ಬೆಂಗಳೂರು : ನಗರದ ನಾಲ್ಕು ಪ್ರತಿಷ್ಠಿತ ಶಾಲೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ (bomb threat email)ನೀಡಲಾಗಿದೆ. ಅನಾಮಧೇಯ ವ್ಯಕ್ತಿಗಳಿಂದ ಈ ರೀತಿಯ ಬೆದರಿಕೆ ಬಂದಿದ್ದು ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆಯೇ ಆತಂಕಕ್ಕೊಳಗಾದ ಶಾಲೆಯ ಶಿಕ್ಷಕರು, ಭೋದಕೇತರ ಸಿಬ್ಬಂದಿ, ಮಕ್ಕಳು ಹಾಗೂ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹುಸ್ಕೂರಿನ ಎಬಿನೈಜರ್ ಇಂಟರ್ನ್ಯಾಷನಲ್ ಶಾಲೆ, ವಿನ್ಸೆಂಟ್ ಪೆಲ್ಲೊಟಿ ಶಾಲೆ, ಸೂಳಕುಂಟೆ ಬಳಿಯ ಡೆಲ್ಲಿ ಪಬ್ಲಿಕ್ ಶಾಲೆ ಸೇರಿದಂತೆ ಒಟ್ಟು ನಾಲ್ಕು ಶಾಲೆಗಳಿಗೆ ಈ ರೀತಿ ಬಾಂಬ್ ಬೆದರಿಕೆ ಕರೆ ನೀಡಲಾಗಿದೆ.
ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಿದ ಶಾಲೆಗಳಿಗೆ ಬಾಂಬ್ ಸ್ಕ್ವಾಡ್ ಸಮೇತ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಮಾಹಿತಿಯನ್ನು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಮಲ್ ಪಂತ್, ಬೆದರಿಕೆ ಕರೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಶಾಲೆಗಳಿಂದ ಮಕ್ಕಳು ಹಾಗೂ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ. ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳ ಬಾಂಬ್ ಕರೆ ಬಂದ ಶಾಲೆಗಳಲ್ಲಿ ಪರಿಶೀಲನೆ ನಡೆಸುತ್ತಿದೆ. ಈ ಬಗ್ಗೆ ಬಾಂಬ್ ಇರುವ ಬಗ್ಗೆ ಯಾವುದೇ ಸುಳಿವು ನಮಗೆ ಲಭ್ಯವಾಗಿಲ್ಲ. . ಈ ಬಗ್ಗೆ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಶೀಘ್ರದಲ್ಲಿಯೇ ಬಾಂಬ್ ಬೆದರಿಕೆ ಕರೆಯ ಸತ್ಯಾಂಶವನ್ನು ಬಯಲಿಗೆಳೆಯುವುದಾಗಿ ಭರವಸೆ ನೀಡಿದ್ದಾರೆ.
ಇದನ್ನು ಓದಿ : BJ Puttaswamy : ಬಿ.ಜೆ.ಪುಟ್ಟಸ್ವಾಮಿ ಇನ್ನೂ ಗಾಣಿಗರ ಮಹಾಸ್ವಾಮಿ : ಇಳಿವಯಸ್ಸಿನಲ್ಲಿ ಸನ್ಯಾಸದ ಮೊರೆ ಹೋದ ಮಾಜಿ ಸಚಿವ
ಇದನ್ನೂ ಓದಿ : kannada must : ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಡೆಗೆ ಹಿನ್ನಡೆ