ಭಾನುವಾರ, ಏಪ್ರಿಲ್ 27, 2025
HomekarnatakaBengaluru rain death : ಬೆಂಗಳೂರಿನಲ್ಲಿ ಮಳೆಯ ಮರಣ ಮೃದಂಗ : ನೀರುತುಂಬಿದ ರಸ್ತೆ, ಕಂಬದಲ್ಲಿ...

Bengaluru rain death : ಬೆಂಗಳೂರಿನಲ್ಲಿ ಮಳೆಯ ಮರಣ ಮೃದಂಗ : ನೀರುತುಂಬಿದ ರಸ್ತೆ, ಕಂಬದಲ್ಲಿ ಹರಿದ ವಿದ್ಯುತ್ ಗೆ ಯುವತಿ ಸಾವು

- Advertisement -

ಬೆಂಗಳೂರು : ಸಿಲಿಕಾನ್‌ಸಿಟಿ ಬೆಂಗಳೂರಲ್ಲಿ ಸುರಿಯುತ್ತಿರುವ ರಣ ಮಳೆಗೆ ಬಾಳಿ ಬದುಕಬೇಕಿದ್ದ ಯುವತಿಯೊರ್ವಳು (Bengaluru rain death) ಬಲಿಯಾಗಿದ್ದಾಳೆ. ಮಾರತ್ ಹಳ್ಳಿಯಿಂದ ವರ್ತೂರು ಕೋಡಿ ಬಳಿಯ ಸಿದ್ಧಾಪುರದ ನಿವಾಸಿ ಅಖಿಲಾ ಎಂಬ ಯುವತಿ ಬೆಂಗಳೂರಿನ ರಸ್ತೆ ಅವ್ಯವಸ್ಥೆ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತಿದ್ದು ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ ಮಾರತ್ ಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರ ನಿವಾಸಿಯಾಗಿರೋ 23 ವರ್ಷದ ಅಖಿಲಾ ಸೋಮವಾರ ರಾತ್ರಿ 9.30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಸಿದ್ಧಾಪುರ ಬಳಿ ಇರುವ ಮಯೂರ ಬೇಕರಿ ಬಳಿ ರಸ್ತೆ ಮೇಲೆ ಮಂಡಿಯುದ್ದಕ್ಕೆ ನೀರು ನಿಂತಿತ್ತು.

ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ಹೊರಟಿದ್ದು,ರಾತ್ರಿ 9.30 ಆಗಿರೋದರಿಂದ ಅಖಿಲಾ ಅದೇ ಮಳೆಯಲ್ಲೇ ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಮನೆಗೆ ಹೋಗೋ ಪ್ರಯತ್ನ ಮಾಡಿದ್ದಾಳೆ. ಈ ವೇಳೆ ರಸ್ತೆಯಲ್ಲಿ ನೀರು ಹೆಚ್ಚಿದ್ದರಿಂದ ಸ್ಕೂಟರ್ ಆಫ್ ಆಗಿ ಬೀಳುವಂತಾಗಿದೆ. ಈ ಸಮಯದಲ್ಲಿ,ಸಹಾಯಕ್ಕೆ ಬಲ ಭಾಗದಲ್ಲೇ ಇದ್ದ ಎಲೆಕ್ಟ್ರಿಕಲ್ ಪೋಲ್ ಹಿಡಿದುಕೊಂಡಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಿದೆ.

ವಿದ್ಯುತ್ ಕಂಬಗಳಲ್ಲಿ ವೈರ್ ಗಳನ್ನ ಸರಿಯಾದ ನಿರ್ವಹಣೆ ಮಾಡದಿರೋ ಬೆಸ್ಕಾಂನಿಂದಾಗಿ‌ ನಗರದ ಹಲವು ವಿದ್ಯುತ್ ಕಂಬಗಳು ವಿದ್ಯುತ್ ಪ್ರವಹಿಸುವ ದುಸ್ಥಿತಿಯಲ್ಲಿವೆ.ಹೀಗಾಗಿ ಅಖಿಲಾ ಸಹಾಯಕ್ಕಾಗಿ ಹಿಡಿದುಕೊಂಡ ಪೋಲ್ ಕೂಡ ಶಾಕ್ ಆಗಿದ್ದರಿಂದ ಅಖಿಲಾ ಕೆಳಕ್ಕೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ಯುವತಿಯನ್ನ ಸ್ಥಳೀಯರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಖಿಲಾ ಕೊನೆಯುಸಿರೆಳೆದಿದ್ದಾಳೆ.

ಸದ್ಯ ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನಯ ವೈದೇಹಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಅಖಿಲಾ ಸಾವಿಗೆ ಹದಗೆಟ್ಟ ರಸ್ತೆ ಹಾಗೂ ಜಾಹಿರಾತು ಫಲಕದಿಂದ ಬಂದ ತಂತಿಯಿಂದ ವಿದ್ಯುತ್ ತಗುಲಿದ್ದೇ ಕಾರಣ ಎನ್ನಲಾಗ್ತಿದೆ.

ನಿನ್ನೆ ರಾತ್ರಿ ಸುರಿದ ಮಳೆಗೆ ರಸ್ತೆ ಜಲಾವೃತಗೊಂಡಿತ್ತು ಈ ವೇಳೆ ಸ್ಕೂಟರ್ ನಿಂದ ಬೀಳುವುದನ್ನು ತಪ್ಪಿಸಿಕೊಳ್ಳಲು ಅಖಿಲಾ ಪ್ರಯತ್ನಿಸಿದ್ದಾರೆ. ಬಳಿಕ ಆಯತಪ್ಪಿ ಬಿದ್ದ ಅಖಿಲ ಎದ್ದು ನಿಲ್ಲಲ್ಲು ಜಾಹೀರಾತು ಫಲಕ ಹಿಡಿದಿದ್ದಾರೆ.ಅಲ್ಲಿಂದ ವಿದ್ಯುತ್ ತಗುಲಿ ಮತ್ತೆ ಕೆಳಗೆ ಬಿದ್ದಿದ್ದಾರೆ.ಸುಮಾರು 15 ನಿಮಿಷಗಳ ಕಾಲ ಸ್ಥಳೀಯರು ಪೊಲೀಸ್, ಆ್ಯಂಬುಲೆನ್ಸ್ ಗೆ ಕರೆ ಮಾಡಿ ಕಾಯುತ್ತಿದ್ದರು. ಈ ವೇಳೆ ಆಕ್ಸಿಜನ್ ಸಿಗದೆ ಯುವತಿ ಅಖಿಲ ಸ್ಥಳದಲ್ಲೇ ಪರದಾಡಿದ್ದರು. ಯಾರೂ ಕೂಡ ಸ್ಪಂದಿಸಲಿಲ್ಲ, ನಂತರ ಯುವಕರು ಎತ್ತಿಕೊಂಡು ಸ್ವಲ್ಪ ದೂರ ಇರುವ ಸಣ್ಣ ಆಸ್ಪತ್ರೆಗೆ ಸೇರಿಸಿದ್ದಾರೆ‌. ದುಡಿಯುವ ಮಗಳನ್ನು ಕಳೆದುಕೊಂಡ ಅಖಿಲಾ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.

ಇದನ್ನೂ ಓದಿ : India biggest car thief arrested: ಭಾರತದ ಅತೀ ದೊಡ್ಡ ಕಾರು ಕಳ್ಳನ ಬಂಧನ : 5000 ಕಾರು ಕಳ್ಳನಿಗೆ 3 ಪತ್ನಿಯರು

ಇದನ್ನೂ ಓದಿ : Student delivers baby : ಶಾಲಾ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ :10ನೇ ತರಗತಿ ವಿದ್ಯಾರ್ಥಿ ಬಂಧನ

Bengaluru rain death : Girls Akhila dies of electrocution her scooty skids waterlogged road

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular