ಬೆಂಗಳೂರು : ಆತ್ಮಹತ್ಯೆಗೆ ಶರಣಾಗಿದ್ದ ನಟಿ ಸಾವಿನ ಪ್ರಕರಣ ಇನ್ನೂ ಕಗ್ಗಂಟಾಗಿದೆ. ಸಾವಿನ ಕುರಿತು ಪೊಲೀಸರಿಗೆ ಹಲವು ಅನುಮಾನಗಳು ಶುರುವಾಗಿದೆ. ಈ ನಡುವಲ್ಲೇ ಕುಂಬಳಗೋಡು ಪೊಲೀಸರು ಆಪ್ತ ಸಹಾಯಕ ಮಹೇಶ್ ಹಾಗೂ ನಟ ವಿವೇಕ್ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಕೊಡಗು ಮೂಲದ ನಟಿ ಸೌಜನ್ಯ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನಡೆದಿದೆ. ಸೌಜನ್ಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈಗಾಗಲೇ ಪ್ರಿಯಕರ ನಟ ವಿವೇಕ್ ಹಾಗೂ ಆಪ್ತ ಸಹಾಯಕ ಮಹೇಶ್ ಅವರನ್ನು ವಿಚಾರಣೆ ನಡೆಸಿದ್ದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಪೋಷಕರಿಂದಲೂ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇದೀಗ ಮತ್ತೆ ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಪ್ರಚೋದನೆ ನೀಡುವಂತಹ ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ. ಇನ್ನೊಂದೆಡೆ ವಿವೇಕ್ ಹಾಗೂ ಸೌಜನ್ಯ ನಡುವಿನ ಸಂಬಂಧದ ಬಗ್ಗೆಯೂ ಸ್ಪಷ್ಟನೆ ದೊರೆಯಿಲ್ಲ. ಒಂದೆಡೆ ವಿವೇಕ್ ತಾವು ಲಿವಿಂಗ್ ಟುಗೆದರ್‌ನಲಿ ಇರಲಿಲ್ಲ ಎಂದಿದ್ದಾರೆ. ಆದರೆ ವಿವೇಕ್ ಹಾಗೂ ಸೌಜನ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು ಎಂಬ ಮಾತುಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ಮಾಹಿತಿ ಪಡೆಯಲಿದ್ದಾರೆ.

ಇದನ್ನೂ ಓದಿ : ನನ್ನ ಜೊತೆ ಚೆನ್ನಾಗಿದ್ದವರಿಗೆ ಮಾತ್ರ Love u ! ಕಿರುತೆರೆ ನಟಿ ಸೌಜನ್ಯ ಡೆತ್ ನೋಟ್‌ನಲ್ಲಿ ಏನಿದೆ ಗೊತ್ತಾ ?
ಸೌಜನ್ಯ ಯಾವ ಕಾರಣಕ್ಕೆ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯಲ್ಲಿ ವಿವೇಕ್ ಹಾಗೂ ಮಹೇಶ್ ಪಾತ್ರವಿದೆಯೇ ಅನ್ನೋ ಬಗ್ಗೆ ಖಚಿತತೆ ದೊರೆತಿಲ್ಲ. ಸೌಜನ್ಯ ಬರೆದಿರುವ ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ನಿಖರ ಕಾರಣ ಏನು ಅನ್ನೋದನ್ನು ಉಲ್ಲೇಖಿಸಿಲ್ಲ. ಇನ್ನೊಂದೆಡೆಯಲ್ಲಿ ವಿವೇಕ್ ಕಿರುಕುಳ ನೀಡುತ್ತಿರುವ ಸ್ಪಷ್ಟನೆ ಇಲ್ಲ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೊಂದೆಡೆಯಲ್ಲಿ ವಿವೇಕ್ ಮೊಬೈಲ್, ವಾಟ್ಸಾಪ್ ಚಾಟ್‌ಗಳ ಬಗ್ಗೆಯೂ ಪರಿಶೀಲನೆ ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಪತ್ನಿ ಜೆನಿಲಿಯಾ ಅಶ್ಲೀಲ ಆಂಟಿ ಎಂದವನಿಗೆ ಖಡಕ್ ಉತ್ತರ ಕೊಟ್ಟ ರಿತೇಶ್ ದೇಶಮುಖ್
ಇದನ್ನೂ ಓದಿ : ನಟಿ ಸವಿ ಮಾದಪ್ಪ ಸಾವಿಗೂ ಮುನ್ನ ನಡೆದಿದ್ದೇನು ? ತಾಯಿಗೆ ಹೇಳಿದ್ದೇನು ನಟಿ
( Actor Vivek and Mahesh are being investigated about actress sowjanya Death case )