ಶನಿವಾರ, ಏಪ್ರಿಲ್ 26, 2025
Homekarnatakaರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ : ಇಬ್ಬರು ಶಂಕಿತ ಉಗ್ರರ ಬಂಧನ , ಇಲ್ಲಿದೆ...

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ : ಇಬ್ಬರು ಶಂಕಿತ ಉಗ್ರರ ಬಂಧನ , ಇಲ್ಲಿದೆ ರೋಚಕ ಸ್ಟೋರಿ

- Advertisement -

Bengaluru Rameshwaram Cafe blast Case  : ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದ ರಾಮೇಶ್ವರಂ ಕಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಇಬ್ಬರು ಶಂಕಿತ ಉಗ್ರರರನ್ನು ಬಂಧಿಸಿದ್ದಾರೆ. ಪಶ್ವಿಮ ಬಂಗಾಲದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಅರೆಸ್ಟ್‌ ಮಾಡಿರುವ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ ಎನ್ನಲಾಗುತ್ತಿದೆ.

ಮುಸಾವೀರ್ ಹಾಗೂ ಅಬ್ದುಲ್ ಮತೀನ್ ತಾಹ ಎಂಬವರೇ ಬಂಧಿತ ಶಂಕಿತ ಉಗ್ರರು. 2020 ರಿಂದಲೂ ಮುಸಾವೀರ್ ಹಾಗೂ ಅಬ್ದುಲ್ ಮತೀನ್ ತಾಹ ಎನ್ ಐ ಎ ವಾಟೆಂಡ್ ಲೀಸ್ಟ್ ನಲ್ಲಿದ್ದ ಉಗ್ರರಾಗಿದ್ದಾರೆ. 2020 ರಲ್ಲಿ ನಾಪತ್ತೆ ಆಗಿದ್ದವರು 2024 ರಲ್ಲಿ ರಾಮೇಶ್ವರಂ ಕಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದರು.

ರಾಮೇಶ್ವರಂ ಕಫೆ ಬ್ಲಾಸ್ಟ್‌ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ತನಿಖೆಯನ್ನು ಕೈಗೊಂಡಿದ್ದರು. ಈ ವೇಳೆಯಲ್ಲಿ ಮುಸಾವೀರ್‌ ಬಾಂಬ್‌ ಬ್ಲಾಸ್ಟ್‌ನಲ್ಲಿ ಬಾಗಿಯಾಗಿರುವುದು ಸಿಸಿ ಕ್ಯಾಮೆರಾ ದೃಶ್ಯಾವಳಿಯ ಮೂಲಕ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲಿನ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು.

ದಾಳಿಯ ವೇಳೆಯಲ್ಲಿ ರಾಮೇಶ್ವರಂ ಬ್ಲಾಸ್ಟ್‌ನ ಮಾಸ್ಟರ್‌ ಮೈಂಡ್‌ ಮಾಜ್‌ ಮುನೀರ್‌ ಅನ್ನೋದು ತಿಳಿದು ಬಂದಿತ್ತು. ಹೀಗಾಗಿ ಜ್ ಮುನೀರ್ ನನ್ನು ವಶಕ್ಕೆ ಪಡೆದು ಎನ್‌ಐಎ ವಿಚಾರಣೆಯನ್ನು ನಡೆಸಿತ್ತು. ಈ ವೇಳೆಯಲ್ಲಿ ಮುಸಾವೀರ್ ಸ್ಪೋಟಕ್ಕೆ ಬಳಸಿದ್ದ ಬಾಂಬ್‌ ಸಿದ್ದಪಡಿಸಿದ್ದ ಅನ್ನೋದು ಬಯಲಾಗಿತ್ತು. ಬೆಂಗಳೂರಿಲ್ಲಿ ಸ್ಫೋಟ ಬಳಿಕ ಪಶ್ಚಿಮ ಬಂಗಾಳದಲ್ಲಿ ತಲೆಮರಿಸಿಕೊಂಡಿದ್ದರು.

ಮಾಜ್ ಮುನೀರ್ ರಾಮೇಶ್ವರಂ ಸ್ಪೋಟಕ್ಕೆ ಯೋಜನೆ ರೂಪಿಸಿದ್ದ. ಅಲ್ಲದೇ ಮುನೀರ್‌ ಉಸ್ತುವಾರಿಯಲ್ಲಿಯೇ ಅಬ್ದುಲ್‌ ಮತೀನ್‌ ತಾಹ ಮುಸಾವೀರ್ ನ ಬಿಟ್ಟು ಬಾಂಬ್‌ ಸ್ಪೋಟ ಮಾಡಿಸಿದ್ದ. ಇದೀಗ ಕೇಂದ್ರ ತನಿಖಾ ತಂಡ ಹಾಗೂ ಪಶ್ಚಿಮ ಬಂಗಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆಯನ್ನು ತೀವ್ರಗೊಳಿಸಿವೆ.

Bengaluru Rameshwaram Cafe blast Case mastermind, bomber arrested NIA from Bengal
Image Credit to Original Source

ಕರ್ನಾಟಕ, ಕೇರಳಾ, ಪಶ್ಚಿಮ ಬಂಗಾಳ, ತೆಲಂಗಾಣ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆಯನ್ನು ಮಾಡಿದ್ದವು. ಈ ಶಂಕಿತ ಉಗ್ರರು ಪಶ್ಚಿಮ‌ ಬಂಗಾಳದಲ್ಲಿ ನಕಲಿ ದಾಖಲೆಗಳನ್ನು ಬಳಸಿ ವಾಸವಾಗಿದ್ದರು ಅನ್ನೋದು ಬಯಲಾಗಿದೆ. ಮನೆ ಬಾಡಿಗೆಗೆ ಪಡೆಯುವ ವೇಳೆಯಲ್ಲಿಯೂ ನಕಲಿ ದಾಖಲೆಯನ್ನೇ ಬಳಸಿಕೊಂಡಿದ್ದರು ಅನ್ನೋದು ತನಿಖೆಯ ವೇಳೆಯಲ್ಲಿ ಬಯಲಾಗಿದೆ.

ಇಬ್ಬರು ಶಂಕಿತ ಉಗ್ರರು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡು ವಾಸವಾಗಿದ್ದು, ಸದ್ಯ ಇಬ್ಬರನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ಬೆಂಗಳೂರಿಗೆ ಬಂದ ನಂತರದಲ್ಲಿ ಇಬ್ಬರನ್ನೂ ಇನ್ನಷ್ಟು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ. ಅಲ್ಲದೇ ಈ ಶಂಕಿತ ಉಗ್ರರು ಬೇರೆ ಯಾವುದಾದ್ರೂ ಸ್ಪೋಟದಲ್ಲಿ ಭಾಗಿಯಾಗಿದ್ದಾರಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಕಳೆದ ಒಂದು ವರ್ಷದ ಹಿಂದೆ ಮಂಗಳೂರಲ್ಲಿ ಕುಕ್ಕರ್‌ ಬ್ಲಾಸ್ಟ್‌ ನಡೆಸಿದ್ದು ಈ ಸ್ಪೋಟಕ್ಕೂ ರಾಮೇಶ್ವರಂ ಕಫೆ ಸ್ಪೋಟಕ್ಕೂ ಸಂಬಂಧ ಇದೆಯಾ ಅನ್ನೋದು ತನಿಖೆಯ ನಂತರವಷ್ಟೇ ತಿಳಿದು ಬರಬೇಕಾಗಿದೆ.

Bengaluru Rameshwaram Cafe blast Case mastermind, bomber arrested NIA from Bengal

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular