ಸೋಮವಾರ, ಏಪ್ರಿಲ್ 28, 2025
HomekarnatakaBBMP News Advertisement proposal : ಆದಾಯ ಗಳಿಕೆಗೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್: ಜಾಹೀರಾತು ಬೈಲಾ...

BBMP News Advertisement proposal : ಆದಾಯ ಗಳಿಕೆಗೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್: ಜಾಹೀರಾತು ಬೈಲಾ ತಿದ್ದುಪಡಿಗೆ ಸಿದ್ಧತೆ

- Advertisement -

ಬೆಂಗಳೂರು : ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ನಡೆದಿದೆ. ಹೀಗಾಗಿ ಚುನಾವಣೆಗೆ ಪೂರಕವಾದ ಬೆಳವಣಿಗೆಗಳು ಆರಂಭವಾಗಿದೆ. ಇಷ್ಟು ದಿನಗಳ ಕಾಲ ಕೇವಲ ಕಾಗದದಲ್ಲಿ ಜಾಹೀರಾತು ಫ್ಲೆಕ್ಸ್, ಕಟೌಟ್ ನಿಷೇಧಿಸಿದ್ದ ಬಿಬಿಎಂಪಿ ಈಗ ಮತ್ತೊಮ್ಮೆ ಹೊಸ ಜಾಹೀರಾತು ನಿಯಮ ಜಾರಿಗೆ (BBMP News Advertisement proposal) ಚಿಂತನೆ ನಡೆಸಿದ್ದು, ಈಗಾಗಲೇ ಜಾಹೀರಾತು ಬೈಲಾ ತಿದ್ದುಪಡಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಹೌದು ಚುನಾವಣೆ ಹೊತ್ತಿನಲ್ಲೇ ನಗರದಲ್ಲಿ ಫ್ಲೆಕ್ಸ್, ಕಟೌಟ್, ಬ್ಯಾನರ್, ಬಟ್ಟಿಂಗ್ಸ್ ರಾರಾಜಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಬಿಬಿಎಂಪಿ ಜಾಹೀರಾತು ಬೈಲಾದಲ್ಲಿ ತಿದ್ದುಪಡಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಚುನಾವಣೆ ಹೊಸ್ತಿಲಲ್ಲೇ ವಿವಾದಿತ ಜಾಹೀರಾತು ಪಾಲಿಸಿ ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಪಾಲಿಸಿಯಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಿ ಹೊಸ ರೂಪದಲ್ಲಿ ಬಿಬಿಎಂಪಿ ಜಾಹೀರಾತು ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಮೂಲಗಳ ಮಾಹಿತಿ ಪ್ರಕಾರ ಅಧಿಕೃತ ಹಾಗೂ ಅನಧಿಕೃತ ಎಂಬ ಮಾನದಂಡದಲ್ಲಿ ಪಾಲಿಕೆ ಜಾಹೀರಾತು ಬೈಲಾ ತಿದ್ದುಪಡಿಯಾಗಲಿದೆ. ನಮ್ಮ ಮೆಟ್ರೋಗೂ ವಿಶೇಷ ಅನುಮತಿ ನೀಡುವ ಬಗ್ಗೆ ಬಿಬಿಎಂಪಿಯಿಂದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದ್ದು, ಈಗಾಗಲೇ ನಮ್ಮ ಮೆಟ್ರೋ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ಕೋರಿ ಪಾಲಿಕೆಗೆ ಪತ್ರ ಬರೆದಿರುವುದನ್ನು ಬಿಬಿಎಂಪಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.

BBMP News Advertisement proposal : ಬಿಬಿಎಂಪಿ ಹೊಸ ಜಾಹೀರಾತು ಪಾಲಿಸಿಯಲ್ಲಿ ಏನಿದೆ ?

• ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ಬೈಲಾದಲ್ಲಿ ತಿದ್ದುಪಡಿ
• ಬಿಬಿಎಂಪಿ ಒಡೆತನದ ಜಾಗಗಳಲ್ಲಿ ಮಾತ್ರ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಬೇಕು
• ಜಾಹೀರಾತು ಪ್ರದರ್ಶನದಿಂದ ಆದಾಯ ಹೆಚ್ಚಿಸಿಕೊಳ್ಳಲು ವಲಯಗಳ ನಿಗದಿ
• ಬಿಬಿಎಂಪಿ ವಲಯ ಅನುಸಾರವಾಗಿ ಪ್ರತ್ಯೇಕ ದರ ನಿಗದಿ ಮಾಡಬೇಕು
• ಅನಧಿಕೃತ ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ವಲಯ ಮಟ್ಟದಲ್ಲಿ ಕಣ್ಗಾವಲು ತಂಡ
• ಪ್ರತಿ ವಲಯದಲ್ಲಿ ಪ್ರತಿ ತಿಂಗಳು ತಲಾ 10 ಪ್ರಕರಣ ದಾಖಲಿಸುವ ಗುರಿ
• ಹಿಂದಿನ ಜಾಹೀರಾತು ದರ ಪಟ್ಟಿ ಪರಿಷ್ಕರಣೆ ಹಾಗೂ ಟೆಂಡರ್ ನಿಯಮದಲ್ಲೂ ಬದಲಾವಣೆ

ಈ ಎಲ್ಲ ನಿಯಮಗಳನ್ನು ಜಾರಿಗೆ ತರಲು ಬಿಬಿಎಂಪಿ ಸರ್ಕಾರದ ಅನುಮತಿ ಕೋರಿದೆ. ಚುನಾವಣೆ ಹೊತ್ತಿನಲ್ಲಿ ಜಾಹೀರಾತು ನಿಯಮ ಜಾರಿಗೆ ತಂದು ಒಂದಿಷ್ಟು ಆದಾಯ ಗಳಿಸೋದು ಬಿಬಿಎಂಪಿ ಲೆಕ್ಕಾಚಾರವಾಗಿದೆ. ಈಗಾಗಲೇ ನಗರದಾದ್ಯಂತ ಅನುಮತಿ ಇಲ್ಲದೇ ಇದ್ದರೂ ಫ್ಲೆಕ್ಸ್, ಬೋರ್ಡ್ , ಬಂಟಿಂಗ್ಸ್ ಹಾವಳಿ ಜೋರಾಗಿದ್ದು, ಇನ್ನು ಅನುಮತಿ ಬಳಿಕ ನಗರವೆಲ್ಲ ಫ್ಲೆಕ್ಸ್ ಮಯವಾದ್ರೂ ಅಚ್ಚರಿಯೇನಿಲ್ಲ.

ಇದನ್ನೂ ಓದಿ : Traffic Rules Violation : ಟ್ರಾಫಿಕ್ ರೂಲ್ಸ್ ಬ್ರೇಕ್ ನಿಂದ 25 ಕೋಟಿ ಸಂಗ್ರಹ: ಡಿಸ್ಕೌಂಟ್ ಅವಧಿ ವಿಸ್ತರಣೆಗೆ ಚಿಂತನೆ

ಇದನ್ನೂ ಓದಿ : Next CM of Karnataka : ಬೊಮ್ಮಾಯಿ ಬಳಿಕ ಬಿ.ಎಲ್.ಸಂತೋಷ್ ಸಿಎಂ: ನಿಜವಾಗುತ್ತಾ ಎಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಮಾತು

BBMP news advertisement proposal submission to Karnataka Govt

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular