕ್ರಾನ್ ಕೊರೋನಾ ಹಾಗೂ ಡೆಲ್ಟಾಗಿಂತಲೂ ಅಪಾಯಕಾರಿ ಎಂದಿದ್ದಾರೆ.
ಹೀಗಿದ್ದೂ ಬಿಬಿಎಂಪಿ ಕೊರೋನಾ ಹೆಲ್ಪ್ ಲೈನ್ ನಂಬರ್ ಗೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಮೈಮರೆತಿದ್ದು ಜನಸಾಮಾನ್ಯರು, ಬಡವರು ಹೆಲ್ಪ್ ಲೈನ್ ಗೆ ಕಾಲ್ ಮಾಡಿ ಮಾಹಿತಿ ಸಿಗದೇ ಪರದಾಡುವಂತಾಗಿದೆ. ಕೊರೋನಾ ಎರಡನೇ ಅಲೆ ವೇಳೆ ಕಾಲ್ ಸೆಂಟರ್ ಗೆ ಅಂತಲೇ 30 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಗುತ್ತಿಗೆ ಅಧಾರದ ಮೇಲೆ ನೇಮಿಸಿಲಾಗಿತ್ತು. ಆದರೂ ಈಗ ಹೆಲ್ಪ್ ಲೈನ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಇದನ್ನೂ ಓದಿ : ಡೆಲ್ಟಾಕ್ಕಿಂತ 3 ಪಟ್ಟು ಅಪಾಯಕಾರಿ ಓಮಿಕ್ರಾನ್ : ಶಾಕ್ ಕೊಟ್ಟ ಆರೋಗ್ಯ ಇಲಾಖೆ, ಕಠಿಣ ಕ್ರಮಕ್ಕೆ ಕೇಂದ್ರದ ಸೂಚನೆ
ಇದನ್ನೂ ಓದಿ : ಓಮೈಕ್ರಾನ್ ಬೆನ್ನಲ್ಲೇ ಮಾರಣಾಂತಿಕ ಡೆಲ್ಮಿಕ್ರಾನ್ ಪತ್ತೆ : ಏನಿದರ ರೋಗ ಲಕ್ಷಣ
(Don’t care despite PM Narendra Modi notice: sleep at BBMP helpline number)