Bangalore Power Cut Today : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನ ಬೃಹತ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಂದಾಗಿ ಜನವರಿ 28 ರಂದು ಕೆಲವು ಕಡೆಗಳಲ್ಲಿ ವಿದ್ಯುತ್ ಕಡಿತಕ್ಕೆ ಮುಂದಾಗಿದೆ. ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತ (Power Cut ) ಎದುರಾಗಿಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. ವೀಕೆಂಡ್ ಖುಷಿಯಲ್ಲಿದ್ದವರಿಗೆ ಬೆಸ್ಕಾಂ ಇದೀಗ ಕರೆಂಟ್ ಶಾಕ್ ಕೊಟ್ಟಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿರ್ವಹಣೆ ಮತ್ತು ದುರಸ್ಥಿ ಕಾರ್ಯವನ್ನು ನಡೆಸುತ್ತಿದೆ. ನಿರ್ವಹಣಾ ಯೋಜನೆಯಲ್ಲಿ ನವೀಕರಣ, ಲೈನ್ ನಿರ್ವಹಣೆ, ಆಧುನೀಕರಣ, ಕಂಬಗಳ ಸ್ಥಳಾಂತರ, ಓವರ್‌ಹೆಡ್‌ನಿಂದ ನೆಲದಡಿಗೆ ಕೇಬಲ್‌ಗಳನ್ನು ಬದಲಾಯಿಸುವ ಕಾರ್ಯ ನಡೆಯಲಿದೆ.

ಅಲ್ಲದೇ ಆರ್‌ಎಂಯು ನಿರ್ವಹಣೆ, ಟ್ರೀ ಟ್ರಿಮ್ಮಿಂಗ್, ಜಲಸಿರಿ 24 x 7 ನೀರು ಸರಬರಾಜು ಕೆಲಸ ಮತ್ತು ಭೂಗತ ಕೇಬಲ್ ಹಾನಿ ಸರಿಪಡಿಸುವಿಕೆ ಸೇರಿದಂತೆ ಹಲವು ಕೆಲಸಗಳನ್ನು ನಡೆಸಲಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ಕಡಿತವಾಗಲಿದೆ. ಒಂದೊಮ್ಮೆ ನಿಗದಿತ ಅವಧಿಗೂ ಮೊದಲೇ ಕೆಲಸ ಕಾರ್ಯಗಳು ಪೂರ್ಣಗೊಂಡರೆ ವಿದ್ಯುತ್ ಪೂರೈಕೆಯಾಗಲಿದೆ.
ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತ :
ಜನವರಿ 26- ಜನವರಿ 28 ರವರೆಗೆ :
ಕೆಂಪೇಗೌಡ ನಗರ, ಲಗ್ಗೆರೆ, ವೆಲ್‌ಕಾಸ್ಟ್, ಪೀಣ್ಯ 1ನೇ ಹಂತ, ಯಶವಂತಪುರ ಕೈಗಾರಿಕಾ ಪ್ರದೇಶ, ಇಸ್ರೋ, ಜಿಂದಾಲ್, ಓಬಳಾಪುರ, ದೊಡ್ಡಬೆಲೆ, ಕೆರೆಕತ್ತಿಗನೂರು, ಕಾಸರಘಟ್ಟ, ಮಹಿಮಾಪುರ, ಕೊಡಿಗೇಹಳ್ಳಿ, ಮನ್ನೆ ಪಂಚಾಯಿತಿ, ಗೆದ್ದಲಹಳ್ಳಿ, ಲಕ್ಕೇನಹಳ್ಳಿ, ಅರೆಬೊಮ್ಮನಹಳ್ಳಿ, ಅರೆಬೊಮ್ಮನಹಳ್ಳಿ, ಕೆ. ಹಳ್ಳಿ ಹಾಲ್ಕೂರು, ತಿಮ್ಮಸಂದ್ರ, ಲಕ್ಕಸಂದ್ರ, ಸುಲ್ಕುಂಟೆ.
ಜನವರಿ 26 ರಿಂದ ಜನವರಿ 27 ರವರೆಗೆ :
ಚಿಕ್ಕಪೇಟೆ, ಮಂಡಿಪೇಟೆ, ದಿಬ್ಬೂರು, ಪಿ ಆರ್ ನಗರ, ಜಿಸಿಆರ್ ಕಾಲೋನಿ, ವಿನಾಯಕನಗರ, ಬಿ ಜಿ ಪಾಳ್ಯ, ಹಾರೋನಹಳ್ಳಿ ಫೀಡರ್ ಏರಿಯಾ, ಶ್ರೀರಾಮ ನಗರ, ಹೊರಪೇಟೆ, ಅರಿಯೂರು ಪಂಚಾಯತ್ ಮಿತಿ, ಗಲಿಗೇನಳ್ಳಿ ಪಂಚಾಯತ್ ಮಿತಿ ಮತ್ತು ನಾಗವಳ್ಳಿ ಪಂಚಾಯತ್ ಮಿತಿ.
ಇದನ್ನು ಓದಿ : ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಅಂಕಸಂದ್ರ ಪಂಚಾಯಿತಿ ವ್ಯಾಪ್ತಿ, ಗಂಗಯ್ಯನಪಾಳ್ಯ, ತಾಳಿಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಕುಂಟಾರಾಮನಹಳ್ಳಿ, ರಣಲಹಳ್ಳಿ, ಸರಮನಹಳ್ಳಿ, ಮಾದೇನಹಳ್ಳಿ, ಇಡಕನಹಳ್ಳಿ, ಸಿ ಹರಿವಸಂದ್ರ, ನಲ್ಲೂರು, ಇರ್ಕಸಂದ್ರ, ಜಲಗುಣಿ, ಹೆಚ್ ಪಾಳ್ಯ, ನಿಂಬೆಕಾಟೆ, ಕೊಡಿಯಾಲ, ಎಸ್ ಹಳ್ಳಿ, ಕಾಂತರಾಮನಹಳ್ಳಿ ಯರಬಳ್ಳಿ, ತೋವಿನಕೆರೆ, ಸರಿಗೇಹಳ್ಳಿ, ಬ್ಯಾಡರಹಳ್ಳಿ, ರಾಮಡಿಹಳ್ಳಿ, ಮಲ್ಲೇನಹಳ್ಳಿ, ಸಂಪಿಗೆ, ಅಂಗರೇಖನಹಳ್ಳಿ, ಹಳೇಸಂಪಿಗೆ, ರಾಘದೇವನಹಳ್ಳಿ, ಬಸವಪುರ, ಮಾಚೇನಹಳ್ಳಿ, ದೊಡ್ಡಹಟ್ಟಿ, ಬಿ.ಸಿ.ಕಾವಲ್, ಯಲ್ಲದಭಾಗಿ, ಕುರೇಹಳ್ಳಿ, ಮತ್ತಿಕೆರೆ, ಹಾಗಲಹಳ್ಳಿ ಮತ್ತು ಎಸ್.ಗುದ್ದರಮಣಹಳ್ಳಿ, ಹಾಗಲಹಳ್ಳಿ.

ತಾಂತ್ರಿಕ ದೋಷ ಪರ್ಪಲ್ ಲೈನ್ ಮೆಟ್ರೋ ಸಂಚಾರ ಸ್ಥಗಿತ :
ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದಾರೆ. ಮೆಟ್ರೋ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವಿನ ಪ್ರಮುಖ ಮಾರ್ಗದಲ್ಲಿ ಪರಿಣಾಮ ಬೀರಿತ್ತು. ತಾಂತ್ರಿಕ ಸಮಸ್ಯೆ ಪರಿಹಾರ ಆಗುವವರೆಗೂ ರೈಲು ಸಂಚಾರ ಸ್ಥಗಿತಗೊಳಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಇದನ್ನೂ ಓದಿ : 2019 ರಿಂದ 23 ರ ಅವಧಿಯ ಅಕ್ರಮ: ಬಿಜೆಪಿಗೆ ಬಿಬಿಎಂಪಿ ಕಂಟಕ
ಚಲ್ಲಘಟ್ಟ, ಎಂಜಿ ರಸ್ತೆ, ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಮೆಟ್ರೋ ಸೇವೆಗಳು ಲಭ್ಯವಿದೆ. ಆದರೆ, ನಮ್ಮ ಮೆಟ್ರೋದ ಗ್ರೀನ್ ಲೈನ್ ಎಂದಿನಂತೆ ಚಲಿಸುವಾಗ ತಾಂತ್ರಿಕ ಸಮಸ್ಯೆ ನೇರಳೆ ಮಾರ್ಗಕ್ಕೆ ಮಾತ್ರ ಪರಿಣಾಮ ಬೀರಿತು. ಕೆಲವು ಗಂಟೆಗಳ ನಂತರ ಸೇವೆಗಳನ್ನು ಪುನಃ ಸ್ಥಾಪಿಸಲಾಯಿತು.
Bangalore Power Cut Today These Places