ಬೆಂಗಳೂರು : ಈಗಾಗಲೇ ಕೊರೋನಾ, ಬೆಲೆ ಏರಿಕೆ, ಉದ್ಯೋಗ ಖಡಿತ ಸೇರಿದಂತೆ ನಾನಾ ಸಮಸ್ಯೆಯಿಂದ ಕಂಗಲಾಗಿರುವ ರಾಜಧಾನಿ ಬೆಂಗಳೂರಗರಿಗೆ ಬಿಬಿಎಂಪಿ ಯಿಂದ ಮತ್ತೊಂದು ಶಾಕ್ ನೀಡಲು ಸಿದ್ಧತೆ ನಡೆಸಿದೆ. ಇನ್ಮುಂದೆ ನಿಮ್ಮ ಮನೆಯ ಕಸವೇ ನಿಮ್ಮ ಜೇಬಿಗೆ ಕತ್ತರಿ ಹಾಕಲಿದ್ದು ಕಸವಿಲೇವಾರಿಗೂ (Garbage Cess ) ನೀವು ವಾಟರ್, ಕರೆಂಟ್ ಬಿಲ್ ಮಾದರಿಯಲ್ಲೇ ಹಣ ಕಟ್ಟೋ ದಿನಗಳು ಹತ್ತಿರದಲ್ಲಿವೆ.
ಬೆಂಗಳೂರು ಬದುಕನ್ನು ಮತ್ತಷ್ಟು ದುಬಾರಿಯಾಗಿಸಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ವಿದ್ಯುತ್ ಬಿಲ್ ಮೂಲಕ ಕಸ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ ನಿರ್ಧರಿಸಿದೆ.
ಕರೆಂಟ್ ಬಿಲ್ ಜೊತೆಗೆ ಗಾರ್ಬೇಜ್ ಬಿಲ್ ಸಹ ಪಾವತಿ ಮಾಡಲೇಬೇಕೆಂಬ ನಿಯಮ ಜಾರಿಗೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಸದ್ಯ ಪ್ರಸ್ತಾಪ ಸರ್ಕಾರದ ಮುಂದಿದ್ದು ಒಮ್ಮೆ ಸರ್ಕಾರ ಅಸ್ತು ಎಂದಲ್ಲಿ ಸದ್ಯದಲ್ಲೇ ಸಿಲಿಕಾನ್ ಸಿಟಿ ಜನರ ಮನೆಗೆ ಗಾರ್ಬೇಜ್ ಬಿಲ್ ಕೂಡಾ ಬರಲಿದೆ.
ಗಾರ್ಬೇಜ್ ಟ್ಯಾಕ್ಸ್ ಕಟ್ಟಿಸಿಕೊಳ್ಳಲು ಬಿಬಿಎಂಪಿಯಿಂದ ಮೆಗಾ ಪ್ಲ್ಯಾನ್ ಜಾರಿ ಮಾಡಲು ಸಿದ್ದವಾಗಿದ್ದು, ವಿದ್ಯುತ್ ಬಿಲ್ ಗೆ ಅನುಗುಣವಾಗಿ ಕಸ ನಿರ್ವಹಣಾ ಸೆಸ್ ಸಂಗ್ರಹಕ್ಕೆ ಅನುಮತಿ ಕೋರಿ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2011ರಿಂದ ಆಸ್ತಿ ತೆರಿಗೆ ಮೇಲೆ ಶೇ. 19 ರಷ್ಟು ಸೆಸ್ ಸಂಗ್ರಹಿಸಲಾಗುತಿತ್ತು.ಆದರೆ ಇದು ಕಸ ನಿರ್ವಹಣಾ ವೆಚ್ಚದ ಶೇ. 15 ರಷ್ಟು ಸಂಗ್ರಹಣೆಯಾಗಲಿಲ್ಲ.ಈ ಹಿನ್ನಲೆಯಲ್ಲಿ ವಿದ್ಯುತ್ ಬಿಲ್ ಮೂಲಕ ಪ್ರತಿ ತಿಂಗಳು ಸಂಗ್ರಹಿಸಲು ನಿರ್ಧಾರಿಸಿದ್ದು , ಕಸನಿರ್ವಹಣಾ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ ಬೆಸ್ಕಾಂ ನೆರವು ಕೋರಲಿದೆ.
ಗಾರ್ಬೇಜ್ ಬಿಲ್ ಹೇಗೆ ಜಾರಿಯಾಗುತ್ತೆ..? ಅನ್ನೋದನ್ನು ಗಮನಿಸೋದಾದರೇ, ಕರೆಂಟ್ ಬಿಲ್ ಆಧಾರದ ಮೇಲೆ ಗಾರ್ಬೇಜ್ ಬಿಲ್ ನಿಗದಿ ಮಾಡಲಾಗುತ್ತದೆ.ನಗರದ ಪ್ರತೀ ಮನೆ ಮನೆಯಲ್ಲೂ ಕಸ ನಿರ್ವಹಣೆಯಿಂದ ಬಿಬಿಎಂಪಿಗೆ ಕೋಟ್ಯಾಂತರ ರೂ ಖರ್ಚಾಗ್ತಿದೆ. ಹೀಗಾಗಿ ನಿರ್ವಹಣೆ ಆಧಾಯ ಕ್ರೂಢಿಕರಣಕ್ಕೆ ಹೊಸ ಪ್ಲ್ಯಾನ್ ಮಾಡಿದೆ. ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ರೆ ಬಿಬಿಎಂಪಿಗೆ ವರ್ಷಕ್ಕೆ 40ಕೋಟಿ ಆದಾಯದ ನಿರೀಕ್ಷೆಯಿದ್ದು ಬರುವ ಆದಾಯದಲ್ಲಿ ಗುತ್ತಿಗೆದಾರರ ಬಿಲ್, ಪೌರಕಾರ್ಮಿಕರ ಸಂಬಳಕ್ಕೆ ಅನುಕೂಲವಾಗಲಿದೆ ಅನ್ನೋದು ಬಿಬಿಎಂಪಿ ಪ್ಲ್ಯಾನ್. ಹೀಗಾಗಿ ಬೆಂಗಳೂರು ಜನರ ಜೇಬಿಗೆ ಕತ್ತರಿ ಹಾಕಲು ಪ್ಲ್ಯಾನ್ ರೂಪಿಸಿರೋ ಬಿಬಿಎಂಪಿ ಗೃಹ ತ್ಯಾಜ್ಯ ಉತ್ಪಾದಕರಿಗೆ ವಿದ್ಯುತ್ ಬಿಲ್ ಆಧರಿಸಿ ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ
ವಿದ್ಯುತ್ ಬಿಲ್ – ಕಸ ಸೆಸ್
200 ರೂ. ವರೆಗೆ 30 ರೂ.
200-500 ರೂ – 60 ರೂ.
500 – 1000 ರೂ – 100 ರೂ.
1001 – 2000 ರೂ – 200 ರೂ.
2001 – 3000 ರೂ – 350 ರೂ.
3000 ರೂ.ಗಿಂತ ಹೆಚ್ಚು 500 ರೂ.
ಈ ರೀತಿ ಮಾಸಿಕ ಸೆಸ್ ಸಂಗ್ರಹದ ಮೂಲಕ 48.76 ಕೋಟಿ ರೂ. ಸಂಗ್ರಹವಾಗುವ ಅಂದಾಜಿದ್ದು ಇನ್ನು ವಾಣಿಜ್ಯ ತ್ಯಾಜ್ಯ ಉತ್ಪಾದಕರು ಪ್ರಸ್ತಾಪಿಸಲಾದ ಬಿಲ್ ಇಂತಿದೆ
ವಿದ್ಯುತ್ ಬಿಲ್ – ಕಸ ಸೆಸ್
200 ರೂ. ವರೆಗೆ – 75ರೂ.
200-500 ರೂ – 150 ರೂ.
500 – 1000 ರೂ – 300 ರೂ.
1001 – 2000 ರೂ – 600 ರೂ.
2001 – 3000 ರೂ – 800 ರೂ.
3000 ರೂ.ಗಿಂತ ಹೆಚ್ಚು – 1200 ರೂ.
ಒಟ್ಟಿನಲ್ಲಿ ಈ ರೀತಿ ಮಾಸಿಕ ಸೆಸ್ ಸಂಗ್ರಹದ ಮೂಲಕ ವಾಣಿಜ್ಯ ಉತ್ಪಾದಕರಿಂದ 23.93 ಕೋಟಿ ರೂ. ಸಂಗ್ರಹದ ಗುರಿ ಹೊಂದಿದೆ ಬಿಬಿಎಂಪಿ. ಒಟ್ಟಿನಲ್ಲಿ ಬೆಂಗಳೂರು ದುಡ್ಡಿದ್ದರೇ ದುನಿಯಾ ಎಂಬುದನ್ನು ನೆನಪಿಸುವ ದಿನ ದೂರವಿಲ್ಲ.
ಇದನ್ನೂ ಓದಿ : ಎರಡನೆ ಡೋಸ್ ಲಸಿಕೆ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ ರಾಜ್ಯದ ಈ ಜಿಲ್ಲೆ
ಇದನ್ನೂ ಓದಿ : ಬಿಬಿಎಂಪಿ ಚುನಾವಣೆಗೆ ಭರದ ಸಿದ್ಧತೆ: ಕಟ್ಟಡ ನವೀಕರಣಕ್ಕೆ ಪ್ಲ್ಯಾನ್ ಫೈನಲ್
( BBMP plans to charge garbage cess to residents of Bengaluru )