ಬೆಂಗಳೂರು : ರಾಜ್ಯದಲ್ಲಿ ಆತಂಕ ಸೃಷ್ಟಿಸಿದ್ದ ಸೋಲದೇವನಹಳ್ಳಿ ಮಕ್ಕಳ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ನಾಪತ್ತೆಯಾದ 4 ಮಕ್ಕಳು ಮಂಗಳೂರಿನಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಕಂಗಾಲಾಗಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಾಪತ್ತೆಯಾಗಿದ್ದ ಅಮೃತವರ್ಷಿಣಿ, ರಾಯಲ್ ಸಿದ್ಧಾರ್ಥ, ಚಿಂತನ್, ಭೂಮಿ ಎಂಬ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರಿನಿಂದ ಸ್ಲಿಪರ್ ಬಸ್‌ನಲ್ಲಿ ಮಂಗಳೂರು ತಲುಪಿದ್ದರು ಎನ್ನಲಾಗಿದೆ. ಮಂಗಳೂರಿಗೆ ಬಂದಿಳಿದ ಮಕ್ಕಳ ಬಗ್ಗೆ ಅನುಮಾನಗೊಂಡ ಆಟೋ ರಿಕ್ಷಾ ಚಾಲಕರು, ಮಕ್ಕಳನ್ನು ಕರೆತಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ಬಿಟ್ಟಿದ್ದಾರೆ.
ಇದನ್ನೂ ಓದಿ: 7 Student Missing : ಪೋಷಕರೇ ಹುಷಾರ್ ! ವಾಕಿಂಗ್‌ಗೆ ತೆರಳಿದ್ದ 7 ಮಕ್ಕಳು ನಾಪತ್ತೆ
ಮಕ್ಕಳ ಕೈಗೆ ಮೊಬೈಲ್ ನೀಡುವ ಮುನ್ನ ಹುಷಾರ್ !
ನಾಪತ್ತೆಯಾಗಿದ್ದ ಮಕ್ಕಳು ಮೈ ಕ್ರಾಫ್ಟ್ ಎಂಬ ಗೇಮ್ ಗೆ ಈ ಮಕ್ಕಳು ಮಾರುಹೋಗಿದ್ರು. ಪೋಷಕರು ಓದಲು ಹೇಳುತ್ತಾರೆ ಎಂಬ ಕಾರಣಕ್ಕೆ ಈ ಮಕ್ಕಳು ಮನೆಯನ್ನು ಬಿಟ್ಟಿದ್ದರು. ಮಕ್ಕಳಿಗೆ ಓದಲು ಇಷ್ಟವಿಲ್ಲ. ಆಟವಾಡುತ್ತಲೇ ಸಾಧನೆ ಮಾಡುತ್ತೇವೆ ಎಂದು ಈ ಮಕ್ಕಳು ಮನೆಯಿಂದ ಕಣ್ಮರೆಯಾಗಿದ್ದರು.
4 ಮಕ್ಕಳು ಪ್ರತಿನಿತ್ಯವು ಗ್ರೂಪ್ ನಲ್ಲಿ ಮೈ ಕ್ರಾಫ್ಟ್ ಎಂಬ ಗೇಮ್ ಆಡುತ್ತಿದ್ದರು. ಪೋಷಕರು ಆನ್ ಲೈನ್ ಕ್ಲಾಸ್ ಗೆ ಮೊಬೈಲ್ ಕೊಟ್ರೆ ಗೇಮ್ ಆಡಿಕೊಂಡು ಗಂಟೆಗಟ್ಟಲೇ ಕೂರುತ್ತಿದ್ದರು. ಅಲ್ಲದೇ ಗೇಮ್ ಗಾಗಿ ಲವ್ಲಿ ಫ್ರಿನ್ಸ್ ಎಂಬ ಗ್ರೂಪ್ ಕ್ರಿಯೇಟ್ ಮಾಡಿದ್ದರು. ನಾಲ್ವರು ಒಬ್ಬರನ್ನೊಬ್ಬರು ಬಿಡದಷ್ಟು ಕ್ಲೋಸ್ ಆಗಿದ್ದರು. ಅಪಾರ್ಟ್ ಮೆಂಟನ್ ಉಳಿದ ಇನ್ನಾವುದೇ ಮಕ್ಕಳೊಂದಿಗೆ ಸೇರಲು ಈ ಮಕ್ಕಳು ಇಷ್ಟ ಪಡುತ್ತಿರಲಿಲ್ಲಾ. ರಾಯಲ್ ಗೇಮರ ನ ಮೀಟ್ ಮಾಡೋದೆ ಗೋಲ್ ಅಂತ ಹೇಳ್ತಿದ್ದ.
ಮೊದಲು ರೈಲು ಮೂಲಕ ಬೆಳಗಾವಿಗೆ ಹೋಗಿದ್ದೆವು. ಅಲ್ಲಿಂದ ಮೈಸೂರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗಿ ಸೋಮವಾರ ಸಂಜೆ ಮೆಜೆಸ್ಟಿಕ್‌ನಿಂದ ಮಂಗಳೂರಿಗೆ ಬಂದಿದ್ದೇವೆ,” ಎಂದು ನಾಲ್ವರು ಮಕ್ಕಳು ಪೊಲೀಸರು ಎದುರು ಹೇಳಿದ್ದಾರೆ. ಅಲ್ಲದೇ ಮನೆಯವರು ನಮ್ಮನ್ನು ದೂರ ಮಾಡಲು ನೋಡಿದರು. ನಮಗಿಂತ ಚಿಕ್ಕ ಮಕ್ಕಳ ಮುಂದೆ ನಮ್ಮನ್ನು ಬೈಯುತ್ತಾರೆ. ಆ ಕಾರಣದಿಂದಾಗಿ ಮನೆ ಬಿಟ್ಟು ಬರಬೇಕಾಯಿತ್ತು. ಎಂದು ಚಿಕ್ಕ ಬಾಲಕಿ ಹೇಳಿಕೆಯನ್ನು ನೀಡಿದ್ದಾಳೆ.
ಇದನ್ನೂ ಓದಿ; ಅದೃಷ್ಟದ ಮನೆಯಲ್ಲಿ BSY ಆಪ್ತನಿಗೆ ಐಟಿ ಡ್ರಿಲ್ : ಅರವಿಂದ ಮನೆಯಲ್ಲಿ ಶೋಧ ಕಾರ್ಯ
ಮಕ್ಕಳ ವಿಚಾರಣೆ ಮುಗಿಸಿ ಮಾತನಾಡಿದ ಡಿಸಿಪಿ ಹರಿರಾಂ ಶಂಕರ್ ಈ ನಾಲ್ಕು ಜನ ಮಕ್ಕಳು ಪ್ರತಿದಿನ ಒಟ್ಟಿಗೆ ಆಡುವುದಕ್ಕೆ ಹೋಗುತ್ತಿದ್ದರು. ಆದರೆ ಇವರ ಸ್ನೇಹ ಮನೆಯವರಿಗೆ ಹಿಡಿಸಿರಲಿಲ್ಲ. ಹೀಗಾಗಿ ಮಕ್ಕಳಿಗೆ ಪೋಷಕರು ತಮ್ಮನ್ನು ಹಾಸ್ಟೆಲ್‌ಗೆ ಹಾಕುವ ಭಯವಾಗಿದೆ, ಈ ಕಾರಣದಿಂದ ಮನೆ ಬಿಟ್ಟು ಬಂದಿದ್ದಾರೆ ಎಂದು ತಿಳಿಸಿದರು.
(Bengaluru children’s disappearance case ends happily: Children My Craft game obsession!)